Breaking News

ಕಾರು ಮನೆಯಲ್ಲಿದ್ದರೂ ಫಾಸ್ಟ್​​ಟ್ಯಾಗ್​ನ ಹಣ​ ಕಡಿತ

Spread the love

ಬೆಂಗಳೂರು, ಡಿಸೆಂಬರ್​ 27: ಟೋಲ್​ ಫ್ಲಾಜಾಗಳಲ್ಲಿ (Toll Plaza) ಉಂಟಾಗುವ ಟ್ರಾಫಿಕ್​ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್​​ಟ್ಯಾಗ್ (Fastag)​ ಸೌಲಭ್ಯ ಜಾರಿಗೆ ತಂದಿದೆ. ಈ ಫಾಸ್ಟ್​​ಟ್ಯಾಗ್​​ನಿಂದ ಬೆಂಗಳೂರಿನ ವಾಹನ ಮಾಲಿಕರು ಹಣ ಕಳೆದುಕೊಂಡಿದ್ದಾರೆ. ಹೌದು ಸುಮಾರು ಒಂದು ತಿಂಗಳ ಹಿಂದೆ, ಜೆನಿಲ್ ಜೈನ್ ಎಂಬುವರು ಮನೆಯಲ್ಲಿದ್ದಾಗ ಅವರ ಮೊಬೈಲ್​ಗೆ ಬೆಂಗಳೂರು-ಮಂಗಳೂರು ಹೆದ್ದಾರಿಯ ಟೋಲ್ ಫ್ಲಾಜಾದಲ್ಲಿ 60 ರೂಪಾಯಿ ಸಂಗ್ರಹಿಸಲಾಗಿದೆ ಮೆಸೆಜ್​ ಬಂದಿತ್ತು.

ಇದರಿಂದ ಗಾಭರಿಗೊಂಡ ಜೆನಿಲ್​ ಜೈನ್,​ ತಮ್ಮ ಕಾರು ಅಥವಾ ಫಾಸ್ಟ್‌ಟ್ಯಾಗ್ ಕಳ್ಳತನವಾಗಿದಯೇ ಎಂದು ನೋಡಲು ಪಾರ್ಕಿಂಗ್ ಪ್ರದೇಶಕ್ಕೆ ಹೋದರು. ಆದರೆ ಕಾರು ಮತ್ತು ಫಾಸ್ಟ್​ಟ್ಯಾಗ್​ ಎರಡೂ ಅಲ್ಲಿಯೇ ಇದ್ದವು ಎಂದು ಟೆಕ್ಕಿ ಜೆನಿಲ್ ಜೈನ್​​ ಹೇಳಿದರು.

“ನಾವು ಈ ಟೋಲ್ ಫ್ಲಾಜಾದಿಂದ ಸುಮಾರು 50 ಕಿಮೀ ದೂರದಲ್ಲಿರುವ ಹರಳೂರು-ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತೇವೆ. ಈ ಟೋಲ್ ಗೇಟ್​ನಲ್ಲಿ ಕೊನೆಯ ಬಾರಿ ಪಾಸ್​​ ಆಗಿದ್ದರ ಬಗ್ಗೆ ನನಗೆ ನೆನಪಿಲ್ಲ. ನನ್ನ ಫಾಸ್ಟ್​ಟ್ಯಾಗ್​​ ಖಾತೆ ಪೇಟಿಎಂ ಪಾವತಿ ಬ್ಯಾಂಕ್‌ಗೆ ಲಿಂಕ್ ಮಾಡಲಾಗಿದೆ” ಎಂದು ಜೆನಿಲ್​​ ಜೈನ್​ ತಿಳಿಸಿದರು.

ನಾನು ಈ ಬಗ್ಗೆ ದೂರು ನೀಡಿದೆ. ಒಂದು ತಿಂಗಳ ಬಳಿಕ ಹಣ ಮರುಪಾವತಿ ಮಾಡಿದರು ಎಂದು ಜೆನಿಲ್​ ಜೈನ್​ ಮಾಹಿತಿ ನೀಡಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ