Breaking News

ಬೆಳಗಾವಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ವರನಟ ಡಾ.ರಾಜ್‌ಕುಮಾರ್​ ಅವರ ಮೊಮ್ಮಗಳಾದ ಸರಸ್ವತಿ ಭಾಗಿಯಾಗಿ ಗಮನ ಸೆಳೆದರು.

Spread the love

ಬೆಳಗಾವಿ : ಇಲ್ಲಿನ ವೈಭವ ನಗರದ ರೂಪಾಲಿ ಹೊಸಕೋಟಿ ಎಂಬವರ ಮನೆಯಲ್ಲಿ ಗುರುವಾರ ಶ್ರೀಕೃಷ್ಣಜನ್ಮಾಷ್ಠಮಿ ನಿಮಿತ್ತ ವಿಶೇಷ ಪೂಜೆ ನಡೆಯಿತು.

ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಶಿವಬಸವ ನಗರದಲ್ಲಿ ನೆಲೆಸಿರುವ ಡಾ.ರಾಜ್‌ಕುಮಾರ್ ಮಗಳು‌ ಲಕ್ಷ್ಮಿ ಮತ್ತು ಗೋವಿಂದರಾಜ ದಂಪತಿಯ ಪುತ್ರಿ ಸರಸ್ವತಿ ಆಗಮಿಸಿದ್ದು ವಿಶೇಷವಾಗಿತ್ತು.

ಸರಸ್ವತಿ ಹಾಡು ಹಾಡಿ, ಶ್ರೀಕೃಷ್ಣನ ನೆನೆದು, ಎಲ್ಲರೊಂದಿಗೂ ಬೆರೆತು ಖುಷಿಪಟ್ಟರು. ಮತ್ತೊಂದೆಡೆ ಪೂಜೆಗೆ ಆಗಮಿಸಿದ್ದ ಮಹಿಳೆಯರು ಸರಸ್ವತಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹರ್ಷ ವ್ಯಕ್ತಪಡಿಸಿದರು‌. ಡಾ. ರಾಜ್‌ಕುಮಾರ ಮರಿ ಮೊಮ್ಮಗ ವರ್ಧಾನ್ ಕೂಡ ಇದ್ದರು. ಕಲಾವಿದ ಆಯುಷ ಹೊಸಕೋಟಿ ಶ್ರೀಕೃಷ್ಣನ ವೇಷದಲ್ಲಿ‌ ಮಿಂಚಿದರು.

 


Spread the love

About Laxminews 24x7

Check Also

ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ: ಡಿಜಿಟಲ್ ಅರೆಸ್ಟ್​​ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್

Spread the loveಮಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂದು ಖದೀಮರು ಅಮಾಯಕರನ್ನು ವಂಚಿಸಿ ಕೋಟಿಗಟ್ಟಲೆ ಹಣ ವಂಚಿಸುತ್ತಿರುವುದು ಬೆಳಕಿಗೆ ಬರುತ್ತಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ