Breaking News
Home / Uncategorized / ನಕಲಿ ದಾಖಲೆ ಸೃಷ್ಟಿಸಿ 12 ಕೋಟಿ ರೂ. ಸಾಲ – ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಸಿಬಿಐ ಎಫ್‌ಐಆರ್‌

ನಕಲಿ ದಾಖಲೆ ಸೃಷ್ಟಿಸಿ 12 ಕೋಟಿ ರೂ. ಸಾಲ – ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಸಿಬಿಐ ಎಫ್‌ಐಆರ್‌

Spread the love

ಬೆಂಗಳೂರು : ನಕಲಿ ದಾಖಲೆಗಳನ್ನು ಸಲ್ಲಿಸಿ ಕೋಟ್ಯಾಂತರ ರೂ. ಸಾಲ (Bank loan) ಪಡೆದು ವಂಚಿಸಿರುವ ಆರೋಪದ ಮೇಲೆ ಮಾಜಿ ಸಂಸದ ಶಿವರಾಮೇಗೌಡ (L R Shivaramegowda) ವಿರುದ್ಧ ಸಿಬಿಐ (CBI) ಎಫ್‌ಐಆರ್‌ (FIR) ದಾಖಲಿಸಿಕೊಂಡಿದೆ. ಶಿವರಾಮೇಗೌಡರ ಪತ್ನಿ ಸೇರಿದಂತೆ ಏಳು ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

 

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (Punjab National bank) ನಿಂದ 12.48 ಕೋಟಿ ರೂ. ಸಾಲ ಪಡೆದಿದ್ದ ಶಿವರಾಮೇಗೌಡ ಮತ್ತು ಅವರ ಕುಟುಂಬ ಸದಸ್ಯರು ಸಾಲದ ಹಣವನ್ನು ಬೇರೆಡೆಗೆ ವರ್ಗಾಯಿಸಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವ ಆರೋಪವೂ ಸಹ ಕೇಳಿಬಂದಿದೆ.

ಶಿವರಾಮೇಗೌಡರ ವಿರುದ್ಧ ವಂಚನೆ ಆರೋಪದ ಮೇಲೆ ಎಸ್‌.ಡಿ. ಮೋದಿ ಎಂಬುವವರು ದೂರು ದಾಖಲಿಸಿದ್ದರು.


Spread the love

About Laxminews 24x7

Check Also

ಶೂ ವ್ಯಾಪಾರಿ ನಿವಾಸದಲ್ಲಿ ಬರೋಬ್ಬರಿ 40 ಕೋಟಿ ರೂ. ನಗದು ವಶಕ್ಕೆ IT RAID

Spread the love ಉತ್ತರ ಪ್ರದೇಶದ ಆಗ್ರಾದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ಫಲವಾಗಿ 40 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ