Breaking News

‘ಕನ್ನಡ’ ಫಿಲ್ಮ್​ ಚೇಂಬರ್​ನಲ್ಲಿ ಧ್ವಜಾರೋಹಣ ನೆರವೇರಿಸಿದ ನಟಿ ಲೀಲಾವತಿ

Spread the love

‘ಕನ್ನಡ’ ಫಿಲ್ಮ್​ ಚೇಂಬರ್​ನಲ್ಲಿ ಧ್ವಜಾರೋಹಣ ನೆರವೇರಿಸಿದ ನಟಿ ಲೀಲಾವತಿ

ಇಂದು ಕರ್ನಾಟಕದಲ್ಲಿ ‘ರಾಜ್ಯೋತ್ಸವ’ದ ಸಂಭ್ರಮ ಮನೆ ಮಾಡಿದೆ. ಕನ್ನಡ ಚಿತ್ರರಂಗದ ಅಂಗ ಸಂಸ್ಥೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುವರ್ಣ ವರ್ಷವನ್ನು ಆಚರಿಸಲಾಯಿತು. ಫಿಲ್ಮ್​ ಚೇಂಬರ್​ ಅಧ್ಯಕ್ಷ ಎನ್​.ಎಂ ಸುರೇಶ್​, ಉಪಾಧ್ಯಕ್ಷೆ ಪ್ರಮೀಳಾ ಜೋಷಾಯ್, ನಿರ್ಮಾಪಕರ ಸಂಘದ ಉಮೇಶ್ ಬಣಕಾರ್, ಕಾರ್ಯದರ್ಶಿ ಭಾ.ಮಾ ಗೀರಿಶ್ ಸಮ್ಮುಖದಲ್ಲಿ ಹಿರಿಯ ನಟಿ ಅಭಿನೇತ್ರಿ ಲೀಲಾವತಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅವರಿಗೆ ಮಗ ವಿನೋದ್​ ರಾಜ್​​ ಸಾಥ್​ ನೀಡಿದರು.

ನೆಲಮಂಗಲದ ತೋಟದ ಮನೆಯಿಂದ ಅನಾರೋಗ್ಯದ ನಡುವೆಯೂ ಮಗ ವಿನೋದ್​ ರಾಜ್​ ಜೊತೆ ಲೀಲಾವತಿ ಅವರು ಫಿಲ್ಮ್​ ಚೇಂಬರ್​ಗೆ ಆಗಮಿಸಿದರು. ಮಗನ ಸಹಾಯದಿಂದ ವ್ಹೀಲ್​ ಚೇರ್​ನಲ್ಲಿ ಕುಳಿತು ಅವರು ಧ್ವಜಾರೋಹಣ ಮಾಡಿದ್ದು ಗಮನ ಸೆಳೆಯಿತು. ಲೀಲಾವತಿ ಅವರು ಕನ್ನಡ ಭಾಷೆಯಲ್ಲೇ ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೇರೆ ಭಾಷೆ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ