Breaking News

ಪತಿಯೇ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿ ಪರಾರಿ

Spread the love

ಪತಿಯೇ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿ ಪರಾರಿಯಾದ ಘಟನೆ ನಗರದ ನೇಕಾರನಗರದ ಬಸವೇಶ್ವರ ಸರ್ಕಲ್ ಬಳಿ‌ ಇಂದು‌ ಮುಂಜಾನೆ ನಡೆದಿದೆ‌.

ಕೊಲೆಯಾದ ಮಹಿಳೆ ಸುಧಾ (೨೪) ಎಂದು ತಿಳಿದು ಬಂದಿದ್ದು, ಪತಿ ಶಿವಯ್ಯಾ ಹಿರೇಮಠ (೨೮) ಎಂಬಾತನೇ ಕುಡಿದ ಮತ್ತಿನಲ್ಲಿಯೇ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಬೆಳಗಿನ ಜಾವ ೧೨.೩೦ ರಿಂದ ಬೆಳಿಗ್ಗೆ ೯.೩೦ ರ ಮಧ್ಯದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಪತಿ ಶಿವಯ್ಯಾ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ, ಈತನು ಸಾಲದ ಬಾದೆಯಿಂದ ಹಾಗೂ ಸಾರಾಯಿ ಕುಡಿತಕ್ಕೆ ಒಳಗಾಗಿದ್ದ ಎನ್ನಲಾಗಿದ್ದು, ಕೌಟುಂಬಿಕ ಕಲಹದಿಂದಾಗಿ ಜಗಳ ವಿಕೋಪಕ್ಕೆ ಹೋದ ಪರಿಣಾಮ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ ೨-೩ ವರ್ಷಗಳ ಹಿಂದೆ ಈ ಜೋಡಿ ಪರಸ್ಪರ ಪ್ರೀತಿಸಿ ಮದುಯಾಗಿದ್ದಾರೆನ್ನಲಾಗಿದ್ದು, ಇವರಿಗೆ ಗಂಡು ಮಗು ಇದ್ದು, ಇದೀಗ ಮಗು ತಾಯಿಯನ್ನು ಕಳೆದುಕೊಂಡ ಘಟನೆ ಮನಕಲಕುವಂತಾಗಿದೆ.

ಈ ಘಟನೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ


Spread the love

About Laxminews 24x7

Check Also

ಹೆಸರು ಮತ್ತು ಸೋಯಾಬೀನ್ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ

Spread the loveಸವದತ್ತಿ ಟಿ.ಎ.ಪಿ.ಸಿ.ಎಂ.ಎಸ್. ಲಿಮಿಟೆಡ್, ಕೃಷಿ ಮಾರಾಟ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಗೋಕಾಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ