Breaking News

ಭಾರತದ ಬೌಲಿಂಗ್​ ದಾಳಿಗೆ ನಲುಗಿದ ಪಾಕ್​.. 191ಕ್ಕೆ ಸರ್ವಪತನ

Spread the love

ವಿಶ್ವಕಪ್​ನ 12ನೇ ಲೀಗ್​ ಪಂದ್ಯದಲ್ಲಿ ಭಾರತ – ಪಾಕಿಸ್ತಾನ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಿದ್ದು, ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಅಹಮದಾಬಾದ್​ (ಗುಜರಾತ್​​): ಭಾರತ ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ ಫೈನಲ್​ನಲ್ಲಿ ತಾನು ಬೌಲಿಂಗ್​ನಲ್ಲಿ ಸಮರ್ಥ ತಂಡ ಎಂದು ವಿಶ್ವಕ್ಕೆ ಸಂದೇಶ ನೀಡಿತ್ತು.

ಅದರಂತೆ ವಿಶ್ವಕಪ್​ನ ಎರಡು ಪಂದ್ಯದಲ್ಲಿ ನಿಯಂತ್ರಿತ ಬೌಲಿಂಗ್​ ಪ್ರದರ್ಶನ ನೀಡಿತ್ತು. ಪಾಕಿಸ್ತಾನದ ವಿರುದ್ಧದ ಮೂರನೇ ಪಂದ್ಯದಲ್ಲಿ ಅದೇ ಲಯದ ಬೌಲಿಂಗ್​ನ್ನು ಮುಂದುವರೆಸಿದೆ. ಸಿರಾಜ್​ ಆರಂಭದಲ್ಲಿ ದುಬಾರಿ ಆದರು ನಂತರ ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆದರೆ. ಪಾಕಿಸ್ತಾನ ನಾಯಕ ಬಾಬರ್​ ಅರ್ಧಶತಕ ಮತ್ತು ರಿಜ್ವಾನ್​ ಅವರ 49 ರನ್​ ಬಲವಾಯಿತು. ಮತ್ತಾವ ಬ್ಯಾಟರ್​​ನಿಂದಲೂ ದೊಡ್ಡ ಇನ್ನಿಂಗ್ಸ್​ ಬರಲೇ ಇಲ್ಲ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಪಾಕ್​ ಮೊದಲ 5 ಓವರ್​ನಲ್ಲಿ ಉತ್ತಮ ಲಯದಲ್ಲಿ ಬ್ಯಾಟಿಂಗ್​ ಮಾಡಿತು. ನಂತರ ಆದರೆ 8ನೇ ಓವರ್​ನಲ್ಲಿ ಸಿರಾಜ್​ ಅಬ್ದುಲ್ಲಾ ಶಫೀಕ್ (20) ಅವರ ವಿಕೆಟ್​ ಪಡೆದರು. ಅವರ ಬೆನ್ನಲ್ಲೇ ಇನ್ನೊಬ್ಬ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ (36) ವಿಕೆಟ್​ ಸಹ ಉರುಳಿತು.

 

  •  

 

ಬಾಬರ್​ – ರಿಜ್ವಾನ್​ ಜೊತೆಯಾಟ: ಮೂರನೇ ವಿಕೆಟ್​ಗೆ ಒಂದಾದ ನಾಯಕ ಬಾಬರ್​ ಅಜಮ್​ ಮತ್ತು ವಿಕೆಟ್​ ಕೀಪರ್​ ಮೊಹಮ್ಮದ್ ರಿಜ್ವಾನ್ ಭರ್ಜರಿ ಜೊತೆಯಾಟ ಮಾಡಿದರು. ಈ ಜೋಡಿ ತಂಡಕ್ಕೆ ವಿಕೆಟ್​ ಕಾಯ್ದುಕೊಟ್ಟಿದ್ದಲ್ಲದೇ, ಆರಂಭಿಕ ವಿಕೆಟ್​ ನಷ್ಟದಿಂದ ತಂಡಕ್ಕೆ ಚೇತರಿಕೆಯನ್ನು ನೀಡಿತು. ಎರಡು ಪಂದ್ಯದಲ್ಲಿ ವಿಫಲತೆ ಕಂಡಿದ್ದ ಬಾಬರ್​ ಅಜಮ್​ ಇಂದು ಅರ್ಧಶತಕ ಗಳಿಸಿದರು. 58 ಬಾಲ್​ ಎದುರಿಸಿದ ಬಾಬರ್​ ಅಜಮ್​ 7 ಬೌಂಡರಿ ಸಹಾಯದಿಂದ 50 ರನ್​ ಗಳಿಸಿದರು. ಇಬ್ಬರು 82 ರನ್​ನ ಜೊತೆಯಾಟ ಆಡಿದರು.

13 ರನ್​ ಅಂತರದಲ್ಲಿ 4 ವಿಕೆಟ್​ ಪತನ: 50 ರನ್​ ಗಳಿಸಿದ ಬಾಬರ್ ಸಿರಾಜ್​ಗೆ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ ​ಸೌದ್ ಶಕೀಲ್(6), ಇಫ್ತಿಕರ್ ಅಹ್ಮದ್ (4) ವಿಕೆಟ್​ನ್ನು ಕುಲ್ದೀಪ್​ ಯಾದವ್​ ಪಡೆದರು. ಈ ವೇಳೆ 49 ರನ್​ ಗಳಿಸಿ ಪಿಚ್​​ಗೆ ಸೆಟ್​ ಆಡುತ್ತಿದ್ದ ರಿಜ್ವಾನ್​ ಬುಮ್ರಾ ವಿಕೆಟ್​ ಕೊಟ್ಟರು. 1 ರನ್​ನಿಂದ ಸತತ ಮೂರನೇ ಅರ್ಧಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು. ಅವರ ನಂತರ ಬಂದ ಶಾದಾಬ್ ಖಾನ್ (2) ಬುಮ್ರಾಗೆ ಕ್ಲೀನ್​ ಬೌಲ್ಡ್​ ಆದರು.

 

  •  

 

ನಿಲ್ಲದ ಬಾಲಂಗೋಚಿಗಳು: ಮೊದಲ ನಾಲ್ಕು ಆಟಗಾರರು ಎರಡಂಕಿಯ ರನ್​ ಗಳಿಸಿದರೆ, ನಂತರದ ಬ್ಯಾಟರ್​ಗಳು ಒಂದಂಕಿಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದ್ದರು. ಬಾಲಂಗೋಚಿಗಳಾದ ಮೊಹಮ್ಮದ್ ನವಾಜ್(4), ಹಸನ್ ಅಲಿ (12), ಶಾಹೀನ್ ಅಫ್ರಿದಿ, ಹಾರಿಸ್ ರೌಫ್ ಭಾರತದ ಬೌಲಿಂಗ್​ ಎದುರಿಸುವಲ್ಲಿ ಎಡವಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ