Breaking News

ಚಂದ್ರಯಾನ -3 ಯಶಸ್ವಿಯಾದ ಹಿನ್ನಲೆ ಯಾದಗಿರಿಯ ಇಬ್ಬರು ದಂಪತಿಗಳು ತಮ್ಮ ಮಕ್ಕಳಿಗೆ ವಿಕ್ರಮ್ ಮತ್ತು ಪ್ರಜ್ಞಾನ್ ಎಂದು ನಾಮಕರಣ

Spread the love

ಯಾದಗಿರಿ : ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ. ವಿಕ್ರಮ್ ಲ್ಯಾಂಡರ್​ ಚಂದ್ರ ಮೇಲ್ಮೈ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಮಾಡಿದೆ.

ವಿಕ್ರಮ್ ಲ್ಯಾಂಡರ್​ ಚಂದ್ರನ ಮೇಲೆ ಇಳಿದ ಕೆಲವೇ ಗಂಟೆಗಳಲ್ಲಿ, ಲ್ಯಾಂಡರ್​ನಿಂದ ಪ್ರಜ್ಞಾನ್​ ರೋವರ್​ ಹೊರಬಂದಿದೆ. ಸದ್ಯ ವಿಕ್ರಮ್​ ಲ್ಯಾಂಡರ್​ ಮತ್ತು ಪ್ರಗ್ಯಾನ್​ ರೋವರ್​ ಚಂದ್ರನ ಅನ್ವೇಷಣೆಯನ್ನು ಪ್ರಾರಂಭಿಸಿದೆ. ಈ ಸಂಬಂಧ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಐತಿಹಾಸಿಕ ಚಂದ್ರಯಾನದ ಸವಿನೆನಪಿಗಾಗಿ ಇಬ್ಬರು ಪೋಷಕರು ತಮ್ಮ ನವಜಾತ ಶಿಶುಗಳಿಗೆ ವಿಕ್ರಮ್​ ಮತ್ತು ಪ್ರಜ್ಞಾನ್ ಎಂದು ನಾಮಕರಣ ಮಾಡಿದ್ದಾರೆ​.

ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಒಂದೇ ಕುಟುಂಬದಲ್ಲಿ ಜನಿಸಿದ ಇಬ್ಬರು ಮಕ್ಕಳಿಗೆ ವಿಕ್ರಮ್ ಮತ್ತು ಪ್ರಜ್ಞಾನ್ ಎಂದು ಹೆಸರಿಡಲಾಗಿದೆ. ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಂ ಎಂದು ಹೆಸರಿಡಲಾಗಿದ್ದು, ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಜ್ಞಾನ್ ಎಂದು ನಾಮಕರಣ ಮಾಡಲಾಗಿದೆ.

ವಿಕ್ರಮ್ ಹೆಸರಿನ ಮಗು ಜು.28 ರಂದು ಹಾಗೂ ಪ್ರಜ್ಞಾನ್ ಹೆಸರಿನ ಮಗು ಆ.14 ರಂದು ಜನಿಸಿದೆ. ಈ ಎರಡು ಮಕ್ಕಳ ನಾಮಕರಣವನ್ನು ಆ.24 ರಂದು ಮಾಡಲಾಗಿತ್ತು. ಭಾರತದ ಐತಿಹಾಸಿಕ ಸಾಧನೆಯ ಸವಿನೆನಪಿಗಾಗಿ ಮತ್ತು ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಲು ಈ ಹೆಸರುಗಳನ್ನು ಇಟ್ಟಿರುವುದಾಗಿ ಪೋಷಕರು ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳೆ ಹಾನಿ ಪರಿಹಾರದಿಂದ ವಂಚಿತರಾದ ಮರಕಟ್ಟೆ ರೈತರು; ಸರ್ಕಾರದ ವಿರುದ್ಧ ಆಕ್ರೋಶ.! ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ…

Spread the love ಬೆಳೆ ಹಾನಿ ಪರಿಹಾರದಿಂದ ವಂಚಿತರಾದ ಮರಕಟ್ಟೆ ರೈತರು; ಸರ್ಕಾರದ ವಿರುದ್ಧ ಆಕ್ರೋಶ.! ಜಿಲ್ಲಾಧಿಕಾರಿ ಕಛೇರಿ ಮುಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ