ಆತ್ಮಹತ್ಯೆ ತಡೆಗೆ HELP LINE _82779-46600ಗೆ ಕರೆ ಮಾಡಿ

Spread the love

ಬೆಂಗಳೂರು: ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಡೆಗಟ್ಟಲು ನಗರ ಪೊಲೀಸರು ಪ್ರತ್ಯೇಕ ಸಹಾಯವಾಣಿ ಸ್ಥಾಪಿಸಿದ್ದಾರೆ.

ಆಗ್ನೇಯ ವಿಭಾಗದಲ್ಲಿ ವೀ ಕೇರ್ (ನಾವು ಕಾಳಜಿ ವಹಿಸುತ್ತೆವೆ) ಸಹಾಯವಾಣಿ 82779 46600 ಸ್ಥಾಪಿಸಲಾಗಿದೆ. ಆರು ಮಹಿಳಾ ಪೊಲೀಸರನ್ನು ನೇಮಕ ಮಾಡಲಾಗಿದೆ.

ಪಾಳಿಯಲ್ಲಿ ದಿನ 24*7 ಕಾರ್ಯ ನಿರ್ವಹಿಸಲಿದ್ದಾರೆ. ಇವರಿಗೆ ನಿಮ್ಹಾನ್ಸ್ ವೈದ್ಯರಿಂದ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚನೆ ಮಾಡುವವರು ಈ ಕೂಡಲೇ ವೀ ಕೇರ್ ಹೆಲ್ಪ್‌ಲೈನ್‌ಗೆ ಕರೆ ಮಾಡಬಹುದು, ವಾಟ್ಸ್‌ಆಯಪ್ ಸಂದೇಶ, ವಾಟ್ಸ್‌ಆಪ್ ಕರೆ, ಆಡಿಯೋ ಸಂದೇಶ ಸಹ ಕಳುಹಿಸಲು ಅವಕಾಶವಿದೆ. ಕರೆ ಮಾಡುವರ ಮಾಹಿತಿಯನ್ನು ಗೌಪ್ಯವಾಗಿ ಕಾಪಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆ, ವ್ಯಾಸಂಗ ಇನ್ನಿತ್ತರ ಸಣ್ಣಪುಟ್ಟ ವಿಷಯಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಸಾಲದ ಆಯಪ್, ವಿಡಿಯೋ ಕಾಲ್, ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವರ ಪಟ್ಟಿ ಸಹ ದೊಡ್ಡದಾಗಿ ಬೆಳೆಯುತ್ತಿದೆ. ಕೆಲವೊಂದು ಸಮಯದಲ್ಲಿ ತಾವು ಮಾಡದ ತಪ್ಪಿಗೆ ಭಯದಲ್ಲಿ ಅಥವಾ ಮರ್ಯಾದೆ ಅಂಜಿ ಸಾವಿನ ನಿರ್ಧರಕ್ಕೆ ಬರುತ್ತಿರುವರ ಪ್ರಮಾಣ ದಿನೇ ದಿನೆ ಬೆಳೆಯುತ್ತಿದೆ.

ಇದರಿಂದ ಕುಟುಂಬ ಬೀದಿಗೆ ಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ‘ವೀ ಕೇರ್’ ಹೆಲ್ಪ್‌ಲೈನ್ ತೆರೆಯಲಾಗಿದೆ. ಆತ್ಮಹತ್ಯೆಗೆ ಆಲೋಚನೆ ಮಾಡುವರು ಒಮ್ಮೆ ಸಹಾಯವಾಣಿಗೆ ಕರೆ ಮಾಡಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ