ಬೆಳಗಾವಿ: ದೀಪಾವಳಿ ಹಬ್ಬದ ರಜೆ ಇದೆ ಎಂದು ಸುಮ್ಮನೆ ಹೊರಗಡೆ ತಿರುಗಾಡಬೇಡ, ಓದಿನ ಕಡೆಯೂ ಗಮನ ಹರಿಸುವಂತೆ ಪೋಷಕರು ಬುದ್ಧಿವಾದ ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಮಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದದಲ್ಲಿ ಸೋಮವಾರ ನಡೆದಿದೆ.
ತಮ್ಮ ಮನೆಯ ಮಹಡಿಯ ಮೇಲಿನ ರೂಮಿನಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಬಾಲಕ ಮೂಡಲಗಿಯ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಇನ್ನು ಒಂದು ದಿನದಲ್ಲಿ ಶಾಲೆ ಪ್ರಾರಂಭವಾಗುತ್ತದೆ. ಸರಿಯಾಗಿ ಓದಿಕೊ ಎಂದು ಪೋಷಕರು ಬುದ್ಧಿವಾದ ಹೇಳಿದ ಬಳಿಕ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಮಗನ ಸಾವಿನಿಂದ ಪೋಷಕರು ದಿಗ್ಭ್ರಾಂತರಾಗಿದ್ದಾರೆ. ಮಗನಿಗೆ ಬುದ್ಧಿವಾದ ಹೇಳಿದ್ದೆ ತಪ್ಪಾಯಿತೆ ಎಂದು ಗೋಳಾಡುತ್ತಿದ್ದಾರೆ. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.