ಬೆಳಗಾವಿಯಲ್ಲಿ ಖಾಕಿ ಆರ್ಭಟ: ಮದ್ಯದ ಮಾಫಿಯಾ, ಬೈಕ್ ಕಳ್ಳರು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸರಣಿ ದಾಳಿ! ಬೆಳಗಾವಿ ಪೊಲೀಸರು ನಗರದ ವಿವಿಧೆಡೆ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಏಳು ಮಂದಿಯನ್ನು ಬಂಧಿಸಿದ್ದಾರೆ. ಮದ್ಯ ಸಾಗಾಟ, ಮಟಕಾ ಜಜೂಜು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸಮರ ಸಾರಿದ್ದಾರೆ. ಬೆಳಗಾವಿ ನಗರದ ಉದ್ಯಮಬಾಗ, ಮಾರಿಹಾಳ, ಹಿರೇಬಾಗೇವಾಡಿ ಮತ್ತು ತಿಲಕವಾಡಿ ಠಾಣಾ ವ್ಯಾಪ್ತಿಯಲ್ಲಿ ಶನಿವಾರದಂದು ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಉದ್ಯಮಬಾಗದಲ್ಲಿ …
Read More »Yearly Archives: 2026
ಬೆಳಗಾವಿ ಹಾಕಿ ತಂಡಕ್ಕೆ ಶುಭ ಹಾರೈಕೆ: ಜಿಲ್ಲಾ ತಂಡಗಳ ಭರ್ಜರಿ ಬೀಳ್ಕೊಡುಗೆ!
• ಬೆಳಗಾವಿ ಜಿಲ್ಲಾ ಹಾಕಿ ತಂಡದ ಆಯ್ಕೆ • ಲೇಲೆ ಮೈದಾನದಲ್ಲಿ ಕ್ರೀಡಾಪಟುಗಳ ಸಂಭ್ರಮ • ರಮಾಕಾಂತ್ ಕೊಂಡುಸ್ಕರ್ ಅವರಿಂದ ಶುಭ ಹಾರೈಕೆ • ಗೆಲುವಿನ ಸಂಕಲ್ಪದೊಂದಿಗೆ ಹೊರಟ ಹಾಕಿ ತಂಡ ಬೆಳಗಾವಿಯ ಟಿಳಕವಾಡಿಯ ಲೇಲೆ ಮೈದಾನದಲ್ಲಿ ಇಂದು ಹಾಕಿ ಬೆಳಗಾವಿ ವತಿಯಿಂದ ಜಿಲ್ಲೆಯನ್ನು ಪ್ರತಿನಿಧಿಸುವ ಹಾಕಿ ತಂಡಗಳಿಗೆ ಭವ್ಯ ಬೀಳ್ಕೊಡುಗೆ ನೀಡಲಾಯಿತು. ಮುಂಬರುವ ಪಂದ್ಯಾವಳಿಗಳಿಗಾಗಿ ಸಜ್ಜಾಗಿರುವ ಕ್ರೀಡಾಪಟುಗಳ ಆತ್ಮವಿಶ್ವಾಸ ಹೆಚ್ಚಿಸಲು ಗಣ್ಯರು ಹರಸಿದರು. ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ …
Read More »ಮೆಗಾಮಾರ್ಟ್‌ನಲ್ಲಿ ಯುವಕರಿಬ್ಬರ ಕಳ್ಳತನ; ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ
ಮೆಗಾಮಾರ್ಟ್‌ನಲ್ಲಿ ಯುವಕರಿಬ್ಬರ ಕಳ್ಳತನ; ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ ಮೆಗಾಮಾರ್ಟ್‌ಗೆ ಬಂದಿದ್ದ ಯುವಕರಿಬ್ಬರು ಬೆಲೆಬಾಳುವ ವಸ್ತುಗಳನ್ನ ಕದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಗರವಾಲ್ ಮೆಗಾ ಮಾರ್ಟ್‌ಗೆ ಖರೀದಿ ನೆಪದಲ್ಲಿ ಬಂದ ಯುವಕರು ಬೆಲೆಬಾಳುವ ಚಾಕೋಲೆಟ್, ಬೂಸ್ಟ್ ಡಬ್ಬಿ ಸೇರಿ ಬೆಲೆಬಾಳುವ ಗೃಹ ಉಪಯೋಗಿ ಕದ್ದು ತಮ್ಮ ಒಳ ಉಡುಪುಗಳಲ್ಲಿ ಅಡಗಿಸಿಕೊಂಡಿದ್ದಾರೆ. ಬಳಿಕ ಕಡಿಮೆ ವಸ್ತುವಿಗೆ ಪೇ ಮಾಡಿ ತೆರಳಿದ್ದಾರೆ. ಅನುಮಾನಗೊಂಡು ನೋಡಿದಾಗ ಸಿಸಿಟಿವಿಯಲ್ಲಿ …
Read More »ಶಿವಾನಂದ ಗ್ರಾಮೀಣ ವಿದ್ಯಾಪೀಠ ಜ್ಞಾನ ಶಿವಾನಂದ ಗ್ರಾಮೀಣ ವಿದ್ಯಾಪೀಠ ಜ್ಞಾನಕೇಂದ್ರವಾಗಿ ಬೆಳೆಯಲಿ: ಸಚಿವ ಸತೀಶ್ ಜಾರಕಿಹೊಳಿ: ಸಚಿವ ಸತೀಶ್ ಜಾರಕಿಹೊಳಿ
ಹುಕ್ಕೇರಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲೆಂಬ ಉದ್ದೇಶದಿಂದ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ 9 ಎಕರೆ ಜಮೀನು ಮಂಜೂರುಗೊಳಿಸಿದ್ದು ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ವಿದ್ಯಾಪೀಠವು ಜ್ಞಾನಕೇಂದ್ರವಾಗಿ ಬೆಳೆಯಲಿ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಶ್ರೀ ಶಿವಾನಂದ ಮಠದ ಶ್ರೀ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ ಸರ್ಕಾರದ ವತಿಯಿಂದ ಶೈಕ್ಷಣಿಕ …
Read More »ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ.
ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ. ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರು ಹಾಗೂ ಉದ್ಯಮಿಗಳಾದ ಸಂತೋಷ್ ಜಾರಕಿಹೊಳಿ ಅವರ ಪುತ್ರರಾದ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಮಾಜಮುಖಿಯಾಗಿ ಸರಳವಾಗಿ ಆಚರಿಸಿದರು. ಶ್ರೇಷ್ಠ ಫೌಂಡೇಶನ್ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನ್ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಉಪಹಾರ, ಸಿಹಿ ವಿತರಣೆ ಮಾಡುವ ಮೂಲಕ ಹುಟ್ಟು …
Read More »ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ ನಿರ್ಮಾಣ”
“ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ ನಿರ್ಮಾಣ” ಸಂವಿಧಾನ ಶಿಲ್ಪಿ ಭಾರತರತ್ನಡಾ.ಬಿ.ಆರ್.ಅಂಬೇಡ್ಕರ ಜಿ ಅವರು ಕೊಟ್ಟಿದ್ದ ನಮ್ಮ ನಿಪ್ಪಾಣಿ ನಗರದ ದಿ. ಬಳವಂತರಾವ ಹಣಮಂತ ವರಾಳೆ ಅವರ ನಿವಾಸಕ್ಕೆ ಜನ್ಮದಿನದ ನಿಮಿತ್ಯ ಭೇಟಿ ನೀಡಿ,ಅಂಬೇಡ್ಕರ ಜಿ ಅವರು ಬಳವಂತರಾವ ಅವರು ಅತ್ಯಂತ ಆತ್ಮೀಯರು ಆಗಿದ್ದರು.ಅಂಬೇಡ್ಕರ ಜಿ ಹಾಗೂ ಅವರ ಧರ್ಮಪತ್ನಿ ರಮಾಬಾಯಿ ಅವರು ನಿಪ್ಪಾಣಿಗೆ ಏಪ್ರಿಲ್ 10 ಮತ್ತು …
Read More »ವೈದ್ಯಕೀಯ ಔಷಧ, ಉಪಕರಣಗಳ ಸುಂಕ ಕಡಿತ ಸಾಧ್ಯತೆ
ಆರೋಗ್ಯ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ರೇಡಿಯೋ ಥೆರಪಿಯಂಥಹ ಸುಧಾರಿತ ಉಪಕರಣ ಮೇಲಿನ ಸೀಮಾ ಸುಂಕ ಕಡಿಮೆ ಔಷಧ ತಯಾರಿಕಾ ವಲಯಕ್ಕೆ ಹೆಚ್ಚಿನ ಬೆಂಬಲ ಸಿಗುವ ನಿರೀಕ್ಷೆ 2ನೇ ಮಹಾನಗರ, 3ನೇ ಮಹಾನಗರದಲ್ಲಿ ಡಯಾಗ್ನೋಸ್ಟಿಕ್ ಸೌಲಭ್ಯಗಳು ಐವಿಎಫ್, ಸಹಾಯಕ ತಂತ್ರಜ್ಞಾನಗಳಿಗೆ ಸಬ್ಸಿಡಿ; ತೆರಿಗೆ ರಿಲೀಫ್ ಪಿಎಂ ಕಿಸಾನ್ ಯೋಜನೆಯಡಿ ನೀಡಲಾಗುವ 6000 ರೂ.ಅನ್ನು 9000 ರೂ.ವರೆಗೆ ಏರಿಸುವ ನಿರೀಕ್ಷೆ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಸಾಲದ ಮಿತಿ 3 ಲಕ್ಷದಿಂದ 5 …
Read More »ನಾನು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು, ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ: ನಿಖಿಲ್
ತುಮಕೂರು: ನಿಖಿಲ್ ಕುಮಾರಸ್ವಾಮಿ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ನಿಗದಿಯಾದರೆ, ಕಾಣದ ಕೈಗಳು ಕೆಲಸ ಶುರು ಮಾಡುತ್ತವೆ. ನಾನು ಎಲ್ಲಿ ನಿಲ್ಲಬೇಕು ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ ಎಂದು ತುಮಕೂರಿನಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ತುಮಕೂರು-ಚಾಮರಾಜದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕ್ಲಿಯರ್ ಆಗಿ ಹೇಳುತ್ತೇನೆ, ಯಾವುದೇ ಗೊಂದಲ ಮಾಡೋದು ಬೇಡ. …
Read More »ವರದಕ್ಷಿಣೆಗಾಗಿ ಸಂದೇಹ, ಕಿರುಕುಳ – ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ
ಹಾಸನ: ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳ ಹಾಗೂ ಸಂದೇಹ ಸಹಿಸಲಾಗದೇ ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೆಚ್.ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ. ಬೇಲೂರು ತಾಲ್ಲೂಕಿನ ಐ.ಹುಣಸೆಕೆರೆ ಗ್ರಾಮದ ಹೆಚ್.ಎಲ್.ಇಂದ್ರ (24) ಮೃತ ಗೃಹಿಣಿ. ಕಳೆದ ನಾಲ್ಕು ವರ್ಷಗಳ ಹಿಂದೆ ಹೆಚ್.ಮೈಲಳ್ಳಿ ಗ್ರಾಮದ ಎಂ.ಹೆಚ್.ಸ್ವಾಮಿ ಜೊತೆ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ 60 ಗ್ರಾಂ ಚಿನ್ನ ಹಾಗೂ 1.30 ಲಕ್ಷ ರೂ. ಹಣವನ್ನು ಹೆಚ್.ಎಲ್.ಇಂದ್ರ …
Read More »ಇಂದು ನಿರ್ಮಲಾ ಸೀತಾರಾಮನ್‌ರಿಂದ ದಾಖಲೆಯ 9ನೇ ಕೇಂದ್ರ ಬಜೆಟ್ ಮಂಡನೆ
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಿದ್ದಾರೆ. ಲೋಕಸಭಾ ವ್ಯವಹಾರಗಳ ಪಟ್ಟಿಯ ಪ್ರಕಾರ, ಸದನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭವಾಗಲಿದೆ. ಸೀತಾರಾಮನ್ ಅವರು 2026-27ನೇ ಸಾಲಿನ ಭಾರತ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚದ ಬಜೆಟ್ ಮಂಡನೆ ಮಾಡಲಿದ್ದಾರೆ. ಲೋಕಸಭೆಯಲ್ಲಿ ಹಣಕಾಸು ಮಸೂದೆ 2026 ಅನ್ನು ಮಂಡಿಸಲು …
Read More »
Laxmi News 24×7