Breaking News

ಈದ್ ಮಿಲಾದ್​ ಮೆರವಣಿಗೆಗೆ ಗಣೇಶ ಮಂಡಳಿಗಳ ಮುಖಂಡರ ಸಾಥ್

Spread the love

ಬೆಳಗಾವಿ : ಬೆಳಗಾವಿಯಲ್ಲಿಂದು ಪ್ರವಾದಿ ಮೊಹಮ್ಮದ್ ಪೈಗಂಬರ್​ ಅವರ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಈದ್‌-ಮಿಲಾದ್‌ ಮೆರವಣಿಗೆ ವಿಜೃಂಭಣೆಯಿಂದ ಜರುಗಿದ್ದು, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಮುಖಂಡರೂ ಕೂಡ ಸಾಥ್ ನೀಡುವ ಮೂಲಕ ಭಾವೈಕ್ಯತೆ ಮೆರೆದರು.

 

ಪ್ರತಿ ವರ್ಷ ಈದ್‌-ಮಿಲಾದ್‌ ದಿನವೇ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿಯೂ ಸೆಪ್ಟೆಂಬರ್ 28ರಂದು ಹಬ್ಬದ ದಿನವೇ ಮೆರವಣಿಗೆಗೆ ಎಲ್ಲ ರೀತಿ ಸಿದ್ಧತೆಯನ್ನು ಮುಸ್ಲಿಂ ಸಮುದಾಯದವರು ಮಾಡಿಕೊಂಡಿದ್ದರು. ಆದರೆ, ಅದೇ ದಿನ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನೆ ಮೆರವಣಿಗೆಯೂ ಬಂದಿದ್ದರಿಂದ ಈದ್‌ ಮೆರವಣಿಗೆ ಮುಂದೂಡಲಾಗಿತ್ತು. ಹಾಗಾಗಿ, ಭಾನುವಾರ ನಡೆದ ಈದ್​ ಮೆರವಣಿಯಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಮುಖಂಡರೂ ಭಾಗಿಯಾಗಿ ಸಾಮರಸ್ಯ ಪ್ರದರ್ಶಿಸಿದರು.

ಶಾಸಕ ಆಸೀಫ್‌ ಸೇಠ್‌ ಮಾತನಾಡಿ, ಬೆಳಗಾವಿ ವಿವಿಧತೆಯಲ್ಲಿ ಏಕತೆ ಕಾಣುವ ಜಿಲ್ಲೆ. ಇಲ್ಲಿ ಎಲ್ಲ ಹಬ್ಬಗಳನ್ನೂ ಹಿಂದೂ-ಮುಸ್ಲಿಮರು ಒಟ್ಟಾಗಿ ಆಚರಿಸುತ್ತಾ ಸಾಮರಸ್ಯ ಮೆರೆಯುತ್ತಾ ಬಂದಿದ್ದೇವೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗೋಣ. ಎಲ್ಲರಿಗೂ ಒಳಿತಾಗಲಿ ಎಂದು ನಾವೆಲ್ಲಾ ದೇವರಲ್ಲಿ ಪ್ರಾರ್ಥಿಸೋಣ ಎಂದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ