Breaking News

ರಾಷ್ಟ್ರರಾಜಧಾನಿಯಲ್ಲಿ ಭಾರಿ ಭದ್ರತೆ… ಟ್ರ್ಯಾಕ್ಟರ್​​ನಲ್ಲಿ ಗಸ್ತು ತಿರುಗುತ್ತಿರುವ ದೆಹಲಿ ಪೊಲೀಸರು

Spread the love

 

ನವದೆಹಲಿ: ಇದೇ ಸೆಪ್ಟೆಂಬರ್ 9 ರಿಂದ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಇಡೀ ದೇಶವೇ ಅತಿಥಿಗಳನ್ನು ಸ್ವಾಗತಿಸಲು ಸಜ್ಜಾಗುತ್ತಿದೆ. ದೇಶ – ವಿದೇಶಗಳಿಂದ ನೂರಾರು ಗಣ್ಯವ್ಯಕ್ತಿಗಳು ರಾಷ್ಟ್ರರಾಜಧಾನಿಗೆ ಆಗಮಿಸುತ್ತಿದ್ದು ಅವರೆಲ್ಲರ ಭದ್ರತೆ ಬಹಳ ಮುಖ್ಯ.

 

 

ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಭಾರೀ ಭದ್ರತೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ರಾಷ್ಟ್ರರಾಜಧಾನಿ ಸುತ್ತ-ಮುತ್ತ ಪೊಲೀಸ್​ ಸರ್ಪಗಾವಲು ಏರ್ಪಡಿಸಲಾಗಿದೆ. ಭದ್ರತಾ ದೃಷ್ಟಿಯಿಂದ ದೆಹಲಿ ಪೊಲೀಸರು ಗುರುವಾರ ರಾಜ್ ಘಾಟ್ ಪ್ರದೇಶದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಗಸ್ತು ತಿರುಗುತ್ತಿರುವುದು ಸಹ ಕಂಡುಬಂದಿದೆ. ಪೊಲೀಸ್​ ಅಧಿಕಾರಿಯೊಬ್ಬರು ತಾವೇ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯವನ್ನು ನಾವು ಕಾಣಬಹುದು.

ದೋಣಿಯಲ್ಲಿ ಗಸ್ತು: ಮತ್ತೊಂದೆಡೆ ದೆಹಲಿ ಪೊಲೀಸರು ಯಮುನಾ ನದಿಯಲ್ಲಿ ದೋಣಿ ಮೂಲಕವೂ ಗಸ್ತು ನಡೆಸುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಯಮುನಾ ನದಿ ಮೂಲಕ ನವದೆಹಲಿ ಪ್ರವೇಶಿಸಿ ಜಿ20 ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಹುದು ಎಂಬ ಅನುಮಾನದ ಹಿನ್ನೆಲೆ ಯಮುನಾ ನದಿ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.


Spread the love

About Laxminews 24x7

Check Also

ಗಣಪತಿ ಹಬ್ಬದ ಆಗಮನ — ಗ್ರಾಮೀಣ ಭಾಗದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ಚೈತನ್ಯ ಸಾವಳಗಿ

Spread the love ಗಣಪತಿ ಹಬ್ಬದ ಆಗಮನ — ಗ್ರಾಮೀಣ ಭಾಗದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ಚೈತನ್ಯ ಸಾವಳಗಿ ರಾಜ್ಯದಾದ್ಯಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ