ಬೈಲಹೊಂಗಲ: ತಾಲ್ಲೂಕಿನ ಮುರಗೋಡ, ಸೊಗಲ, ಕಾರಿಮನಿ, ಹೊಸೂರ ಗ್ರಾಮಗಳ ಸುತ್ತಮುತ್ತ ಧಾರಾಕಾರ ಮಳೆ ಸುರಿಯಿತು. ತಾಸಿಗೂ ಹೆಚ್ಚು ಸಮಯ ಸುರಿದ ಮಳೆಯಿಂದ ಹಳ್ಳ, ಕಾಲುವೆ, ಚರಂಡಿಗಳು ತುಂಬಿ ಹರಿದವು.
ದಕ್ಷಿಣ ಕಾಶಿ ಎಂದೇ ಹೆಸರಾದ ‘ಸೊಗಲ ಸೋಮೇಶ್ವರ’ ಕ್ಷೇತ್ರದ ಎರಡು ಜಲಪಾತಗಳಿಗೆ ಮಳೆಯಿಂದಾಗಿ ಮತ್ತೆ ಜೀವಕಳೆ ಬಂದಿದೆ.
ದೇವಸ್ಥಾನದ ಕಿರು ಕಾಲುವೆಗಳೂ ತುಂಬಿದವು. ಕೆಲ ಗ್ರಾಮಗಳಲ್ಲಿ ಬಿರಿಗಾಳಿಗೆ ಹಲವು ಕಡೆ ವಿದ್ಯುತ್ ಕಂಬಗಳ ವಾಲಿದವು. ಜಮೀನುಗಳಲ್ಲಿ ಮಳೆ ನೀರು ನಿಂತು ಒಡ್ಡು ಒಡೆದವು.
ಕಾರವಾರ ಜಿಲ್ಲೆಯ ಕರಾವಳಿಯೂ ಸೇರಿದಂತೆ ಮಲೆನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಕಾರವಾರ, ಕುಮಟಾ, ಹೊನ್ನಾವರದಲ್ಲಿ ಮಧ್ಯಾಹ್ನದ ಹೊತ್ತಿಗೆ ಎಡೆಬಿಡದೆ ಕೆಲ ಹೊತ್ತು ಮಳೆ ಸುರಿಯಿತು. ಯಲ್ಲಾಪುರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿಯೂ ಮಳೆ ಆಗಿದೆ.
Laxmi News 24×7