Breaking News

ದಾವಣಗೆರೆಯ ಕನ್ನಿಕಾ ಪರಮೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ

Spread the love

ದಾವಣಗೆರೆ: ದಸರಾ ಪ್ರಯುಕ್ತ ದಾವಣಗೆರೆಯಾದ್ಯಂತ ಬಹುತೇಕ ಎಲ್ಲಾ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ.

ದೇವಾಲಯಗಳಲ್ಲಿ ಹೂವು, ಕುಂಕುಮ, ಎಲೆ, ಉತ್ತುತ್ತಿ, ತರಕಾರಿ, ಹಣ್ಣು-ಹಂಪಲುಗಳಿಂದ ತರಹೇವಾರಿ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ದಾವಣಗೆರೆ ನಗರದ ಕನ್ನಿಕಾ ಪರಮೇಶ್ವರಿ ದೇವಿಗೆ ಕರೆನ್ಸಿ ನೋಟುಗಳಿಂದ ಧನಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

ದೊಡ್ಡಪೇಟೆಯ ಕನ್ನಿಕಾ ಪರಮೇಶ್ವರಿ ದೇವಿಗೆ ನವರಾತ್ರಿಯ ಒಂಭತ್ತು ದಿನಗಳ ಕಾಲ ವಿವಿಧ ಅಲಂಕಾರ ಮಾಡಲಾಗಿತ್ತು. ಹತ್ತನೇ ದಿನವಾದ ಇಂದು ಲಕ್ಷಾಂತರ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳಿಂದ ದೇವಿಯನ್ನು ದೇವಸ್ಥಾನ ಕಮಿಟಿಯ ಸದಸ್ಯರು ವಿಶೇಷವಾಗಿ ಶೃಂಗರಿಸಿದ್ದಾರೆ. 3,20,000 ಸಾವಿರ ರೂ. ಮೌಲ್ಯದ ನೋಟುಗಳಿಂದ ದೇವಸ್ಥಾನದ ಗರ್ಭಗುಡಿ ಆಕರ್ಷಣೀಯಗೊಳಿಸಲಾಗಿದೆ. ಇದರಲ್ಲಿ 10, 20, 50 ಸೇರಿದಂತೆ 100, 200 ಹಾಗೂ 500 ರೂ. ಮುಖಬೆಲೆಯ ನೋಟುಗಳಿವೆ.

ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇಂದು ಮತ್ತು ನಾಳೆ ವಿಶೇಷ ಅಲಂಕಾರವನ್ನು ನೋಡಲು ಅವಕಾಶವಿದೆ. ಗರ್ಭಗುಡಿ ಮುಂದೆ ಬೃಹದಾಕಾರದ ಎರಡು ಹಣದ ಮಾಲೆಯನ್ನು ಹಾಕಲಾಗಿದ್ದು, ಕಣ್ಮನ ಸೆಳೆಯುತ್ತಿದೆ.

ಅರ್ಚಕ ಸಂತೋಷ್ ದೇಸಾಯಿ ಮಾತನಾಡಿ, “ದೇವಿಗೆ ಧನಲಕ್ಷ್ಮಿ ಅಲಂಕಾರ ಮಾಡಿದ್ದೇವೆ. ಈ ರೀತಿಯ ಅಲಂಕಾರವನ್ನು ಕಳೆದ 20 ವರ್ಷಗಳಿಂದ ಮಾಡಲಾಗುತ್ತಿದೆ. ಈ ಬಾರಿ ವಿವಿಧ ಮುಖಬೆಲೆಯ 3,20,000 ರೂಪಾಯಿ ಕರೆನ್ಸಿ ನೋಟುಗಳನ್ನು ಬಳಸಿದ್ದೇವೆ. ಈ ಅಲಂಕಾರಕ್ಕೆ ಬ್ಯಾಂಕ್‌ನಿಂದ ತಂದ, ಭಕ್ತರು ಕೊಟ್ಟ ಹೊಸ ಕರೆನ್ಸಿಯನ್ನೇ ಬಳಸಿದ್ದೇವೆ” ಎಂದು ತಿಳಿಸಿದರು.

ಭಕ್ತೆ ಹೇಮಾ ಶ್ರೀನಿವಾಸ್ ಮಾತನಾಡಿ, “ನವರಾತ್ರಿಯ 9 ದಿನ 9 ಅಲಂಕಾರಗಳನ್ನು ಮಾಡುವ ಮೂಲಕ ದಸರಾ ಆಚರಣೆ ಮಾಡಿದ್ದೇವೆ. ಅಮ್ಮನವರಿಗೆ ಧನಲಕ್ಷ್ಮಿ ಅಲಂಕಾರ ಮಾಡಲಾಗಿದೆ. ದೇವಿ ಬಹಳಷ್ಟು ಸುಂದರವಾಗಿ ಕಾಣಿಸುತ್ತಿದ್ದಾಳೆ. ರೋಮಾಂಚನವಾಗುತ್ತದೆ” ಎಂದು ಹೇಳಿದರು.


Spread the love

About Laxminews 24x7

Check Also

ಮುಳುಗಿದ ಲೋಳಸೂರ ಸೇತುವೆ: ಡಿಸಿ ಮೊಹಮ್ಮದ್ ರೋಷನ್ ಪರಿಶೀಲನೆ

Spread the loveಬೆಳಗಾವಿ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ‌ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ಇದೆ. ಇದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ