Breaking News

ಅಥಣಿ ಭಾಗದ ನೀರಾವರಿ ಯೋಜನೆ 2500 ಕೋಟಿ ಅನುದಾನ ಬಿಡುಗಡೆ

Spread the love

ಅಥಣಿ: ಅಥಣಿ ಭಾಗದ ನೀರಾವರಿ ಯೋಜನೆ 2500 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಭರವಸೆ ನೀಡಿದರು.

ಅಥಣಿ ತಾಲೂಕಿನ ನೀರಾವರಿ ಯೋಜನೆ ವಿಚಾರವಾಗಿ ಕಳೆದ ಎರಡು ದಿನದಿಂದ ಪ್ರವಾಸ ನಡೆಸುತ್ತಿರುವ ಸಚಿವರು ಇಂದು ಕೊಟ್ಟಲಗಿ ಗ್ರಾಮದ ನೀರಾವರಿ ಯೋಜನೆ ಕಾಮಗಾರಿ ಪರಿಶೀಲಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಟ್ಟಲಗಿ-ಝುಂಜರವಾಡ ಏತ ನೀರಾವರಿ ಯೋಜನೆ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪೂರ್ವ ಭಾಗದ ಪ್ರದೇಶವು, ಹತ್ತಾರು ವರ್ಷಗಳಿಂದ ತೀವ್ರ ಬರಗಾಲ ಎದುರಿಸುತ್ತಿರುವುದರಿಂದ, ಇಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಜನ-ಜಾನುವಾರುಗಳ ನೀರಿನ ಬವಣೆಯನ್ನು ನೀಗಿಸುವ ಕುರಿತಂತೆ ಶಾಶ್ವತ ಪರಿಹಾರ ನೀಡುವ ಕುರಿತಂತೆ ಹಾಗೂ 10 ಗ್ರಾಮಗಳಿಗೆ ನೀರು, 24 ಕೆರೆ ತುಂಬವ ಯೋಜನೆ ರೂಪಿಸುವಲ್ಲಿ
ಅಥಣಿ ತಾಲೂಕಿನ ಕೊಟ್ಟಲಗಿ ಭಾಗದ ಬಹುದಿನಗಳ ಬೇಡಿಕೆ ನೀರಾವರಿ ಯೋಜನೆ ಬಗ್ಗೆ ಇಂದು ಗ್ರಾಮದ ಜನರೋಂದಿಗೆ ಸಮಾಲೋಚನೆ ನಡೆಸಿದರು,

ಝುಂಜರವಾಡ ಕೊಟ್ಟಲಗಿ ಏತ ನೀರಾವರಿ ಯೋಜನೆ, 11 ಗ್ರಾಮ 9950 ಹೆಕ್ಟೇರ್ ಭೂಮಿ ನೀರಾವರಿ. ಕೊಟ್ಟಲಗಿ, ಕಕಮರಿ , ಐಗಳಿ ಅರಟಾಳ, ಯಲ್ಲಮವಾಡಿ, ಪರತಾವಡಿ, ಹಾಲಳ್ಳಿ , ಬನ್ನೂರ ಹಾಗೂ 24 ಕೆರೆ ತುಂಬವ ಯೋಜನೆ 949.1 ಕೋಟಿ ಯೋಜನೆ ರೂಪುರೇಷೆ (ನೀಲನಕ್ಷೆ)


Spread the love

About Laxminews 24x7

Check Also

ಸಿಡಿಲು ಬಡಿದು ಇಬ್ಬರು ಸಾವು

Spread the love ಕಾರವಾರ(ಉತ್ತರ ಕನ್ನಡ): ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅಂಕೋಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ