ಮಣಿಕಂಠ ರಾಠೋಡ್ ಸೋದರನ ರೈಸ್‌ಮಿಲ್‌ನಿಂದ 700 ಕ್ವಿಂಟಾಲ್ ಅಕ್ಕಿ ವಶಕ್ಕೆ!
Laxminews 24x7
ಡಿಸೆಂಬರ್ 31, 2023
ರಾಜಕೀಯ, ರಾಜ್ಯ, ರಾಷ್ಟ್ರೀಯ
143 Views
ಯಾದಗಿರಿ : ಶಹಾಪುರದಲ್ಲಿನ ಪಡಿತರ ಅಕ್ಕಿ (Ration rice)ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್(Manikanth Rathod) ಸೋದರನಿಗೆ ಸೇರಿದ್ದ ರೈಸ್ ಮಿಲ್‌ನಿಂದ 700 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಗುರುಮಠಕಲ್‌ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ್ ರೈಸ್‌ಮಿಲ್ ಮೇಲೆ ಸುರಪುರ ಡಿವೈಎಸ್‌ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು 630 ಕ್ವಿಂಟಾಲ್ ಪಾಲಿಶ್ ಮಾಡಿರೋ ಪಡಿತರ ಅಕ್ಕಿಯ ಜೊತೆಗೆ ಪಾಲಿಶ್ ಮಾಡಲು ರೆಡಿ ಮಾಡಿಟ್ಟುಕೊಂಡಿದ್ದ 70 ಕ್ವಿಂಟಾಲ್ ಅಕ್ಕಿ ಒಟ್ಟೂ 700 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆಪಡೆಯಲಾಗಿದೆ.
ಪ್ರಕರಣದಲ್ಲಿ ಬಂಧಿತ ಆರೋಪಿಗಳು ಪಡಿತರ ಅಕ್ಕಿಯನ್ನು ರಾಜು ರಾಠೋಡ್‌ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದರು. ಸದ್ಯ ರಾಜು ರಾಠೋಡ್ ತಲೆಮರೆಸಿಕೊಂಡಿದ್ದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.