Breaking News

ಅಣ್ಣ ಚಿರು ಸಮಾಧಿ ಬಳಿ ಪತ್ನಿ ಸೀಮಂತ ನೆರವೇರಿಸಿದ ಧ್ರುವ ಸರ್ಜಾ

Spread the love

ಕನ್ನಡ ಚಿತ್ರರಂಗದಲ್ಲಿ ನಟನೆ ಮತ್ತು ಗುಣದಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟ ಧ್ರುವ ಸರ್ಜಾ. ಸಿನಿಮಾ ಮತ್ತು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳ ಹಿಂದೆ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿದ್ದ ಧ್ರುವ ಸರ್ಜಾ ಅವರ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಇದೀಗ ಆಯಕ್ಷನ್​ ಪ್ರಿನ್ಸ್​ ಮನೆಯಲ್ಲಿ ಸೀಮಂತದ ಸಂಭ್ರಮ ಮನೆ ಮಾಡಿದೆ. ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ವಿಶೇಷ ಸ್ಥಳದಲ್ಲಿ ಹಾಗೂ ಬಹಳ ಸರಳ ಮತ್ತು ಶಾಸ್ತ್ರ ಬದ್ಧವಾಗಿ ಆಚರಣೆ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಧ್ರುವ ಸರ್ಜಾ ಅವರ ಕುಟುಂಬದರು ಪ್ರೇರಣಾಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಇನ್ನೊಂದು ಕಡೆ ಧ್ರುವ ಸರ್ಜಾ ಸಹೋದರ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದು, ಆ ಕುಟುಂಬ ಇವತ್ತಿಗೂ ಚಿರು ಇಲ್ಲದ ನೋವಿನಲ್ಲಿದೆ. ಧ್ರುವ ಸರ್ಜಾ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಿರು ಸ್ಮರಣೆ ಇಲ್ಲದೇ ಆ ಕಾರ್ಯಕ್ರಮ ಕೊನೆಯಾಗುವುದಿಲ್ಲ.

ಅಣ್ಣ ಚಿರು ಸಮಾಧಿ ಬಳಿ ಪತ್ನಿ ಸೀಮಂತ ನೆರವೇರಿಸಿದ ಧ್ರುವ ಸರ್ಜಾಅದೇ ರೀತಿ ಪ್ರೇರಣಾ ಅವರ ಸೀಮಂತ ಸಮಾರಂಭದಲ್ಲೂ ಚಿರು ಅವರನ್ನು ವಿಶೇಷವಾಗಿ ನೆನಪಿಸಿಕೊಳ್ಳಲಾಗಿದೆ. ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್​ ಹೌಸ್​ನಲ್ಲೇ ಸೀಮಂತ ಕಾರ್ಯ ಮಾಡಿರೋದು ವಿಶೇಷ. ಹೀಗಾಗಿ ತರಹೇವಾರಿ ಹೂಗಳಿಂದ ಇಡೀ ಫಾರ್ಮ್​ ಹೌಸ್‌ಅನ್ನು​ ಸಿಂಗಾರ ಮಾಡಿ ಹಳ್ಳಿ ಶೈಲಿಯಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಗಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ