Breaking News

ಬೆಂಗಳೂರು: ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ, ಒಂಬತ್ತಕ್ಕೂ ಹೆಚ್ಚು ಬಸ್‌ಗಳು ಬೆಂಕಿಗೆ ಆಹುತಿ

Spread the love

ಬೆಂಗಳೂರು : ಗ್ಯಾರೇಜ್‌ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಒಂಬತ್ತಕ್ಕೂ ಅಧಿಕ ಬಸ್‌ಗಳು ಆಹುತಿಯಾದ ಘಟನೆ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ.

ಎಸ್​ವಿ ಕೋಚ್ ಎನ್ನುವ ಹೆಸರಿನ ಗ್ಯಾರೇಜ್‌ನಲ್ಲಿ ಹೊಸ ಹಾಗೂ ಹಳೆಯ ಬಸ್ ಇಂಜಿನ್‌ಗಳಿಗೆ ಬಾಡಿ ಅಳವಡಿಸುವ ಕೆಲಸ ಮಾಡಲಾಗುತ್ತಿತ್ತು. ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ ಗ್ಯಾರೇಜ್​ನಲ್ಲಿ ನಿಂತಿರುವ ಬಸ್‌ಗಳಿಗೆ ಆವರಿಸಿದೆ ಎನ್ನಲಾಗ್ತಿದೆ.

ನೋಡ ನೋಡುತ್ತಿದ್ದಂತೆ ಐದಕ್ಕೂ ಅಧಿಕ ಬಸ್‌ಗಳು ಅಗ್ನಿಗಾಹುತಿಯಾಗಿದ್ದು, ಮತ್ತಷ್ಟು ವ್ಯಾಪಿಸುವ ಸಾಧ್ಯತೆಯಿದೆ. ಸದ್ಯ ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳೊಂದಿಗೆ ದೌಡಾಯಿಸಿರುವ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಕೋರಮಂಗಲದಲ್ಲಿ ಅಗ್ನಿ ಅವಘಡ:ಇತ್ತಿಚೇಗೆ ಕೋರಮಂಗಲದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿಗೆ ರೆಸ್ಟೋರೆಂಟ್ ಆಹುತಿಯಾಗಿರುವ ಘಟನೆ ಅಕ್ಟೋಬರ್​ 18ರ ಬುಧವಾರ ಬೆಳಗ್ಗೆ ಸಂಭವಿಸಿತ್ತು. ಕೋರಮಂಗಲ ಸಮೀಪದ ಮಡ್ ಪೈಪ್ ರೆಸ್ಟೋರೆಂಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಮೇಲಂತಸ್ತು ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಅಗ್ನಿ ಅವಘಡದಿಂದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಡುಗೆ ಅನಿಲ‌ ಸೋರಿಕೆಯೇ ಅವಘಡಕ್ಕೆ ಕಾರಣ ಎನ್ನಲಾಗಿತ್ತು. ಈ ವೇಳೆ ಯುವಕನೊಬ್ಬ ತನ್ನ ಪ್ರಾಣ ಉಳಿಸಿಕೊಳ್ಳಲು ಐದು ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದಿದ್ದ


Spread the love

About Laxminews 24x7

Check Also

ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸುವ ಸೂಚನೆ ಕೊಟ್ಟ ರಿಷಬ್ ಪಂತ್

Spread the love ಅಪಘಾತದ ಬಳಿಕ ಸುದೀರ್ಘ ವಿಶ್ರಾಂತಿ ಪಡೆದಿದ್ದ ರಿಷಬ್ ಪಂತ್ ಮತ್ತೆ ಕ್ರಿಕೆಟ್ ಗೆ ಮರಳಿದ್ದಾರೆ. ಐಪಿಎಲ್‌ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ