ವಿಧಾನ ಸೌಧ: ಅಡಿಗೆ ಅನಿಲ ಕುರಿತು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ ಇಂದು ವಿಧಾನ ಸೌಧದ ಕೊಠಡಿಯಲ್ಲಿ IOC ,BPC,HPC,GAIL ನ ಸಂಸ್ಥೆಗಳ ಅಧಿಕಾರಿಗಳು ಹಾಗೂ ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷರೊಂದಿಗೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತರಾದ ರವಿಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್,ಅರುಂದಿ ಗೊಯಲ್,ದಿವ್ಯ, ಮುರಳಿ …
Read More »Yearly Archives: 2026
ಹಲವರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಮಡಿಕೇರಿ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಹಲವರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. 35 ವರ್ಷ ಪ್ರಾಯದ ಕಾಡಾನೆ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿತ್ತು. ಸಿದ್ದಾಪುರ ಸಮೀಪ ಕಾಫಿ ಬೆಳೆಗಾರರೊಬ್ಬರನ್ನು ಇತ್ತೀಚೆಗೆ ಬಲಿ ತೆಗೆದುಕೊಂಡಿತ್ತು. ಗ್ರಾಮಸ್ಥರು ಕಾಡಾನೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಬೆಳಗ್ಗೆಯಿಂದಲೇ 6 ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಸಿದ್ದಾಪುರ, ಪಾಲಿಬೆಟ್ಟ, ಅಮ್ಮತ್ತಿ ಸುತ್ತಮುತ್ತಲ ಕಾಫಿ …
Read More »ರಕ್ತದಾನದ ಮನೋಭಾವ ಬೆಳಸಿಕೊಳ್ಳಿ: ಡಾ.ರವೀಂದ್ರ
ರಾಮದುರ್ಗ: ರಕ್ತದಾನ ಜೀವ ರಕ್ಷಣೆಗಿರುವ ಶ್ರೇಷ್ಠದಾನವಾಗಿದ್ದು ತುರ್ತು ಪರಿಸ್ಥಿ ಸಂದರ್ಭಗಳಲ್ಲಿ ಮುಕ್ತವಾಗಿ ರಕ್ತದಾನ ಮಾಡುವ ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಿ ಜೊತೆಗೆ ಸಾರ್ವಜನೀಕರಲ್ಲೂ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಪ್ಯಾಥೋಲಾಜಿಸ್ಟ ಜನರಲ್ ಹಾಸ್ಪಿಟಲ್ ವೈದ್ಯರಾದ ಡಾ. ರವೀಂದ್ರ.ಜಿ. ಪಾಟೀಲ ಹೇಳಿದರು. ನಗರದ ಶ್ರೀಮತಿ ಐ. ಎಸ್ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರೆಡಕ್ರಾಸ್ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ …
Read More »ಖಾನಾಪುರ: ಕೃಷ್ಣಾಪುರ ಗ್ರಾಮ ಸ್ಥಳಾಂತರಕ್ಕೆ ಚಿಂತನೆ, ಗ್ರಾಮಸ್ಥರ ಜತೆ ಚರ್ಚೆ
ಖಾನಾಪುರ: ಇತ್ತೀಚೆಗೆ ನಡೆದ ಹುಲಿಗಳ ಗಣತಿಯಲ್ಲಿ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿಗಳ ಸಂತತಿ ವೃದ್ದಿಯಾಗಿರುವ ಮಾಹಿತಿ ಲಭ್ಯವಾಗಿದೆ. ಇದೇ ರೀತಿ ನೆರೆಯ ದಾಂಡೇಲಿ ಅರಣ್ಯ ಮತ್ತು ಕಾಳಿ ಹುಲಿ ಮೀಸಲು ಅರಣ್ಯ ಮತ್ತು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲೂ ಹುಲಿಗಳ ಸಂತತಿಯಲ್ಲಿ ಹೆಚ್ಚಳವಾಗಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ. ಮುಂದಿನ ವರ್ಷಗಳಲ್ಲಿ ಹುಲಿಗಳ ಸಂರಕ್ಷಣೆಗಾಗಿ ಈ ಅರಣ್ಯ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪದಿಂದ ದೂರ ಇಡಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಲಿದೆ ಎಂದು ಜಿಲ್ಲಾಧಿಕಾರಿ …
Read More »ಆರೋಗ್ಯ ಉಚಿತ ತಪಾಸಣಾ ಶಿಬಿರ 16ರಂದು
ಗೋಕಾಕ: ಉಚಿತ ಕಣ್ಣಿನ ಪೊರೆ ತಪಾಸಣೆ ಬೃಹತ್ ಶಿಬಿರವನ್ನು ಮಾರ್ಚ್ 16ರಂದು ಮುಂಜಾನೆ 9ರಿಂದ ಮಧ್ಯಾಹ್ನ 1:30ರ ವರೆಗೆ ತಾಲ್ಲೂಕಿನ ಮಮದಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ವಿಶೇಷವಾಗಿ ಮಕ್ಕಳ ತಪಾಸಣೆ, ರಕ್ತದೊತ್ತಡ, ಹೃದಯ, ಚರ್ಮರೋಗ ತಪಾಸಣೆ ಸಹ ಉಚಿತವಾಗಿ ಮಾಡಲಾಗುತ್ತಿದೆ. ಡಾ.ಎಂ.ಎಸ್.ಕೊಪ್ಪದ, ಡಾ.ಅಶೋಕ ಮುರಗೋಡ, ಡಾ.ಸಿದ್ದಣ್ಣ ಕಮತ, ಕಣ್ಣಿನ ತಜ್ಞ ಡಾ. ಸಂದೀಪ್ ಕೋಲಕಾರ, ಡಾ. ಅಮರ ಮುರುಗೋಡ, ಡಾ.ಪ್ರಮಿತಾ ಮುರುಗೋಡ, ಡಾ.ಪ್ರೀತಿ ಚೌಧರಿ ಹಾಗೂ ನೇತ್ರಾಧಿಕಾರಿ …
Read More »ನಂದಗಡ ಪೊಲೀಸ್ ಠಾಣೆ ಅಧಿಕಾರಿಗಳ ವಿರುದ್ಧ ದೂರು
ಖಾನಾಪುರ: ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳು ಸರ್ಕಾರದ ಆದೇಶವಿದ್ದರೂ ಕಳೆದ 8 ತಿಂಗಳಿಂದ ಪ್ರತಿ ತಿಂಗಳು ದಲಿತರ ದಿನವನ್ನು ಆಚರಿಸದೇ ದಲಿತ ಸಮುದಾಯದವರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ದಲಿತರ ಸಭೆ ಆಯೋಜಿಸದೇ ಮೇಲಧಿಕಾರಿಗಳಿಗೆ ಸಭೆ ನಡೆಸಿರುವ ಬಗ್ಗೆ ಖೊಟ್ಟಿ ನಡಾವಳಿ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಂತೋಷ ತಳವಾರ ದೂರು ನೀಡಿದ್ದಾರೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳ …
Read More »ಹಿರೇಬಾಗೇವಾಡಿ: ಸರ್ಕಾರಿ ಬಸ್ ಹಾಯ್ದು ಬೈಕ್ ಸವಾರ ಸಾವು
ಹಿರೇಬಾಗೇವಾಡಿ: ಸರ್ಕಾರಿ ಬಸ್ ಹಾಯ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಬಸವನಗರದ ಬಳಿ ಬೆಳಗಾವಿ- ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಜರುಗಿದೆ. ಖಾನಾಪೂರ ತಾಲ್ಲೂಕಿನ ಅವರೊಳ್ಳಿ ಗ್ರಾಮದ ರಾಜಗೌಡ ಕಲ್ಲನಗೌಡ ಪಾಟೀಲ (45) ಮೃತರು. ಹಿಂಬದಿ ಕುಳಿತಿದ್ದ ಅವರ ಪತ್ನಿ ಸುನಿತಾ ಅವರು ಸಾಧಾರಣ ಗಾಯಗೊಂಡಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಉಪಚುನಾವಣೆಯಲ್ಲಿ ಮೇಟಿ ಕುಟುಂಬದವರಿಗೆ ಟಿಕೆಟ್
ಬೆಳಗಾವಿ: ‘ಕಾಂಗ್ರೆಸ್ ಶಾಸಕ ಎಚ್.ವೈ. ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಮೇಟಿ ಕುಟುಂಬದವರಿಗೆ ಟಿಕೆಟ್ ಕೊಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ‘ಬಾಗಲಕೋಟೆಯಲ್ಲಿ ಗೆಲ್ಲಲು ಎಲ್ಲ ತಯಾರಿ ಮಾಡಿದ್ದೇವೆ. ಪಕ್ಷದ ಹೈಕಮಾಂಡ್ ಹಾಗೂ ಕುಟುಂಬದವರ ನಿರ್ಧಾರ ಅಗತ್ಯ. ಮೇಟಿ ಕುಟುಂಬದ ಒಬ್ಬರಿಗೆ ಟಿಕೆಟ್ ನೀಡುತ್ತೇವೆ’ ಎಂದು ಇಲ್ಲಿ ಪತ್ರಕರ್ತರೊಂದಿಗೆ ತಿಳಿಸಿದರು. ‘ನಿಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆಯೇ’ ಎಂಬ …
Read More »ಹೋಟೆಲ್‌ಗಳಿಗೆ 10 ದಿನ ಗ್ಯಾಸ್ ಸಮಸ್ಯೆ ಆಗುತ್ತೆ, ಸಹಿಸಿಕೊಳ್ಳಬೇಕು: ಮುನಿಯಪ್ಪ
ಬೆಂಗಳೂರು: ಹೋಟೆಲ್‌ಗಳಿಗೆ ಕಮರ್ಷಿಯಲ್ ಗ್ಯಾಸ್ ಒಂದು ವಾರ, 10 ದಿನ ಸಮಸ್ಯೆ ಆಗಬಹುದು. ಅಲ್ಲಿವರೆಗೂ ಹೋಟೆಲ್‌ಗಳು ಸಹಿಸಿಕೊಳ್ಳಬೇಕು ಅಂತ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಬಗ್ಗೆ ಕಾಂಗ್ರೆಸ್ ಸದಸ್ಯರಾದ ಐವಾನ್ ಡಿಸೋಜ ಮತ್ತು ನಾಗರಾಜ್ ಯಾದವ್ ವಿಷಯ ಪ್ರಸ್ತಾಪ ಮಾಡಿದರು. ಆಟೋ, ಹೋಟೆಲ್‌ಗಳಿಗೆ ಗ್ಯಾಸ್ ಸಿಕ್ತಿಲ್ಲ. ಗ್ಯಾಸ್ ಕಾಳಸಂತೆಯಲ್ಲಿ ಮಾರಾಟ ಆಗ್ತಿದೆ. ಹೋಟೆಲ್‌ನಲ್ಲಿ ತಿಂಡಿ, ಊಟ ಸಮಸ್ಯೆ ಆಗ್ತಿದೆ. ಗ್ಯಾಸ್ ರೇಟ್ ಏರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ …
Read More »ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ
ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ ಅಂತ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ವಿಷಯ ಪ್ರಸ್ತಾಪ ಮಾಡಿದರು. ಸರ್ಕಾರ ಕನ್ನಡ ನೆಲ, ಜಲಕ್ಕೆ ಹೋರಾಟ ಮಾಡಿದ ಹೋರಾಟಗಾರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ವಾಟಾಳ್ ನಾಗರಾಜ್ ಸೇರಿ ಕನ್ನಡಪರ ಹೋರಾಟಗಾರಿಗೆ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಕೊಡಬೇಕು. ಕನ್ನಡ …
Read More »
Laxmi News 24×7