Breaking News

ಆ.18ರಂದು ಬೆಂಗಳೂರಿನಲ್ಲಿ ‘ಶೂನ್ಯ ನೆರಳು’ ಗೋಚರ

Spread the love

ಬೆಂಗಳೂರು: ನಗರದಲ್ಲಿ ನೆಲೆಸಿರುವ ಜನರು ಆಗಸ್ಟ್ 18ರಂದು ಮತ್ತೊಮ್ಮೆ ಶೂನ್ಯ ನೆರಳು ದಿನ ಕಣ್ತುಂಬಿಕೊಳ್ಳಲಿದ್ದಾರೆ.

ಅಪರೂಪದ ಶೂನ್ಯ ನೆರಳು ದಿನಕ್ಕೆ ಬೆಂಗಳೂರಿಗರು ಈ ವರ್ಷ ಸಾಕ್ಷಿಯಾಗಿದ್ದರು. ಏಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ಶೂನ್ಯ ನೆರಳಿನ ದಿನ ಗೋಚರವಾಗಿತ್ತು.

 ಪ್ರಾತಿನಿಧಿಕ ಚಿತ್ರಆ ದಿನದಂದು ಎರಡು ನಿಮಿಷಗಳ ಕಾಲ ಯಾವುದೇ ನೆರಳು ಕಂಡು ಬಂದಿರಲಿಲ್ಲ. ಸೂರ್ಯ ಸರಿಯಾಗಿ ಮನುಷ್ಯನ ನೆತ್ತಿಯ ಮೇಲೆ ಅಥವಾ ಕಿರಣಗಳು ಯಾವುದೇ ವಸ್ತುವಿನ ಮೇಲೆ ಲಂಬವಾಗಿ ಬಿದ್ದಾಗ ಅದು ಶೂನ್ಯ ನೆರಳಿನ ನಿಮಿಷವಾಗುತ್ತದೆ.

ಈ ಕುರಿತು ಮಾಹಿತಿ ನೀಡಿರುವ ಜವಾಹರ್ ಲಾಲ್ ನೆಹರು ತಾರಾಲಯ ಯಾವುದೇ ವಸ್ತುಗಳನ್ನು 90 ಡಿಗ್ರಿಯಲ್ಲಿಟ್ಟಾಗ ಅದರ ನೆರಳು ಎರಡು ನಿಮಿಷದವರೆಗೆ ಕಾಣುವುದಿಲ್ಲ ಎಂದು ತಿಳಿಸಿದೆ. ಪ್ರತಿ ದಿನ ಸೂರ್ಯ ಮಧ್ಯಾಹ್ನ ನೆತ್ತಿ ಮೇಲೆ ಬರುತ್ತಾನೆ. ಆದರೆ Zero shadow day ದಿನದಂದು ಯಾವುದೇ ಲಂಬ ರೀತಿಯ ವಸ್ತು/ ವ್ಯಕ್ತಿಗಳ ನೆರಳು ಗೋಚರವಾಗದು. ಭೂಮಿ ಗೋಳಾಕಾರದಲ್ಲಿದ್ದು, ಸೂರ್ಯನ ಕಿರಣಗಳು ಮಧ್ಯಾಹ್ನ ಸಮಭಾಜಕದಲ್ಲಿ ಮಾತ್ರ ಬೀಳುತ್ತವೆ. ಈ ನೆರಳು ಉತ್ತರ/ದಕ್ಷಿಣ ದಿಕ್ಕಿಗೆ ಬೀಳುವುದಿಲ್ಲ. ಸೂರ್ಯನ ಪಥವು ಉತ್ತರದ ಚಲನೆಯಲ್ಲಿ 6 ತಿಂಗಳು ಉತ್ತರಾಭಿಮುಖವಾಗಿರುತ್ತದೆ. ದಕ್ಷಿಣದ ಚಲನೆಯಲ್ಲಿ 6 ತಿಂಗಳುಗಳು ದಕ್ಷಿಣಾಭಿಮುಖವಾಗಿರುತ್ತದೆ ಎಂದು ತಾರಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

 ಪ್ರಾತಿನಿಧಿಕ ಚಿತ್ರ


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ