ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರು ಅಭಿನಯಿಸಿದ ಕೊನೇ ಸಿನಿಮಾ ‘ರಾಜಮಾರ್ತಾಂಡ’ ಈಗ ಬಿಡುಗಡೆ ಆಗುತ್ತಿದೆ. ಅಕ್ಟೋಬರ್ 6ರಂದು ಈ ಚಿತ್ರ ತೆರೆಕಾಣಲಿದೆ. ಆ ಪ್ರಯುಕ್ತ ಸುದ್ದಿಗೋಷ್ಠಿ ನಡೆಸಲಾಗಿದ್ದು, ಅದರಲ್ಲಿ ಧ್ರುವ ಸರ್ಜಾ ಭಾಗಿ ಆಗಿದ್ದಾರೆ.
ಚಿರು ನಿಧನದ ಬಳಿಕ ಈ ಸಿನಿಮಾಗೆ ಧ್ರುವ ಅವರೇ ಡಬ್ಬಿಂಗ್ ಮಾಡಿಕೊಟ್ಟರು. ಈಗ ‘ರಾಜಮಾರ್ತಾಂಡ’ (Rajamarthanda) ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ.
ಪ್ರೇಕ್ಷಕರ ಎದುರು ಬರುತ್ತಿರುವ ಈ ಸಂದರ್ಭದಲ್ಲಿ ಎಲ್ಲ ಪ್ರೇಕ್ಷಕರಿಗೂ ಧ್ರುವ ಸರ್ಜಾ ಒಂದು ಮನವಿ ಮಾಡಿಕೊಂಡಿದ್ದಾರೆ. ‘ಎಲ್ಲ ಮಕ್ಕಳು ಮತ್ತು ತಾಯಂದಿರು ದಯವಿಟ್ಟು ಎರಡು ಗಂಟೆ ಬಿಡುವು ಮಾಡಿಕೊಂಡು ನಮ್ಮ ಅಣ್ಣನ ಸಿನಿಮಾ ನೋಡಿ’ ಎಂದು ಧ್ರುವ ಸರ್ಜಾ (Dhruva Sarja) ಹೇಳಿದ್ದಾರೆ. ಅಣ್ಣನ ಪಾತ್ರಕ್ಕೆ ಧ್ವನಿ ನೀಡಿದ ಅನುಭವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಈ ಸಿನಿಮಾಗೆ ರಾಮ್ ನಾರಾಯಣ್ ನಿರ್ದೇಶನ ಮಾಡಿದ್ದು, ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ.
Laxmi News 24×7