Breaking News

ಆಕಸ್ಮಿಕವಾಗಿ ಸ್ವಚ್ಛತಾ ಕಾರ್ಮಿಕನಿಗೆ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ನಟಿ‌ ರಚಿತಾ ರಾಮ್ ಕ್ಷಮೆ ಯಾಚಿಸಿದ್ದಾರೆ

Spread the love

ಬೆಂಗಳೂರು: ಕಾರು ಚಾಲಕನಿಂದಾದ ಆಕಸ್ಮಿಕ ತಪ್ಪಿನಿಂದ ನಿನ್ನೆ (ಸೋಮವಾರ) ಸ್ಯಾಂಡಲ್​ವುಡ್​ ನಟಿ​ ರಚಿತಾ ರಾಮ್ ಅವರು ಮುಜುಗರಕ್ಕೆ ಒಳಗಾಗಿದ್ದರು.

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೋಗುವ ಸಂದರ್ಭದಲ್ಲಿ ರಚಿತಾ ರಾಮ್‌ ಅವರಿದ್ದ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ನಟಿ ಕಾರ್ಮಿಕನ ಬಳಿ ಕ್ಷಮೆಯಾಚಿಸದೇ ಸ್ಥಳದಿಂದ ಹೊರಟು ಹೋಗಿದ್ದರು ಎಂದು ಆರೋಪಿಸಲಾಗಿತ್ತು. ಸಾಮಾಜಿಕ ಜಾಲತಾಣ ಸೇರಿದಂತೆ ಕಾರ್ಮಿಕರ ಒಕ್ಕೂಟಗಳಿಂದಲೂ ವಿರೋಧ ವ್ಯಕ್ತವಾಗಿತ್ತು.

 

ಈ‌ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಚಿತಾ ರಾಮ್‌, ಇಂದು ಕಾರ್ಮಿಕನನ್ನು ತಮ್ಮ ಮನೆಗೆ ಕರೆಸಿಕೊಂಡು ಕ್ಷಮೆಯಾಚಿಸಿದ್ದಾರೆ. “ಲಾಲ್‌ ಬಾಗ್‌ ಕಾರ್ಯಕ್ರಮಕ್ಕೆ ಹೋದ ವೇಳೆ ಆಕಸ್ಮಿಕವಾಗಿ ಘಟನೆ ನಡೆಯಿತು. ಇಂದು ನಾನು ಅವರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಕಾರು ಗುದ್ದಿದ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ನಮ್ಮ ಕಡೆಯಿಂದ ತಪ್ಪಾಗಿತ್ತು. ನಾನು ಬೇಕಂತಲೇ ಮಾಡಿದ ತಪ್ಪಲ್ಲ. ಆಕಸ್ಮಿಕವಾಗಿ ನಡೆದಿದೆ. ಹೀಗಾಗಿ, ಅಣ್ಣಾ ನಾನು ನಿಮ್ಮಲ್ಲಿ ಮನಸಾರೆ ಕ್ಷಮೆ ಕೇಳುತ್ತೇನೆ. ನಮ್ಮ ಚಾಲಕನ ಕಡೆಯಿಂದಲೂ ಕ್ಷಮೆ ಯಾಚಿಸುತ್ತಿದ್ದೇನೆ. ಈ ವಿಚಾರವಾಗಿ ಕಾರ್ಮಿಕರಿಗೆ ನೋವುಂಟಾಗಿದ್ದರೆ, ಇನ್ನೊಮ್ಮೆ ಸಾರಿ ಕೇಳುತ್ತೇನೆ” ಎಂದು ತಿಳಿಸಿದರು.

ರಚಿತಾ ರಾಮ್‌ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾರ್ಮಿಕ ರಂಗಪ್ಪ ಸ್ವಾತಂತ್ರ್ಯ ದಿನಕ್ಕೆ ಶುಭಾಶಯ ಕೋರಿದ್ದಾರೆ.

“ನಾನು ಸ್ವಾತಂತ್ರ್ಯ ದಿನಾಚರಣೆಯಂದು ಎಂದಿಗೂ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿರಲಿಲ್ಲ. ಆದರೆ, ಇಂದು ಬೆಳಗ್ಗೆ ರಂಗಪ್ಪ ನಮ್ಮ ಮನೆಗೆ ಬರುವವರೆಗೂ ಕಾದು, ನಂತರ ಸ್ವಾತಂತ್ರ್ಯ ದಿನಾಚರಿಸಿದೆವು. ರಂಗಪ್ಪ ಅವರು ಲಾಲ್‌ಬಾಗ್‌ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬಿಡುವು ಮಾಡಿಕೊಂಡು ಮನೆಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ” ಎಂದು ರಚಿತಾ ರಾಮ್‌ ವಿಡಿಯೋದಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

2025 – 26 ಹಂಗಾಮಿನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿ ಸರ್ಕಾರದಿಂದ ಅಧಿಕೃತ ಆದೇಶ

Spread the love ಬೆಂಗಳೂರು: 2025-26ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹೆಚ್ಚುವರಿ ಕಬ್ಬು ಬೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ