Breaking News

ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್……..

Spread the love

ಬೆಳಗಾವಿ/ಚಿಕ್ಕೋಡಿ: ಕೊರೊನಾ ಅಟ್ಟಹಾಸದಿಂದ ಮಾಸ್ಕ್ ಧರಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್ ತಯಾರಿಸಲಾಗಿದೆ.

ಮಹಾರಾಷ್ಟ್ರದ ಕೊಲ್ಲಾಪೂರ ನಗರದ ಆಭರಣ ವ್ಯಾಪಾರಿ ಸಂದೀಪ್ ಸಾಂಗವಕರ ಬೆಳ್ಳಿ ಮಾಸ್ಕ್ ತಯಾರಿಸಿದ್ದಾರೆ. ವಿಶೇಷವಾಗಿ ಕೊರೊನಾ ಭೀತಿಯಲ್ಲಿ ಮದುವೆ ಆಗುತ್ತಿರುವ ನೂತನ ವಧು-ವರರಿಗಾಗಿ ಈ ಮಾಸ್ಕ್ ತಯಾರಿಸಲಾಗಿದೆ.

ಮದುವೆ ಸಮಾರಂಭದಲ್ಲಿ ವಧು-ವರರೂ ಈ ಮಾಸ್ಕ್ ಧರಿಸಿ ರಿಚ್ ಆಗಿ ಮದುವೆ ಮಾಡಿಕೊಳ್ಳುವರಿಗೆ ಈ ಮಾಸ್ಕ್ ಸಿದ್ಧಪಡಿಸಲಾಗಿದ್ದು, ಈ ಮಾಸ್ಕ್‌ಗೆ ಈಗಿನಿಂದಲೇ ಡಿಮ್ಯಾಂಡ್ ಆರಂಭವಾಗಿದೆ. ಉಡುಗೊರೆ ನೀಡುವುದಕ್ಕೂ ಈ ಮಾಸ್ಕ್ ಕೊಳ್ಳಲು ಜನ ತಯಾರಾಗಿದ್ದಾರೆ.

25 ಗ್ರಾಂ ತೂಕದಲ್ಲಿ ಅಂದರೆ 2,500 ರೂ.ಗಳಿಂದ 3 ಸಾವಿರ ರೂ.ಗಳಲ್ಲಿ ಈ ಮಾಸ್ಕ್ ಖರೀದಿಗೆ ಲಭ್ಯವಿದೆ. ಮಹರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಭಿನ್ನ ರೀತಿಯ ಮಾಸ್ಕ್‌ಗಳು ಲಭ್ಯವಾಗುತ್ತಿವೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ

Spread the love ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ