Breaking News

ನಾಳೆ ಭಾರತಕ್ಕೆ ಚಿನ್ನದ ಕನಸು.. ವನಿತೆಯರ ಕ್ರಿಕೆಟ್​ ತಂಡ ಲಂಕಾ ಮಣಿಸಿ ಗೆಲ್ಲುತ್ತಾ ಸ್ವರ್ಣ ಪದಕ?

Spread the love

ಹ್ಯಾಂಗ್‌ಝೌ (ಚೀನಾ): ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ತಂಡ ಆಡುತ್ತಿದೆ. ಈಗಾಗಲೇ ಭಾರತೀಯ ವನಿತೆಯರ ತಂಡ ಬಾಂಗ್ಲಾದೇಶವನ್ನು ಮಣಿಸಿ ಫೈನಲ್​ಗೆ ಪ್ರವೇಶಿಸಿದೆ.

ಎರಡನೇ ಸೆಮಿ ಫೈನಲ್​ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಿದ್ದವು. ಇದರಲ್ಲಿ ಪಾಕಿಸ್ತಾವನ್ನು ಮಣಿಸಿದ ಸಿಂಹಳದ ವನಿತಿಯರು ಅಂತಿಮ ಹಣಾಹಣಿಗೆ ಸಿದ್ಧರಾಗಿದ್ದಾರೆ. ನಾಳೆ ಚಿನ್ನಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಪೈಪೋಟಿ ನಡೆಯಲಿದೆ.

ಇಂದು ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 51 ರನ್​ಗೆ ಕಟ್ಟಿಹಾಕಿದರು. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದ ಬಾಂಗ್ಲಾದೇಶಕ್ಕೆ ಭಾರತೀಯ ವನಿತೆಯರ ಪ್ರಬಲ ಬೌಲಿಂಗ್​ ದಾಳಿ ಕಾಡಿತು. ಪೂಜಾ ವಸ್ತ್ರಾಕರ್​ ನಾಲ್ಕು ವಿಕೆಟ್​ ಪಡೆದು ಮಿಂಚಿದರೆ, ಉಳಿದಂತೆ ಎಲ್ಲರೂ ಒಂದೊಂದು ವಿಕೆಟ್​ ಹಂಚಿಕೊಂಡರು. ಬಾಂಗ್ಲಾ ನಾಯಕಿ ನಿಗರ್ ಸುಲ್ತಾನಾ 12 ರನ್​ ಗಳಿಸಿದ್ದೇ ಅವರ ತಂಡದ ಬೃಹತ್​ ಮೊತ್ತ. ನಹಿದಾ ಅಕ್ತರ್ 9, ಸೋಭಾನಾ ಮೊಸ್ತರಿ ಮತ್ತು ರಿತು ಮೋನಿ ತಲಾ 8 ರನ್​ ಗಳಿಸಿದರು. ಐವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

52 ರನ್​ ಸಂಕ್ಷಿಪ್ತ ಗುರಿಯನ್ನು ಬೆನ್ನು ಹತ್ತಿದ ಭಾರತದ ವನಿತೆಯರು 2 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿದರು. ನಾಯಕಿ ಮಂದಾನ 7 ರನ್​ ಔಟ್​ ಆದರೆ, ಶೆಫಾಲಿ ವರ್ಮಾ 17 ರನ್​ಗೆ ವಿಕೆಟ್​ ಕೊಟ್ಟರು. ಜೆಮಿಕಾ ರೋಡ್ರಿಗಸ್​ ಅಜೇಯ 20 ರನ್​ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. 8.2 ಓವರ್​ನಲ್ಲಿ 8 ವಿಕೆಟ್​ ಉಳಿಸಿಕೊಂಡು ಭಾರತದ ತಂಡ 52 ರನ್​ ಗಳಿಸಿತು.

ಎರಡನೇ ಸೆಮಿಫೈನಲ್ಸ್​: ಎರಡನೇ ಸೆಮಿಸ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿ ಆಗಿದ್ದವು. ಟಾಸ್​​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಪಾಕಿಸ್ತಾನ ತಂಡ ನಿಗದಿತ ಓವರ್​ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು 75 ರನ್​ ಗಳಿಸಿತ್ತು. ಬೆನ್ನತ್ತಿದ ಲಂಕಾ 16.3 ಓವರ್​ನಲ್ಲಿ 4 ವಿಕೆಟ್​ ಕಳೆದುಕೊಂಡು 77 ರನ್​ ಗಳಿಸಿತು. ಈ ಮೂಲಕ 6 ವಿಕೆಟ್​ಗಳ ಗೆಲುವು ದಾಖಲಿಸಿ ಫೈನಲ್​​ಗೆ ಪ್ರವೇಶಿಸಿದೆ.

ಫೈನಲ್​ನಲ್ಲಿ ಭಾರತ -ಲಂಕಾ ಮುಖಾಮುಖಿ: ನಾಳೆ ಚಿನ್ನದ ಪದಕಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಫೈನಲ್​ ಹಣಾಹಣಿ ನಡೆಯಲಿದೆ. ಏಷ್ಯನ್​ ರಾಷ್ಟ್ರಗಳಲ್ಲಿ ಭಾರತದ ವನಿತೆಯರ ತಂಡ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಟಿ20 ಮಾದರಿಯಲ್ಲಿ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಕಾ ರೋಡ್ರಿಗಸ್​ ಮತ್ತು ಹರ್ಮನ್​ಪ್ರೀತ್​ ಕೌರ್​ ಉತ್ತಮ ಪ್ರದರ್ಶನ ನೀಡಿದ ದಾಖಲೆಗಳಿವೆ. ಹೀಗಾಗಿ ಭಾರತಕ್ಕೆ ನಾಳೆ ಚಿನ್ನ ಒಲಿಯುವ ಅವಕಾಶ ಇದೆ.

ಸಂಭಾವ್ಯ ತಂಡ.. ಭಾರತ: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಕನಿಕಾ ಅಹುಜಾ, ರಿಚಾ ಘೋಷ್ (ವಿಕೆಟ್​ ಕೀಪರ್​), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮನ್ಜೋತ್ ಕೌರ್, ಪೂಜಾ ವಸ್ತ್ರಾಕರ್, ಮಿನ್ನು ಮಣಿ, ರಾಜೇಶ್ವರಿ ಗಾಯಕ್ವಾಡ್.

ಶ್ರೀಲಂಕಾ: ಚಮರಿ ಅಥಾಪತ್ತು (ನಾಯಕಿ), ಅನುಷ್ಕಾ ಸಂಜೀವನಿ (ವಿಕೆಟ್​ ಕೀಪರ್​), ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇನೋಕಾ ರಣವೀರ, ಅಚಿನಿ ಕುಲಸೂರಿಯಾ, ಉದೇಶಿಕಾ ಪ್ರಬೋಧನಿ, ಇನೋ ಪ್ರಿಯದರ್ಶಿನಿ


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ