ಗದಗ : ಡ್ರೋನ್ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ (ವೈಮಾನಿಕ ಭೂ ಸಮೀಕ್ಷೆ)ಗೆ ಚಾಲನೆ ನೀಡಲಾಗಿದೆ.
ಈ ವೇಳೆ ಜಮೀನುಗಳಲ್ಲಿ ಮಿನಿ ವಿಮಾನ ಆಕಾರ ಹೋಲುವ ಡ್ರೋನ್ ಹಾರಾಟ ನಡೆಸುತ್ತಿರುವುದನ್ನು ಕಂಡ ರೈತರು ಆತಂಕಗೊಂಡ ಘಟನೆ ನಡೆಯಿತು.
ಜಿಲ್ಲೆಯ ಮುಂಡರಗಿ ತಾಲೂಕಿನ ಹಲವು ರೈತರು ಡ್ರೋನ್ ಹಾರಾಟವನ್ನು ಕಂಡಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ವಿಮಾನ ಹಾರಾಟ ನಡೆಸಿ ಆತಂಕ ಸೃಷ್ಟಿಸಿದ್ದವು. ಇದರ ಬೆನ್ನಲ್ಲೇ ಈಗ ಚಿಕ್ಕ ವಿಮಾನ ಹಾರಾಟವನ್ನು ಗಮನಿಸಿ ಬೆಚ್ಚಿಬಿದ್ದಿದ್ದಾರೆ. ಯಾಕೆ ನಮ್ಮ ಜಮೀನುಗಳಲ್ಲಿ ಈ ವಿಮಾನ ಹಾರಿಸ್ತಿದ್ದೀರಿ ಎಂದು ಮುಂಡರಗಿಯ ಬರದೂರ ಬಳಿ ವಿಮಾನ ಹಾರಾಟ ನಡೆಸುತ್ತಿದ್ದ ಸಿಬ್ಬಂದಿ ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡ್ರೋನ್ ಮೂಲಕ ಜಿಲ್ಲೆಯಲ್ಲಿ ಭೂ ಮಾಪನ ಇಲಾಖೆಯಿಂದ ಸರ್ವೇ ಕಾರ್ಯ ನಡೆಯುತ್ತಿದೆ. ಇದು ವೈಮಾನಿಕ ಭೂ ಸಮೀಕ್ಷೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಪಷ್ಟನೆ ನೀಡಿದರು. ಆದರೂ ಕೇಳದ ರೈತರು, ಯಾವ ಕಾರಣಕ್ಕೆ ಈ ರೀತಿ ನಮ್ಮ ಜಮೀನುಗಳಲ್ಲಿಯೇ ಸರ್ವೇ ಮಾಡ್ತಿದಿರಿ. ಹಿಂದೆ ದೊಡ್ಡದೊಂದು ವಿಮಾನ ಹಾರಾಟ ನಡೆಸಿತ್ತು. ಅವತ್ತೂ ಇದೇ ರೀತಿ ಸರ್ವೇ ಕಾರ್ಯ ಎಂದು ಹೇಳಿದ್ರು. ಈಗ ಚಿಕ್ಕದೊಂದು ವಿಮಾನ ತಂದು ಇದೊಂದು ಡ್ರೋನ್ ಕ್ಯಾಮರಾ ಎಂದು ಹೇಳ್ತಿದ್ದೀರಿ. ಯಾವ ಕಾರಣಕ್ಕೆ, ಯಾವ ಇಲಾಖೆಯಿಂದ ಸರ್ವೇ ಮಾಡಲಾಗ್ತಿದೆ, ಯಾರು ಆದೇಶ ಮಾಡಿದ್ದಾರೆ ಅಂತೆಲ್ಲ ಪ್ರಶ್ನೆಗಳನ್ನು ಕೇಳತೊಡಗಿದರು