Breaking News

ಗಣೇಶ ಮೂರ್ತಿ ನಾಲ್ಕು ಅಡಿ ಎತ್ತರ ಮೀರಬಾರದು ಎಂಬುದು ಹಾಸ್ಯಾಸ್ಪದ: ಕೇಂದ್ರ ಸಚಿವ ಜೋಶಿ

Spread the love

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಜಿಲ್ಲಾಡಳಿತ ಹಲವಾರು ಷರತ್ತುಗಳನ್ನು ವಿಧಿಸಿದೆ. ಇದು ಸರಿಯಲ್ಲ, ನಮ್ಮ ಧಾರ್ಮಿಕ ಹಬ್ಬದ ಆಚರಣೆಗೆ ಷರತ್ತು ವಿಧಿಸಲು ಇವರು ಯಾರು?, ಜನರ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರದ ವರ್ತನೆ ಖಂಡನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣಪತಿ ಮೂರ್ತಿಗಳು ನಾಲ್ಕು ಅಡಿ ಗಳಿಗಿಂತ ಎತ್ತರವಿರುತ್ತವೆ. ಇದು ನಮ್ಮ ಭಕ್ತಿಯ ಸಂಕೇತ. ಆದರೆ ಇವರು ವಿಧಿಸಿರುವ ಷರತ್ತಿನಲ್ಲಿ ನಾಲ್ಕು ಅಡಿ ಮೀರಬಾರದು ಎಂದಿರುವುದು ಹಾಸ್ಯಾಸ್ಪದವಾಗಿದ್ದು, ಇದು ಸರಿಯಲ್ಲ. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆಬೇಕಾಗಿಲ್ಲ ಎಂಬಂತೆ ಯಾವುದೇ ಹಬ್ಬ ಹರಿದಿನಗಳನ್ನು ಸಡಗರ – ಸಂಭ್ರಮದಿಂದ ಆಚರಿಸಬೇಕೆ ಹೊರತು ಆತಂಕದಿಂದಲ್ಲ. ನಮ್ಮ ವೋಟುಗಳು ಇವರಿಗೆ ಬೇಕು. ನಮ್ಮ ಸಂಸ್ಕೃತಿ ಬೇಡವೇ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳ I.N.D.I.A. ಮೈತ್ರಿಕೂಟದ ಧ್ಯೇಯವಾದ ಸನಾತನ ಧರ್ಮದ ನಾಶದ ಮುನ್ನುಡಿ ಬರೆದಂತಿದೆ. ಇವರು ವಿಧಿಸಿರುವ ಷರತ್ತುಗಳು, ಜನರ ಭಾವನೆಗಳನ್ನು ಕೆಣಕುವ ರಾಜ್ಯ ಸರ್ಕಾರದ ಇಂತಹ ವರ್ತನೆ ಸಹಿಸಲು ಅಸಾಧ್ಯ. ಈ ಕೂಡಲೇ ವಿಧಿಸಿರುವ ಷರತ್ತುಗಳನ್ನು ವಾಪಸ್ ಪಡೆದು ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲು ಅನುಮತಿ ನೀಡಬೇಕೆಂದು ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.

ನಾವೇನು ದೇಶದ್ರೋಹದ ಕೆಲಸ ಮಾಡುತ್ತಿಲ್ಲ. ನಮ್ಮ ಆಚಾರ-ವಿಚಾರ ಸಂಸ್ಕೃತಿಗೆ ಧಕ್ಕೆ ತರಲು ಮುಂದಾಗಿರುವ ಸರ್ಕಾರದ ನಡೆ ಖಂಡನೀಯ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಒಂದೊಮ್ಮೆ ಷರತ್ತುಗಳನ್ನು ಸಡಿಲಿಕೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ. ಹಿಂದೂಗಳ ಹಬ್ಬಗಳಿಗೆ ಅಡೆತಡೆಗಳನ್ನು ಒಡ್ಡಬಾರದು, ಅರ್ಥಮಾಡಿಕೊಳ್ಳದ ಸರ್ಕಾರದ ಈ ನಡೆ ಖಂಡನೀಯ ಎಂದು ಹೇಳಿದ್ದಾರೆ.

ಈಗ ವಿಧಿಸಿರುವ ಷರತ್ತುಗಳನ್ನು ಹಿಂಪಡೆದು ಗಣಪತಿ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲು ಅಧಿಕಾರಿಗಳು ಸಹಕರಿಸಬೇಕು. ಸಾರ್ವಜನಿಕವಾಗಿ ಗಣಪತಿ ಪ್ರತಿಸ್ಥಾಪನೆ ಮಾಡುವವರು ಈ ಷರತ್ತುಗಳನ್ನು ತಲೆಕೆಡಿಸಿಕೊಳ್ಳದಂತೆ ಆಚರಿಸಿಕೊಳ್ಳುವಂತೆಯೂ ಸಚಿವ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ