Breaking News

ಅತಿಲೋಕ ಸುಂದರಿ ಶ್ರೀದೇವಿ ನೆನೆದ ಗೂಗಲ್​ ಡೂಡಲ್​

Spread the love

ಬಾಲಿವುಡ್​ ಲೇಡಿ ಸೂಪರ್​ ಸ್ಟಾರ್​ ಶ್ರೀದೇವಿ ಹುಟ್ಟಿದ ದಿನವಿಂದು. ಡೂಡಲ್​ನಲ್ಲಿ ಅತಿಲೋಕ ಸುಂದರಿಯ ಚಿತ್ರವನ್ನು ಹಂಚಿಕೊಂಡು, ಗೂಗಲ್​ ಜನ್ಮದಿನದ ಶುಭಕೋರಿದೆ.

ಇಂದು ಬಾಲಿವುಡ್​ ನಟಿ ಶ್ರೀದೇವಿ ಹುಟ್ಟಿದ ದಿನ.

ಅವರಿಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. 90ರ ದಶಕದಲ್ಲಿ ಬಣ್ಣದ ಲೋಕವನ್ನಾಳಿ ಮಿಂಚಿ ಮರೆಯಾದ ಈ ನಟಿಗೆ ಈಗಲೂ ದೊಡ್ಡ ಅಭಿಮಾನಿಗಳ ದಂಡಿದೆ. ಈ ವಿಶೇಷ ದಿನದಂದು ಫ್ಯಾನ್ಸ್ ಅವರನ್ನು ನೆನೆದು ಬೇಸರ ಪಡುತ್ತಿದ್ದಾರೆ. ಇದೀಗ ಗೂಗಲ್​ ಡೂಡಲ್​ ಕೂಡ ಲೇಡಿ ಸೂಪರ್​ ಸ್ಟಾರ್ ಶ್ರೀದೇವಿ ಅವರನ್ನು ನೆನಪಿಸಿಕೊಂಡಿದೆ.

ನೋಡಲು ದಂತದ ಗೊಂಬೆಯಂತಿದ್ದ ಶ್ರೀದೇವಿ ತಮ್ಮ ನಟನೆ, ನೃತ್ಯ, ಮಾತಿನಿಂದಲೂ ಈಗಲೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರ. ಅವರ ಜನ್ಮದಿನವಾದ ಇಂದು ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಡೂಡಲ್​ನಲ್ಲಿ ಶ್ರೀದೇವಿ ಅವರ ಚಿತ್ರವನ್ನು ಹಂಚಿಕೊಂಡು, ಗೂಗಲ್​ ಜನ್ಮದಿನದ ಶುಭಕೋರಿದೆ. ನಟಿ ಶ್ರೀದೇವಿ ನಾಟ್ಯ ಮಾಡುವ ಮೋಹಕ ಭಂಗಿಯಲ್ಲಿ ಡೂಡಲ್​ನಲ್ಲಿ ಕಾಣಬಹುದು.

 ಖುಷಿ ಕಪೂರ್ ಪೋಸ್ಟ್​ಪತ್ನಿಯ ನೆನೆದ ಬೋನಿ ಕಪೂರ್​: ಶ್ರೀದೇವಿ ಅವರ ಪತಿ, ಚಿತ್ರ ನಿರ್ಮಾಪಕ ಬೋನಿ ಕಪೂರ್​ ಪತ್ನಿಯೊಂದಿಗಿನ ಥ್ರೋಬ್ಯಾಕ್​ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಫೋಟೋದಲ್ಲಿ ಶ್ರೀದೇವಿ ಕಪ್ಪು ಬಣ್ಣದ ಜಾಕೆಟ್​ ಮತ್ತು ತೆರೆದ ಕೂದಲಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಬೋನಿ ಕಪೂರ್​ ಗ್ರೇ ಜಾಕೆಟ್​ ಧರಿಸಿ, ಪತ್ನಿಯನ್ನು ಹಿಡಿದುಕೊಂಡಿದ್ದಾರೆ. ಈ ಫೋಟೋಗೆ ‘ಹ್ಯಾಪಿ ಬರ್ತ್​ಡೇ’ ಎಂದು ಕ್ಯಾಪ್ಶನ್​ ಬರೆದು ಹೃದಯ ಎಮೋಜಿನೊಂದಿಗೆ ಹಂಚಿಕೊಂಡಿದ್ದಾರೆ.

ಶ್ರೀದೇವಿಗೆ ಮಗಳು ಖುಷಿ ಕಪೂರ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಥ್ರೋಬ್ಯಾಕ್​ ಫೋಟೋವನ್ನು ಹಂಚಿಕೊಂಡು, ಹ್ಯಾಪಿ ಬರ್ತ್​ಡೇ ಮಮ್ಮಾ ಎಂಬ ಶೀರ್ಷಿಕೆಯೊಂದಿಗೆ ವೈಟ್​ ಹೃದಯದ ಎಮೋಜಿನೊಂದಿಗೆ ಶುಭಕೋರಿದ್ದಾರೆ. ಫೋಟೋದಲ್ಲಿ ಶ್ರೀದೇವಿ, ಜಾಹ್ನವಿ ಕಪೂರ್​ ಮತ್ತು ಖುಷಿ ಕಪೂರ್​ ಇದ್ದಾರೆ.


Spread the love

About Laxminews 24x7

Check Also

ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಇಂದು ಯಮಕನಮರಡಿ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆ

Spread the love ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಇಂದು ಯಮಕನಮರಡಿ ಗ್ರಾಮದಲ್ಲಿ ನಡೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ