Breaking News

ರಾಜಕಾರಣಿಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಾಲಿವುಡ್​ ನಟಿಯರು ಇವರೇ

Spread the love

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮಾತ್ರವಲ್ಲದೇ, ರಾಜಕಾರಣಿಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಾಲಿವುಡ್​ ನಟಿಯರು ಇವರೇ ನೋಡಿ..

ಪರಿಶುದ್ಧ ‘ಪ್ರೀತಿ’ಗೆ ಯಾವುದೇ ಮಿತಿಯಿಲ್ಲ. ಯಾವುದೇ ಷರತ್ತುಗಳಿಲ್ಲ. ಪ್ರೀತಿ ಯಾರಿಗೆ, ಯಾವಾಗ ಬೇಕಾದರೂ, ಯಾರೊಂದಿಗೂ ಆಗಬಹುದು.

ಅದು ಎರಡು ಮನಸ್ಸುಗಳಿಗೆ ಸಂಬಂಧಪಟ್ಟಿರುವ ವಿಚಾರ. ಪ್ರೀತಿಗೆ ವೃತ್ತಿ, ಜಾತಿ, ಧರ್ಮ ಯಾವುದೂ ಮುಖ್ಯವಾಗಿರಲ್ಲ. ಇದೇ ರೀತಿ ಬಾಲಿವುಡ್​ಗೂ ರಾಜಕೀಯಕ್ಕೂ ವಿಶೇಷವಾಗಿ ಪ್ರೀತಿಯ ನಂಟು ಇದೆ.

ಹೌದು.., ಹಿಂದಿ ಚಿತ್ರರಂಗದ ಬ್ಯೂಟಿಫುಲ್​ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೆಸ್ ಹೋಟೆಲ್‌ನಲ್ಲಿ ರಾಘ್​ನೀತಿ ಅದ್ಧೂರಿಯಾಗಿ ಸಪ್ತಪದಿ ತುಳಿಯಲಿದ್ದಾರೆ. ಇಷ್ಟು ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಿದ್ದಾರೆ.

ವಿಶೇಷವೆಂದರೆ, ಇವರಿಬ್ಬರ ವೃತ್ತಿ ಜೀವನವೇ ಬೇರೆ. ಮಾಡುವ ಕೆಲಸಗಳು ಕೂಡ ಬೇರೆಯೇ. ರಾಘವ್​ ಚಡ್ಡಾ ರಾಜಕಾರಣಿ ಆಗಿದ್ದರೆ, ಪರಿಣಿತಿ ಚೋಪ್ರಾ ನಟಿ. ಈ ಮೊದಲು ಅನೇಕ ಬಾಲಿವುಡ್​ ನಟಿಯರು ರಾಜಕಾರಣಿಗಳ ಜೊತೆ ಸಪ್ತಪದಿ ತುಳಿದಿದ್ದಾರೆ. ರಾಘ್​ನೀತಿ ಸಾಲಿನಲ್ಲಿ ಅನೇಕ ಜೋಡಿಗಳು ಸೇರಿದ್ದಾರೆ.

ರಾಘ್​ನೀತಿ: ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಮದುವೆ ಸಾಕಷ್ಟು ಸುದ್ದಿ ಮಾಡುತ್ತಿದೆ. ಇಬ್ಬರೂ ಕೂಡ ವಿಭಿನ್ನ ಕ್ಷೇತ್ರದ ಗಣ್ಯ ವ್ಯಕ್ತಿಗಳಾದ ಹಿನ್ನೆಲೆಯಲ್ಲಿ ಕುತೂಹಲ ಸಹಜ. ಪರಿಣಿತಿ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೆ, ರಾಜಕೀಯ ಕ್ಷೇತ್ರದಲ್ಲಿ ರಾಘವ್​ ಚಡ್ಡಾ ಯಂಗ್​ ಆಯಂಡ್​ ಎನರ್ಜಿಟಿಕ್​ ಲೀಡರ್​ ಆಗಿ ಗುರುತಿಸಿಕೊಂಡವರು. ಇವರಿಬ್ಬರು ಮೇ 13ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ಅತ್ಯಂತ ಸಂಭ್ರಮದಿಂದ ಮೂರು ಗಂಟಿನ ನಂಟಿಗೆ ಒಳಗಾಗಿದ್ದಾರೆ.

ರಿ

ರಾಘ್​ನೀತಿ ಮಾರ್ಚ್​ ತಿಂಗಳಲ್ಲಿ ಪದೇ ಪದೇ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್​ ವದಂತಿ ಆರಂಭವಾಗಿತ್ತು. ಅದಾದ ಬಳಿಕ ರೆಸ್ಟೋರೆಂಟ್​, ಏರ್​ಪೋರ್ಟ್​ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಹಲವು ಗಣ್ಯರು ಸಹ ಪರೋಕ್ಷವಾಗಿ ಈ ಜೋಡಿ ಪ್ರೀತಿಯಲ್ಲಿರುವ ಬಗ್ಗೆ ಮಾತನಾಡಿದ್ದರು. ಪರಿಣಿತಿ ಮತ್ತು ರಾಘವ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಪಡೆದಿದ್ದಾರೆ. ದೀರ್ಘಕಾಲದ ಸ್ನೇಹಿತರು ಕೂಡ ಹೌದು.

 

ಸ್ವರಾ ಭಾಸ್ಕರ್​ ಮತ್ತು ಫಹಾದ್ ಅಹ್ಮದ್: ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ನಟಿ ಸ್ವರಾ ಭಾಸ್ಕರ್​ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಮದುವೆ ಆದರು. ಫೆಬ್ರವರಿಯಲ್ಲಿ ಈ ಜೋಡಿಯ ರಿಜಿಸ್ಟರ್ ಮ್ಯಾರೇಜ್ ನಡೆದಿತ್ತು.​ ಬಳಿಕ ಮಾರ್ಚ್​ ತಿಂಗಳಿನಲ್ಲಿ ಶಾಸ್ತ್ರಗಳ ಪ್ರಕಾರ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು.

ಹಳ್ದಿ ಶಾಸ್ತ್ರ, ಸಂಗೀತ ಸಮಾರಂಭ, ಮೆಹಂದಿ ಶಾಸ್ತ್ರ ಸೇರಿದಂತೆ ಮದುವೆಗೆ ಸಂಬಂಧಿಸಿದ ಎಲ್ಲ ಸಮಾರಂಭಗಳು ಶಾಸ್ತ್ರೋಕ್ತವಾಗಿ ನೆರವೇರಿತ್ತು. ಬಳಿಕ ಮಾರ್ಚ್​ 16ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ