Breaking News

ಒಂದೂವರೆ ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಗೆ ವಿಚಾರಣೆಗೆ ಬರಲು ಕೋರ್ಟ್​ ನೋಟಿಸ್​:

Spread the love

ಬೆಹ್ರೋರ್ (ರಾಜಸ್ಥಾನ): ಇಂತಹ ಘಟನೆಗಳಿಂದ ನಮ್ಮ ನ್ಯಾಯಾಲಯಗಳು ಮತ್ತು ಪೊಲೀಸ್​ ವ್ಯವಸ್ಥೆಯ ಮೇಲೆ ಅನುಮಾನ ಮತ್ತು ಬೇಸರ ಉಂಟಾಗುತ್ತದೆ.

ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಗೆ ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಆರೋಪದ ಮೇಲೆ ಕೋರ್ಟ್​ ಈಗ ನೋಟಿಸ್​ ನೀಡಿದೆ. ಕಂಡು ಕುಟುಂಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ.

ಈ ಘಟನೆ ಬೆಳಕಿಗೆ ಬಂದಿದ್ದು ರಾಜಸ್ಥಾನದಲ್ಲಿ. ರಾಜ್ಯದಲ್ಲಿ ನವೆಂಬರ್ 25 ರಂದು ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಸೂಕ್ಷ್ಮ ಪ್ರದೇಶಗಳಾದ ಬೆಹ್ರೋರ್, ನೀಮ್ರಾನಾ ಮತ್ತು ಮಂದನ್‌ನಲ್ಲಿ ಕೆಲವರನ್ನು ಕಾನೂನು ಸುವ್ಯವಸ್ಥೆಗೆ ಅಡ್ಡಿ ಆರೋಪದ ಮೇಲೆ ಗುರುತಿಸಲಾಗಿದೆ. ಜೊತೆಗೆ ಮುಂದಿನ 6 ತಿಂಗಳವರೆಗೆ ಈ ಪ್ರದೇಶದಲ್ಲಿ ಆಪಾದಿತ ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಅಪರಾಧಿಗಳ ಪಟ್ಟಿಯಲ್ಲಿ ಬೆಹ್ರೋರ್​ನ ಕಂಕರ್ ಛಾಜಾ ಗ್ರಾಮದ ನಿವಾಸಿ ಕಂದನ್‌ಲಾಲ್ ಯಾದವ್ ಅವರ ಹೆಸರೂ ಇದೆ. ಆದರೆ, ಇವರು ಒಂದೂವರೆ ವರ್ಷಗಳ ಹಿಂದೆಯೇ ಮೃತರಾಗಿದ್ದಾರೆ.

ಕೃಷಿಕ ವ್ಯಕ್ತಿಗೆ ನೋಟಿಸ್​: ಒಂದೂವರೆ ವರ್ಷಗಳ ಹಿಂದೆ ನಿಧನರಾದ ರಾಜಸ್ಥಾನದ ಬೆಹ್ರೋರ್‌ನ ವ್ಯಕ್ತಿಯೊಬ್ಬರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿ ನೋಟಿಸ್ ನೀಡಲಾಗಿದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಈ ನೋಟಿಸ್ ಕಳುಹಿಸಲಾಗಿದೆ. ಆದರೆ, ಕೃಷಿಕರಾಗಿದ್ದ ಕಂದನ್‌ಲಾಲ್ ಜೂನ್ 27, 2022 ರಂದು ನಿಧನ ಹೊಂದಿದ್ದಾರೆ. ಅವರ ಕುಟುಂಬವು ಜನವರಿ 11, 2023 ರಂದು ಮರಣ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ. ನವೆಂಬರ್​ 5ರಂದು ಸಂಜೆ ನ್ಯಾಯಾಲಯದಿಂದ ಮನೆಗೆ ನೋಟಿಸ್​ ಬಂದಿದ್ದು, ಅದನ್ನು ಕಂಡ ಕುಟುಂಬಸ್ಥರು ಅಚ್ಚರಿ ಮತ್ತು ಆಘಾತಕ್ಕೊಳಗಾಗಿದ್ದಾರೆ.

ನನ್ನ ತಂದೆ ಜೀವಂತವಾಗಿದ್ದಾಗ ಅವರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಅವರು ಕೃಷಿಕರಾಗಿದ್ದರು. ಗ್ರಾಮಸ್ಥರೊಂದಿಗೆ ಉತ್ತಮ ಸಂಬಂಧವನ್ನೂ ಹೊಂದಿದ್ದರು. ಉತ್ತಮ ಸ್ವಭಾವದ ವ್ಯಕ್ತಿ ಎಂದು ಹೆಸರಾಗಿದ್ದರು. ಚುನಾವಣೆಗೆ ಅಡ್ಡಿ ಉಂಟು ಮಾಡಿದ ಕಾರಣಕ್ಕೆ ಈ ಹಿಂದೆ ಇಂತಹ ಯಾವುದೇ ನೋಟಿಸ್ ಬಂದಿಲ್ಲ. ಅವರು ಸಾವಿಗೀಡಾಗಿ ಒಂದೂವರೆ ವರ್ಷ ಕಳೆದಿದೆ. ಈಗ ಪೊಲೀಸರು ನ್ಯಾಯಾಲಯದ ಸೂಚನೆ ಮೇರೆಗೆ ನಮ್ಮ ಮನೆಗೆ ಬಂದಿದ್ದಾರೆ. ಇದರಿಂದ ಕ್ಲೀನ್ ಇಮೇಜ್ ಇರುವ ನಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಕಂದನ್‌ಲಾಲ್ ಪುತ್ರ ರಾಮಚಂದ್ರ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.

ತನಿಖೆ ನಡೆಸುತ್ತಿದ್ದೇವೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಹ್ರೋರ್​ ಪೊಲೀಸ್ ಠಾಣೆಯ ಅಧಿಕಾರಿ ರಾಜಪಾಲ್ ಯಾದವ್, ಈ ತಪ್ಪು ಹೇಗೆ ಸಂಭವಿಸಿತು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ ಎಂದರು. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದು, ಎಲೆಕ್ಷನ್ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುವ ಆರೋಪದ ಮೇಲೆ ಬೆಹ್ರೋರ್ ಮ್ಯಾಜಿಸ್ಟ್ರೇಟ್​ ನ್ಯಾಯಾಲಯವು 618 ಜನರ ವಿರುದ್ಧ ದೂರುಗಳನ್ನು ಸ್ವೀಕರಿಸಿದೆ. ಇದರಲ್ಲಿ 389 ಜನರ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. 604 ಜನರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ