ವಿದ್ಯತ್ ಬಿಲ್ ಹೆಚ್ಚಳದಿಂದಾಗಿ ನಗರದೆಲ್ಲಡೆ ಪ್ರತಿಭಟನೆಗಳು ನಡೆಯುತ್ತಿವೆ ಅದೇ ರೀತಿಯಾಗಿ ಇಂದು ಬೆಳಗಾವಿಯ ಚವ್ಹಾಟ ಗಲ್ಲಿಯ ಸಾರ್ವಜನಿಕ ಮಹಿಳಾ ಮಂಡಳಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ಮಾಧ್ಯಮಗಳ ಜೋತೆ ಮಾತನಾಡಿದ ಅಕ್ಕಾತಾಯಿ ಸುತಾರ ಪ್ರತಿ ತಿಂಗಳ ವಿದ್ಯುತ್ ಬಿಲ್ಲು ಬರುವುದಕ್ಕಿಂತ ಈ ತಿಂಗಳ ವಿದ್ಯುತ್ ಬಿಲ್ಲು 3 ಪಟ್ಟು ಹೆಚ್ಚಾಗಿದ್ದು ಇದರಿಂದ ಪ್ರತಿಯೊಬ್ಬರು ತೊಂದರೆ ಅನುಭವಿಸುತ್ತಿದ್ದಾರೆ. ಅಂದರೆ ವಿದ್ಯುತ್ ಅಲ್ಲು ರೂ. 500 ಬರುವ ಜಾಗದಲ್ಲಿ 3 ಪಟ್ಟು ಹೆಚ್ಚಾಗಿರುತ್ತದೆ. ಆರ್ಥಿಕವಾಗಿ ಕಡು ಬಡವರು ಇದ್ದಾರೆ ಅವರು ಹೇಗೆ ಜೀವನ ನಡೆಸಬೇಕು ?.
ವಿದ್ಯುತ್ ಸಮಸ್ಯೆಗೆ ಅತಿ ಶೀಘ್ರವಾಗಿಯೇ ಸರ್ಕಾರ ಪರಿಹಾರ ಒದಗಿಸಬೇಕು, ಕುಡಿಯುವ ನೀರಿನ ಯೋಜನೆಯನ್ನು ಎಲ್ ಎಂಡ್ ಟಿ ಗೆ ನೀಡಿರುವದರಿಂದ ನೀರಿನ ಪೊರೈಕೆಯಾಗುತ್ತಿಲ್ಲಅಲ್ಲದೆ ಬಳಸಲು ಯೋಗ್ಯವಲ್ಲದ (ಡ್ರೈನೇಜ್) ನೀರು ಬರುತ್ತಿದೆ ನಮಗೆ ಮೊದಲನ ತರಹವೇ ಕಾರ್ಪೋರೇಷನ್ ಮೂಲಕ ನೀರನ್ನು ಬಿಡಬೇಕು ಮತ್ತು ಎಲ್ ಎಂಡ್ ಟಿ ಕಂಪನಿಯರಿಗೆ ನೀಡಿದ ಅನುಮತಿಯನ್ನು ರದ್ದು ಮಾಡಬೇಕೆಂದು ಎಂದು ಹೇಳಿದರು. —
ನಂತರ ಚವ್ಹಾಟ್ ಗಲ್ಲಿ ನಿವಾಸಿ ಶಿಲ್ಪಾ ಬಾಲಟೆಕರ ಮಾತನಾಡಿ ವಿದ್ಯತ ಬಿಲ್ ಹೆಚ್ಚಳದಿಂದ ಬಹಳ ತೊಂದರೆ ಯಾಗುತ್ತಿದ್ದು ತಿಂಗಳಿಗೆ 500 ವರೆಗೆ ಬರುತ್ತಿದ್ದ ಬಿಲ್ ಇಗ 2000ದಿಂದ 3000 ಸಾವಿರದ ವರೆಗೆ ಬರುತ್ತಿದೆ. ಬಾಡಿಗೆ ಮನೆಯಲ್ಲಿ ವಾಸಿಸುವ ನಾವು ದಿನನಿತ್ಯದ ಖರ್ಚು ಮಕ್ಕಳ ಶಾಲೆಯ ಪೀಜ್ ತುಂಬಲು