Breaking News

 ಜಿಲ್ಲೆಯಲ್ಲಿ ಶೇ.75ರಷ್ಟು ಮತದಾರರ ಪಟ್ಟಿ ಮ್ಯಾಪಿಂಗ್ ಪೂರ್ಣ

Spread the love

ಮತದಾರರ ಪಟ್ಟಿಯ ವಿಶೇಷ   ಪರಿಷ್ಮರಣೆಯ ಪೂರ್ವಸಿದ್ಧತೆ ಭಾಗವಾಗಿ 2022ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಪ್ರಕ್ರಿಯೇ ಪ್ರಗತಿ ಹಂತದಲ್ಲಿದ್ದು, ಜಿಲ್ಲೆಯಲ್ಲಿ ಶೇ.75ರಷ್ಟು ಪೂರ್ಣಗೊಂಡಿದ್ದು, ವಾರದಲ್ಲಿ ಮ್ಯಾಪಿಂಗ್ ಕಾರ್ಯ ಪೂರ್ಣಗೊಳ್ಳಲಿದೆ. ಮುಂದಿನ ಭಾನುವಾರ ಸಭೆ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಡಿದ ಅವರು,  ಮತದಾರರ ಪಟ್ಟಿ ಮ್ಯಾಪಿಂಗ್ ಬೇಗ ಪೂರ್ಣಗೊಳಿಸಿ ಚುನಾವಣೆ ಆಯೋಗ ಸಲ್ಲಿಸಬೇಕು. ಅರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಸೂಚಿಸಲಾಗಿದೆ. ಮ್ಯಾಪಿಂಗ್ ಸಮಸ್ಯೆ ಪರಿಹರಿಸಲು ಪ್ರತ್ಯೇಕ ಅಧಿಕಾರಿಗಳ  ತಂಡ ರಚಿಸಲಾಗಿದೆ ಎಂದರು,
ಬೆಳಗಾವಿ ನಗರ ಆಯ್ಕೆ ಯಾಗಿರುವ  ಸಿಟೀಸ್-2 ಯೋಜನೆಗೆ ರಾಜ್ಯ ಸರ್ಕಾರ, ಮಹಾನಗರ ಪಾಲಿಕೆ ಅನುದಾನ ಪಾವತಿ ಕುರಿತು ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಳ್ಳಲಾಗುವುದು. ಈ ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ವಹಿಸಲಾಗುವುದು.

Spread the love

About Laxminews 24x7

Check Also

ಕೆಎಲ್‌ಇ ಆಸ್ಪತ್ರೆಯಲ್ಲಿ ಬೇಸಿಕ್ ಲೈಫ್ ಸಪೋರ್ಟ್ ತರಬೇತಿ ಕಾರ್ಯಕ್ರಮ

Spread the loveಬೆಳಗಾವಿ: ವ್ಯಕ್ತಿಯ ಹಿನ್ನೆಲೆಯನ್ನು ಗುರುತಿಸದೇ ಆತನ ಜೀವ ಉಳಿಸುವಲ್ಲಿ ಬೇಸಿಕ್ ಲೈಫ್ ಸಪೋರ್ಟ್‌ನ ಕೌಶಲ್ಯಗಳು ಅತ್ಯುಪಯುಕ್ತವಾಗಿವೆ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ