ಸಿಲಿಂಡರಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯ ತಾವಂದಿ ಘಾಟನಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.ತೀರ್ಥಸಿಂಗ್ (41) ಮೃತಪಟ್ಟ ಚಾಲಕ ಮೂಲತ ಪಂಜಾಬ ರಾಜ್ಯದವರು. ಲಾರಿಯಲ್ಲಿ ಖಾಲಿ ಸಿಲಿಂಡರಗಳನ್ನು ಇದ್ದ ಕಾರಣ ಯಾವುದೇ ಅಹಿತಕರ ಘಟನೆ
ಸಂಭವಿಸಿಲ್ಲ.ಲಾರಿ ಪಲ್ಟಿಯಾದ ಪರಿಣಾಮ ರಸ್ತೆಯಲ್ಲಿ ಸಿಲಿಂಡರ್ ಗಳು ಚೆಲ್ಲಾಪಿಲ್ಲಿಗಳಾಗಿದವು.6 ಗಂಟೆಗಳ ಕಾಲ ಹೆದ್ದಾರಿಯಲ್ಲಿ ದ್ವಿಮುಖ ಸಂಚಾರವನ್ನು ಬಂದ್ ಮಾಡಲಾಗಿತ್ತು.ಘಟನಾ ಸ್ಥಳಕ್ಕೆ ಸಿಪಿಐ ಬಿ.ಎಸ್.ತಳವಾರ,ಪಿಎಸ್ಐ ಉಮಾದೇವಿ,ಶಿವರಾಜ ನಾಯಿಕವಾಡಿ, ರಮೇಶ ಪವಾರ ಪರಿಶೀಲನೆ ನಡೆಸಿದ್ದಾರೆ.