Breaking News

ಕುರುಬ ಸಮುದಾಯಕ್ಕೆ 5 ಸಾವಿರ ಕೋಟಿ ಅನುದಾನದ ಗ್ಯಾರಂಟಿ ಕೊಡಿ: ಬಂಡೆಪ್ಪ ಕಾಶಂಪುರ

Spread the love

ಬೆಳಗಾವಿ, ಅ.3: ಕುರುಬ ಸಮುದಾಯಕ್ಕೆ ಐದು ಸಾವಿರ ಕೋಟಿ ಕುರಿಗಾರರಿಗೆ ಅನುದಾನದ ಗ್ಯಾರಂಟಿ ಕೊಡಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ (Bandeppa Kashempur) ಅವರು ಸರ್ಕಾರದ ಮುಂದೆ ಬೇಡಿಕೆ ಮುಂದಿಟ್ಟಿದ್ದಾರೆ. ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆ ವತಿಯಿಂದ ನಡೆದ ಕುರುಬ ಸಮುದಾಯದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಎರಡು ವರ್ಷದಲ್ಲಿ ಐದರಿಂದ ಹತ್ತು ಪಟ್ಟು ಸರ್ಕಾರಕ್ಕೆ ಕೊಡುವ ಶಕ್ತಿ ನಮ್ಮ ಸಮಾಜಕ್ಕಿದೆ ಎಂದರು.

ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಕೊಟ್ಟಿದ್ದು ಸ್ವಾಗತ. ಈ ವೇಳೆ ಕುರುಬ ಸಮುದಾಯಕ್ಕೆ ಒಂದು ಗ್ಯಾರಂಟಿ ಕೊಡಬೇಕು. ತೆಲಂಗಾಣದಲ್ಲಿ ಕುರುಬರಿಗೆ ಹದಿನೈದು ಸಾವಿರ ಕೋಟಿ ಲೋನ್ ಕೊಟ್ಟಿದ್ದಾರೆ. ತೊಂಬತ್ತು ಪರ್ಸೆಂಟ್ ಸಬ್ಸಿಡಿ ಅಲ್ಲಿ ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿ ಕುರಿ ಅಭಿವೃದ್ಧಿ ನಿಗಮ ಮಂಡಳಿ ಇದೆ. ಅದರ ಮೂಲಕ ಐದು ಸಾವಿರ ಕೋಟಿ ಕುರಿಗಾರರಿಗೆ ಅನುದಾನ ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಇವತ್ತು ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆ ವತಿಯಿಂದ ಗೌರವ ಅರ್ಪಣೆ ಮಾಡಿದ್ದಾರೆ. ಜವಾಬ್ದಾರಿಯನ್ನ ನಿರ್ವಹಿಸುವ ಕೆಲಸವನ್ನ ಮಾಡಿದ್ದಾರೆ. ನನಗೆ ಸನ್ಮಾನಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದರು.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ