ವಿಜಯಪುರ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡು ಹೋಗುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಕಂಟ್ರಿ ಪಿಸ್ತೂಲ್,ಜೀವಂತ ಗುಂಡು ಜಪ್ತಿಗೈದಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಿಕ್ಕಬೇವನೂರ ಬಳಿ ದಾಳಿಗೈದಿದ್ದಾರೆ. ಚಡಚಣದ ದೇವರ ನಿಂಬರಗಿ ಗ್ರಾಮದ
ಪ್ರಶಾಂತ ನಾವಿ ಬಂಧಿತ ಆರೋಪಿ. ಇನ್ನು ಇಂಡಿಯಿಂದ ಚಿಕ್ಕಬೇವನೂರ ಕಡೆಗೆ ಹೋಗುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ
ಪಿಎಸ್ಐ ಸೋಮೇಶ ಗೆಜ್ಜಿ ನೇತೃತ್ವದಲ್ಲಿ ದಾಳಿಗೈದು ಒಂದು ಕಂಟ್ರಿ ಪಿಸ್ತೂಲ್, ಏಳು ಜೀವಂತ ಗುಂಡು, ಒಂದು ಮ್ಯಾಗ್ಜಿನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಆರೋಪಿ ವಿರುದ್ಧ ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7