Breaking News

ಸ್ಕೂಟಿ ಮೇಲೆ 3.22 ಲಕ್ಷ ರೂ ದಂಡ, ಸವಾರನಿಗಾಗಿ ಶೋಧ, ಇಂದು ಮತ್ತೆ 4 ಕೇಸ್

Spread the love

643 ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಮೇಲೆ ಬೆಂಗಳೂರು ಸಂಚಾರ ಪೊಲೀಸರು ಬರೊಬ್ಬರಿ 3.22 ಲಕ್ಷ ರೂ ದಂಡ ವಿಧಿಸಿದ್ದಾರೆ. ಬೆಂಗಳೂರು: 643 ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಮೇಲೆ ಬೆಂಗಳೂರು ಸಂಚಾರ ಪೊಲೀಸರು ಬರೊಬ್ಬರಿ 3.22 ಲಕ್ಷ ರೂ ದಂಡ ವಿಧಿಸಿದ್ದಾರೆ.
ಹೌದು.. ಸ್ಕೂಟಿ ಪೆಪ್ ದ್ವಿಚಕ್ರವಾಹನವೊಂದು ಬರೊಬ್ಬರಿ 643 ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ವಿತೌಟ್ ಹೆಲ್ಮೆಟ್, ಸಿಗ್ನಲ್ ಜಂಪ್ ಸೇರಿದಂತೆ ಒಟ್ಟು 643 ಬಾರಿ ನಿಯಮಗಳ ಉಲ್ಲಂಘನೆ ಆಗಿದೆ. ಈ ಸ್ಕೂಟಿ ಮೇಲೆ ಬೆಂಗಳೂರು ಸಂಚಾರ ಪೊಲೀಸರು ಬರೊಬ್ಬರಿ 3.22 ಲಕ್ಷ ರೂ ದಂಡ ವಿಧಿಸಿದ್ದಾರೆ. ಮಾಲಾ ಎಂಬುವರಿಗೆ ಸೇರಿದ ಸ್ಕೂಟಿ ಇದಾಗಿದೆ.

ಈ ಸ್ಕೂಟಿ ಮೂಲಕ ಬರೋಬ್ಬರಿ 643 ಬಾರಿ ಸಂಚಾರ ನಿಯಮಗಳ ಉಲ್ಲಂಘಿಸಲಾಗಿದೆ. ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಮೇಲೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸ್ಕೂಟಿ ನಂಬರ್ KA 04, KF 9072 ಎಂದಾಗಿದೆ. ಬೆಂಗಳೂರಿನ ಆರ್ಟಿ ನಗರ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಟೂಟಿ ಮಾಲೀಕರು ಮತ್ತು ಸವಾರನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಸ್ಕೂಟಿ ಬೆಲೆ 30 ಸಾವಿರ, ದಂಡ 3.22 ಲಕ್ಷ ರೂ ಈ ಬಳಕೆ ಮಾಡಿದ ಸ್ಕೂಟಿಯ ಮಾರುಕಟ್ಟೆ ಅಂದಾಜು ಬೆಲೆ 20,000 ರಿಂದ 30,000 ರೂಪಾಯಿಗಳ ನಡುವೆ ಅಂದಾಜು ಮಾಡಲಾಗಿದೆ. ಪ್ರಸ್ತುತ, ಸಮಸ್ಯೆಯನ್ನು ಪರಿಹರಿಸಲು ಮತ್ತು ತಪ್ಪಿತಸ್ಥ ಸವಾರನನ್ನು ನ್ಯಾಯಕ್ಕೆ ತರಲು ಪೊಲೀಸರು ಸ್ಕೂಟಿಗಾಗಿ ಸಕ್ರಿಯವಾಗಿ ಹುಡುಕುತ್ತಿದ್ದಾರೆ.


Spread the love

About Laxminews 24x7

Check Also

ಶಾಸಕ ಭರಮಗೌಡ (ರಾಜು) ಕಾಗೆಗೆ ಒಲಿದು ಬಂದ ಅದೃಷ್ಟ

Spread the love  ಸಚಿವ ಸತೀಶ್ ಜಾರಕಿಹೊಳಿಯವರ ಮಧ್ಯಸ್ಥಿಕೆಯಲ್ಲಿ ನಡೆದ ಕಾಗವಾಡ ಕ್ಷೇತ್ರದ ಅವಿರೋಧ ಆಯ್ಕೆ- ಶಾಸಕ ಬಾಲಚಂದ್ರ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ