Breaking News

ಮೃದಂಗ ನುಡಿಸಿ ವಿಶ್ವ ಪ್ರತಿನಿಧಿಗಳನ್ನು ಸ್ವಾಗತಿಸಲಿರುವ 12 ವರ್ಷದ ಸಂಗೀತ ಕಲಾವಿದ ದಕ್ಷ್

Spread the love

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆಯಲಿರುವ ಔತಣಕೂಟದಲ್ಲಿ 12 ವರ್ಷದ ಬಾಲಕ ದಕ್ಷಿ ಮೃದಂಗ ಬಾರಿಸುವ ಮೂಲಕ ಅತಿಥಿಗಳನ್ನು ಸ್ವಾಗತಿಸಲಿದ್ದಾರೆ. ಮೂಲಗಳ ಪ್ರಕಾರ, ವಿಶ್ವ ಪ್ರತಿನಿಧಿಗಳನ್ನು ಸ್ವಾಗತಿಸಲು ಆಯೋಜಿಸಲಾದ ಸಂಗೀತ ಕಛೇರಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಕನಿಷ್ಠ 78 ಸಂಗೀತಗಾರರು ಭಾಗವಹಿಸಲಿದ್ದಾರೆ.

ದೆಹಲಿಯ ವಸುಂಧರಾ ಎನ್‌ಕ್ಲೇವ್‌ನ ಸೋಮರ್‌ವಿಲ್ಲೆ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ದಕ್ಷ್ ಕೂಡ ಸಂಗೀತ ಕಚೇರಿಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಜಿ20 ಶೃಂಗಸಭೆಯ ಭಾಗವಾಗಿರುವುದು ನನಗೆ ಹೆಮ್ಮೆಯ ವಿಷಯ ಎಂದು ದಕ್ಷ್ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು, ಶಾಲೆಯ ಕಾರ್ಯದರ್ಶಿ ಮತ್ತು ಪ್ರಾಂಶುಪಾಲರು ಹಾಗೂ ತಮ್ಮ ಗುರುಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಭೋಜನದ ವೇಳೆ ಭಾರತ ಮಂಟಪದಲ್ಲಿ ಸಂಗೀತ ಕಛೇರಿ ನಡೆಯಲಿದೆ ಎಂದು ರಿಹರ್ಸಲ್ ವೇಳೆ ತಿಳಿಸಲಾಗಿತ್ತು ಎಂದು ದಕ್ಷ್ ಹೇಳಿದ್ದಾರೆ. “ನಾವು ಸಿಹಿ ಆಹಾರದ ಜೊತೆಗೆ ಮತ್ತು ಸಿಹಿ ಸಂಗೀತವನ್ನೂ ಉಣ ಬಡಿಸಬೇಕಿದೆ ಎಂದು ಅವರು ಹೇಳುತ್ತಾರೆ. ಅತಿಥಿಗಳು ಸಿಹಿ ಖಾದ್ಯದ ಜೊತೆಗೆ ಸುಮಧುರ ಸಂಗೀತವನ್ನು ಆನಂದಿಸುತ್ತಾರೆ.

ಪ್ರತಿದಿನ ಐದಾರು ಗಂಟೆಗಳವರೆಗೆ ತಾಲೀಮು: ದಕ್ಷ್ ಸೇರಿದಂತೆ ಎಲ್ಲಾ ಕಲಾವಿದರು ಕಳೆದ ಒಂಬತ್ತು ದಿನಗಳಿಂದ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಪ್ರತಿದಿನ ಐದಾರು ಗಂಟೆಗಳ ಕಾಲ ತಾಲೀಮು ನಡೆಸುತ್ತಿದ್ದಾರೆ. ಆಗಸ್ಟ್ 31 ರಂದು ನಡೆಯುವ ಈ ಸಂಗೀತ ಕಛೇರಿಯಲ್ಲಿ ಭಾಗವಹಿಸಲು ತಮಗೆ ಆಹ್ವಾನ ಬಂದಿತ್ತು ಎಂದು ದಕ್ಷ್ ತಿಳಿಸಿದರು. ತಲಮಣಿ ಪಿವಿ ಭೂಪತಿ ಅವರು, ದಕ್ಷ್ ಅವರ ತಂದೆ ಹಾಗೂ ಗುರುವೂ ಆಗಿದ್ದಾರೆ. ತಲಮಣಿ ಪಿವಿ ಭೂಪತಿ ನಗರ ಮೂಲದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಸಂಗೀತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ