Breaking News

ಆಸ್ಪತ್ರೆಯ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ

Spread the love

ಗದಗ: ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಆಘಾತಗೊಂಡ ವ್ಯಕ್ತಿ ಆಸ್ಪತ್ರೆಯ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಜಿಮ್ಸ್ ಕೋವಿಡ್-19 ಆಸ್ಪತ್ರೆಯ 4ನೇ ಅಂತಸ್ತಿನ ಮೇಲಿಂದ ಹಾರಿ ಸಾವಿಗೆ ಶರಣಾಗಿದ್ದಾನೆ. ಮುಂಡರಗಿ ತಾಲೂಕಿನ ಸುಮಾರು 40 ವರ್ಷದ ಬಸವರಾಜ್ ಈಳಗೇರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಗುರುವಾರ ಜಿಮ್ಸ್ ಕೋವಿಡ್-19 ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಲಾಗಿತ್ತು. ನಂತರ ವರದಿ ಪಾಸಿಟಿವ್ ಬಂದಿದೆ. ಇದನ್ನು ತಿಳಿದು ಆಘಾತಗೊಂಡ ವ್ಯಕ್ತಿ ಆಸ್ಪತ್ರೆ ಸಿಬ್ಬಂದಿ ಕಣ್ಣು ತಪ್ಪಿಸಿ ಕಟ್ಟಡದ 4ನೇ ಅಂತಸ್ತಿನ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಎಚ್.ಕೆ. ಪಾಟೀಲ ಜಿಲ್ಲಾ ಪ್ರವಾಸ

Spread the love ಗದಗ: ಸಚಿವ ಡಾ.ಎಚ್.ಕೆ. ಪಾಟೀಲ ಶುಕ್ರವಾರ ಗದಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಬೆಳಿಗ್ಗೆ 7.45ಕ್ಕೆ ನಗರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ