Breaking News

ಮಹಿಳೆ ಮೇಲೆ ಅತ್ಯಾಚಾರ, ಹಣ ವಸೂಲಿ ಆರೋಪ: ಸ್ಯಾಂಡಲ್​ವುಡ್​ ನಿರ್ಮಾಪಕನ ಬಂಧನ

Spread the love

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ನಡೆಸಿ, ಹಣ ವಸೂಲಿ ಮಾಡಿದ ಆರೋಪದಡಿ ಕೊಡಿಗೆಹಳ್ಳಿ ಠಾಣೆ ಪೊಲೀಸರು ಕನ್ನಡ ಚಿತ್ರರಂಗದಲ್ಲಿ ‘ಸ್ವಯಂಕೃಷಿ’ ಎಂಬ ಚಿತ್ರ ನಿರ್ಮಾಣ ಮಾಡಿ, ನಟಿಸಿದ್ದ ವೀರೇಂದ್ರ ಬಾಬು ಎಂಬುವರನ್ನು ಬಂಧಿಸಿದ್ದಾರೆ.

ನಿರ್ಮಾಪಕ ತನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ, ಅದರ ವಿಡಿಯೋ ಸೆರೆ ಹಿಡಿದುಕೊಂಡು ಬೆದರಿಕೆ ಹಾಕಿದ್ದಾರೆ ಹಾಗೂ 15 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ 36 ವರ್ಷದ ಮಹಿಳೆಯೊಬ್ಬರು ಕೊಡಿಗೆಹಳ್ಳಿ ಪೊಲೀಸ್​ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು.

ದೂರಿನ ಮಾಹಿತಿ: ದೂರುದಾರ ಮಹಿಳೆಯು 2021ರ ನವೆಂಬರ್‌ನಲ್ಲಿ ಕೆಲಸವೊಂದರ ನಿಮಿತ್ತ ವೀರೇಂದ್ರ ಬಾಬುನನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕಾಫಿಯಲ್ಲಿ ಮತ್ತೇರಿಸುವ ಔಷಧ ಸೇರಿಸಿ ಕುಡಿಸಿ ಅತ್ಯಾಚಾರ ಎಸಗಿದ್ದು, ವೀರೇಂದ್ರ ಬಾಬು ಕೃತ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ. ಬಳಿಕ ಆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ 15 ಲಕ್ಷ ರೂ. ಹಣ ಪೀಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಒಡವೆ ಮಾರಾಟ ಮಾಡಿ ಹಣ ನೀಡಿದ್ದ ದೂರುದಾರ ಮಹಿಳೆ ತನ್ನ ಘನತೆಗೆ ಧಕ್ಕೆ ಬರಬಾರದು ಎಂದು ಸುಮ್ಮನಾಗಿದ್ದರು. ಆದರೆ, ಜುಲೈ 30ರಂದು ದೂರುದಾರಳಿಗೆ ಬೆದರಿಸಿದ್ದ ವೀರೇಂದ್ರ ಬಾಬು ಆಕೆಯನ್ನು ಪುನಃ ತನ್ನ ಬಳಿ ಕರೆಯಿಸಿಕೊಂಡಿದ್ದಾನೆ. ಬಳಿಕ ತನ್ನ ಸ್ನೇಹಿತರಾದ ನಿರಂಜನ್ ರಾವ್, ಬಸವರಾಜ್, ಶಿವಕುಮಾರ್, ದೀಕ್ಷಿತ್ ನೆರವಿನಿಂದ ಮಹಿಳೆಯನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಕಡೆ ಸುತ್ತಾಡಿಸಿ, ಆಕೆಯ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿದ್ದಾನೆ. ಪಿಸ್ತೂಲ್ ತಲೆಗೆ ಇಟ್ಟು ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಮೇರೆಗೆ ವೀರೇಂದ್ರ ಬಾಬು, ನಿರಂಜನ್ ರಾವ್, ಬಸವರಾಜ್, ಶಿವಕುಮಾರ್ ಹಾಗೂ ದೀಕ್ಷಿತ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ನಿರ್ಮಾಪಕ ವೀರೇಂದ್ರ ಬಾಬುನನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಕೊಡಿಗೆಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ‌.


Spread the love

About Laxminews 24x7

Check Also

ಕಬ್ಬು ಬೆಳೆಗಾರರ ಕೂಗಿಗೆ ಸ್ಪಂದಿಸಿದ ಸಚಿವ ಸಂಪುಟ ಸಭೆ: ಸುದೀರ್ಘ 3 ಗಂಟೆ ಚರ್ಚೆ*

Spread the love ಕಬ್ಬು ಬೆಳೆಗಾರರ ಕೂಗಿಗೆ ಸ್ಪಂದಿಸಿದ ಸಚಿವ ಸಂಪುಟ ಸಭೆ: ಸುದೀರ್ಘ 3 ಗಂಟೆ ಚರ್ಚೆ* *ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ