ಬೆಂಗಳೂರು: ರಾಜ್ಯ ಸರ್ಕಾರದಮುಖ್ಯ ಕಾರ್ಯದರ್ಶಿ (ಸಿಎಸ್) ಹುದ್ದೆಗೆ ಡಾ.ರಜನೀಶ್ ಗೋಯೆಲ್ ನೇಮಕಗೊಂಡಿರುವ ಹಿನ್ನೆಲೆಯಲ್ಲಿ, ಅವರಿಂದ ತೆರವಾದ ಸಿಎಂ ಅವರ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್.ಕೆ.ಅತೀಕ್ ಅವರನ್ನು ನೇಮಿಸಲಾಗಿದೆ.
ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಪ್ರಭಾರಿ ಹೊಣೆಯನ್ನು ಎಲ್.ಕೆ.ಅತೀಕ್ ಅವರಿಗೆ ವಹಿಸಲಾಗಿದೆ. ಇದಕ್ಕೂ ಮುನ್ನ ಎಲ್.ಕೆ.ಅತೀಕ್ ಅವರಿಗೆ ಐಎನ್‌ಎಸ್ ಪ್ರಸಾದ್ ನಿವೃತ್ತಿಯಿಂದ ತೆರವಾದ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿತ್ತು.