ಬೆಳಗಾವಿ/ಬೆಂಗಳೂರು: ಶಿವಮೊಗ್ಗದವರು ಉತ್ತರ ಕರ್ನಾಟಕದ ವಿರೋಧಿಗಳು, ಬೆಳಗಾವಿಯ ಕಬ್ಬು ಬೆಳೆಗಾರರಿಗೆ ನೀವು ಅವಮಾನ ಮಾಡಿತ್ತಿದ್ದೀರಿ. ನೀವು ಹೊರಗೆ ಹೋದರೆ ನಿಮ್ಮನ್ನು ಕಬ್ಬಿನಿಂದಲೇ ಹೊಡೆದು ಹಾಕುತ್ತಾರೆ ಎಂದು ಬೆಳಗಾವಿ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚೆ ಆರಂಭಿಸಿದಾಗ ಬಿಜೆಪಿ ಸದಸ್ಯರು ಅಡ್ಡಿಪಡಿಸಿದರು. ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಬಿಜೆಪಿ ಶಾಸಕರ ಪೈಕಿ ಶಿವಮೊಗ್ಗ ನಗರ ಕ್ಷೇತ್ರದ ಸದಸ್ಯ ಚನ್ನಬಸಪ್ಪ ವಿರುದ್ಧ ಲಕ್ಷ್ಮಣ್ ಸವದಿ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದವರು ಉತ್ತರ ಕರ್ನಾಟಕದ ವಿರೋಧಿಗಳು. ಬೆಳಗಾವಿ ಕಬ್ಬು ಬೆಳೆಗಾರರಿಗೆ ಅವಮಾನ ಮಾಡುತ್ತಿದ್ದೀರಿ. ನಿಮ್ಮನ್ನು ಕಬ್ಬಿನಿಂದಲೇ ಹೊಡೆದು ಹಾಕುತ್ತಾರೆ. ನಿಮಗೆ ಮಾನ-ಮಾರ್ಯದೆ ಇದೆಯಾ? ಎಂದು ಕೆಂಡಾಮಂಡಲವಾದರು.