Breaking News

ಸಾಯುವ ಕೊನೆಕ್ಷಣದಲ್ಲಿ ವಿಡಿಯೋ ಮಾಡಿದ ಪ್ರಿಯಕರನೊಬ್ಬ, ಪ್ರಿಯತಮೆಗೆ ತನ್ನ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನ ನೀಡಿ ಅಸುನೀಗಿದ್ದಾನೆ.

Spread the love

ಬೆಂಗಳೂರು): ರೋಗ ಉಲ್ಬಣಗೊಂಡು ಸಾಯುವ ಕೊನೆಕ್ಷಣದಲ್ಲಿ ವಿಡಿಯೋ ಮಾಡಿದ ಪ್ರಿಯಕರನೊಬ್ಬ, ಪ್ರಿಯತಮೆಗೆ ತನ್ನ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನ ನೀಡಿ ಅಸುನೀಗಿದ್ದಾನೆ.

ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಕಿರಣ್ (22) ಮೃತಪಟ್ಟ ಯುವಕ. ಆಗಸ್ಟ್ 9ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಕಿರಣ್ ರೇಬೀಸ್ ರೋಗದಿಂದಾಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಯುವಕನಿಗೆ ತನ್ನ ಸಾವಿನ ಕ್ಷಣಗಳು ಸಮೀಪಿಸುತ್ತಿರುವ ಅರಿವಾಗಿತ್ತು. ಹೀಗಾಗಿ, ಪ್ರೀತಿಸಿದ ಹುಡುಗಿಯ ನೆನಪಾಗಿ ಬದುಕಿನ ಕಡೇಯ ಕ್ಷಣಗಳಲ್ಲಿ ಲೈವ್ ವಿಡಿಯೋ ಮಾಡಿದ್ದಾನೆ.

“ಹಾಯ್ ಬಂಗಾರಿ, ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ. ನಿಮ್ಮ ಅಪ್ಪ ಹೇಳಿದ ಹಾಗೆಯೇ ಒಳ್ಳೆಯ ಹುಡುಗನನ್ನು ನೋಡಿ ಮದುವೆಯಾಗು. ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರಿಡು. ಇದು ನನ್ನ ಆಕಸ್ಮಿಕ ಸಾವು. ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗು. ನನ್ನ ಸಾವಿಗೆ ನಿನ್ನ ತಂಗಿಯನ್ನು ಕರೆದುಕೊಂಡು ಬಾ. ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ. ಹೀಗೆಯೇ ಚೆನ್ನಾಗಿರಿ” ಎಂದು ಕಿರಣ್ ಲೈವ್​​ನಲ್ಲಿ ಕೈ ಮುಗಿದು ಆಸ್ಪತ್ರೆಯ ಬೆಡ್ ಮೇಲೆ ಪ್ರಾಣಬಿಟ್ಟಿದ್ದಾನೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ