ರಾಯಚೂರು: ಮಹಾಶಿವರಾತ್ರಿ ಹಿನ್ನೆಲೆ ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಶಿವಲಿಂಗಕ್ಕೆ ವಿಶೇಷ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರುದ್ರದೇವರಿಗೆ ಅಭಿಷೇಕ ನೆರವೇರಿಸಿದರು. ಮಠದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಮಠದ ಪಂಡಿತರು ನಿರಂತರವಾಗಿ ಮಂತ್ರಗಳನ್ನ ಪಠಿಸಿದರು. ಮಠದ ಶ್ರೀಗಳು ಮಹಾರುದ್ರಾಭಿಷೇಕದ ಜೊತೆ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು. ಇನ್ನೂ ರಾಯಚೂರು ನಗರದ ಎಲ್ಲಾ ಈಶ್ವರ ದೇವಾಲಯಗಳಲ್ಲೂ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಭಕ್ತರ ದಂಡು …
Read More »Daily Archives: ಫೆಬ್ರವರಿ 15, 2026
ಮಹಾಶಿವರಾತ್ರಿ ಆಚರಣೆ ಯಾಕೆ ಗೊತ್ತಾ?
ಮಹಾಶಿವರಾತ್ರಿಯನ್ನು ದೇಶಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಪ್ರತಿ ಮಾಸದಲ್ಲಿ ಶಿವರಾತ್ರಿ ಇರುತ್ತದೆ. ಇದಕ್ಕೆ ಮಾಸ ಶಿವರಾತ್ರಿ ಎಂದೂ, ವರ್ಷಕ್ಕೆ ಒಮ್ಮೆ ಬರುವ ಶಿವರಾತ್ರಿಯನ್ನು ಮಹಾಶಿವರಾತ್ರಿ ಎನ್ನಲಾಗುತ್ತದೆ. ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಈ ದಿನವನ್ನು ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನಿಗೆ ಅರ್ಪಿಸಲಾಗಿದೆ. ಮಹಾಶಿವರಾತ್ರಿಯನ್ನ ಶಿವ ಮತ್ತು ಪಾರ್ವತಿ ಮದುವೆಯಾದ ಶುಭ ದಿನ ಎನ್ನಲಾಗುತ್ತದೆ. …
Read More »ಒಂದು ಕೇಸ್, 200 ವಕೀಲರು ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಮೂಡಲಗಿ ನ್ಯಾಯಾಲಯ
ಬೆಳಗಾವಿ : ಕೋರ್ಟ್ ನಲ್ಲಿ ನಡೆದ ಒಂದು ಪ್ರಕರಣಕ್ಕೆ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲಿಸಿ ಕೋರ್ಟ್ ಕಲಾಪದಲ್ಲಿ ಹಾಜರಾದ ಘಟನೆ ಮೂಡಲಗಿ ನ್ಯಾಯಾಲಯದಲ್ಲಿ ನಡೆದಿದೆ. ಮೂಡಲಗಿ ಪಟ್ಟಣದ ಹಿರಿಯ ವಕೀಲರಾದ ಸುಧೀರ ಗೋಡಿಗೌಡರ ಅವರ ಕುಟುಂಬದ ವೈಯಕ್ತಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಡೆದ ಕೋರ್ಟ್ ಕಲಾಪದಲ್ಲಿ ಸುಧೀರ್ ಅವರನ್ನು ಬಬಲಿಸಿ ಗೋಕಾಕ್ ಹಾಗೂ ಮೂಡಲಗಿ ನ್ಯಾಯಾಲಯದ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲ ವ್ಯಕ್ತಪಡಿಸಿರುವ ಘಟನೆ ನಡೆದಿದೆ. …
Read More »ಮತದಾರರ ಪಟ್ಟಿ ಪರಿಷ್ಕರಣಾ ಸಭೆ
ನಿಪ್ಪಾಣಿ: ಮತಕ್ಷೇತ್ರದ ಬಿ.ಎಲ್.ಎ.-2 ಕಾರ್ಯಗಾರ ಸಭೆಯನ್ನು ಉದ್ಘಾಟಿಸಿ & ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಭೆ ನಡೆಸಿ ಮಾತನಾಡಲಾಯಿತು. ಕಾರ್ಯಗಾರದ ಬಗ್ಗೆ ಸಮಗ್ರ ಮಾಹಿತಿ ನೀಡಿ,ಪ್ರಕ್ರಿಯೆಯು ನಕಲಿ ಮತದಾರರನ್ನು ತೆಗೆದುಹಾಕಲು ಮತ್ತು ಹೊಸ ಮತದಾರರನ್ನು ಸೇರಿಸಲು ಅವಕಾಶವನ್ನು ಕಲ್ಪಿಸಿದ್ದು,ನಿಖರ ಮತದಾರರ ಪಟ್ಟಿ ಇಲ್ಲದೆ,ನ್ಯಾಯಯುತ ಚುನಾವಣೆಗಳು ಅಸಾಧ್ಯ.ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಮೂಲಕ ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ಪ್ರಜಾಪ್ರಭುತ್ವದ ತತ್ವವನ್ನು ಬಲಪಡಿಸುತ್ತದೆ ಎಂದು ತಿಳಿಸಿ, …
Read More »ಕಾಂಗ್ರೆಸ್ ಮುಖಂಡನ ಕೊಲೆ
ಬಾಗಲಕೋಟೆ:ಕೆರೂರ ಸಮೀಪದ ಸಾಗನೂರು ಗ್ರಾಮದ ಸಹಕಾರಿ ಧುರೀಣ, ಕಾಂಗ್ರೆಸ್ ಮುಖಂಡ ಶಿವಪ್ಪ ಬಸಪ್ಪ ಮೇಟಿ (54) ಕೊಲೆಯಾಗಿದ್ದು, ಕೆರೂರ ಪೊಲೀಸ್ ಠಾಣೆಯಲ್ಲಿ ಮೃತರ ಮಗ ಯಮನಪ್ಪ ಮೇಟಿ ಪ್ರಕರಣ ದಾಖಸಿದ್ದಾನೆ. ಫೆಬ್ರುವರಿ 12 ಗುರುವಾರ 8.30 9.30ರ ಅವಧಿಯಲ್ಲಿ ಕೊಲೆಯಾದ ಶಿವಪ್ಪ ಮೇಟಿ ಸಾಗನೂರ ಗ್ರಾಮದ ಹೊರ ವಲಯದ ಬಟಕುರ್ಕಿ ರಸ್ತೆ ಕಡೆಗೆ ಬಯಲು ಬಹಿರ್ದಸೆಗೆಂದು ಹೋಗಿದ್ದಾಗ ಯಾರೋ ದುಷ್ಕರ್ಮಿಗಳು ಯಾವುದೋ ವಸ್ತುವಿನಿಂದ ಹೊಡೆದು ಕೊಲೆ ಮಾಡಿ, ಸಾಕ್ಷಿ ನಾಶ …
Read More »ಯಾವ ಪುರುಷಾರ್ಥಕ್ಕೆ ಸಾವಿರ ದಿನಗಳ ಸಂಭ್ರಮ? ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಈರಣ್ಣ ಕಡಾಡಿ ಕಿಡಿ
ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳಾಗಿವೆ. ಇಂದು ಹಾವೇರಿಯಲ್ಲಿ ಬೃಹತ್ ಪ್ರಮಾಣದ ಸಾವಿರ ದಿನಗಳ ಸಂಭ್ರಮಾಚರಣೆ ಸಮಾವೇಶ ನಡೆಸಲಾಗುತ್ತಿದೆ “ಯಾವ ಪುರುಷಾರ್ಥಕ್ಕೆ ? ಈ ಸಮಾವೇಶ ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ವಾಗ್ದಾಳಿ ನಡೆಸಿದರು. ಶನಿವಾರ ಫೆ-14 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ 3731 ಕ್ಕೂ ಹೆಚ್ಚು ರೈತರು …
Read More »
Laxmi News 24×7