Breaking News

Yearly Archives: 2025

ಇನ್ಫೆಂಟ್ರಿ ಗೋಲ್ಡ್ ಚಾಂಪಿಯನ್’ಶಿಪ್ ಸ್ಪರ್ಧೆ… ವಿಜೇತರಾಗಿ ಹೊರಹೊಮ್ಮಿದ ಮಿಹೀರ್ ಪೋತದಾರ.

 ಬೆಳಗಾವಿ: ಎನಿವೈರಮೆಂಟಲ್ ಪಾರ್ಟ್ ಆಂಡ್ ಟ್ರೇನಿಂಗ್ ಏರಿಯಾ ಬೆಳಗಾವಿಯ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಇನ್ಫೆಂಟ್ರಿ ಗೋಲ್ಡ್ ಚಾಂಪಿಯನ್’ಶಿಪ್ ವಿಜೇತರಾಗಿ ಮಿಹೀರ್ ಪೋತದಾರ ಹೊರಹೊಮ್ಮಿದ್ದಾರೆ. ಎನಿವೈರಮೆಂಟಲ್ ಪಾರ್ಟ್ ಆಂಡ್ ಟ್ರೇನಿಂಗ್ ಏರಿಯಾ ಬೆಳಗಾವಿಯ ವತಿಯಿಂದ ಆಯೋಜಿಸಲಾಗಿದ್ದ, ಇನ್ಫೆಂಟ್ರಿ ಗೋಲ್ಫ್ ಕಪ್’ನ್ನು ಆಯೋಜಿಸಲಾಗಿತ್ತು. ಬೆಳಗಾವಿ ಸೇರಿದಂತೆ ಬೆಂಗಳೂರು, ಹುಬ್ಬಳ್ಳಿ, ಮಹಾರಾಷ್ಟ್ರದ ಕೊಲ್ಹಾಪುರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಸುಮಾರು 149 ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯೂ 5 ವಿಭಾಗಗಳಲ್ಲಿ ನಡೆಯಿತು. ಇದರಲ್ಲಿ ಭಾರತೀಯ …

Read More »

ಕೆಕೆ ಕೊಪ್ಪ ಪ್ರಿಮಿಯರ್ ಲೀಗ್ ಕೆಪಿಎಲ್-2025 ರ ಕ್ರಿಕೆಟ್ ಪಂದ್ಯಾವಳಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಚಾಲನೆ.

ಬೆಳಗಾವಿ:  ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದಲ್ಲಿ ಹರ್ಷಾ ಶುಗರ್ಸ್ ವತಿಯಿಂದ ಆಯೋಜಿಸಿದ್ದ ಕೆಕೆ ಕೊಪ್ಪ ಪ್ರಿಮಿಯರ್ ಲೀಗ್ ಕೆಪಿಎಲ್-2025 ರ ಕ್ರಿಕೆಟ್ ಪಂದ್ಯಾವಳಿಯನ್ನು ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಅವರು ಉದ್ಘಾಟಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದಲ್ಲಿ ಹರ್ಷಾ ಶುಗರ್ಸ್ ವತಿಯಿಂದ ಆಯೋಜಿಸಲಾಗಿರುವ ಕೆಕೆ ಕೊಪ್ಪ ಪ್ರಿಮಿಯರ್ ಲೀಗ್ ಕೆಪಿಎಲ್-2025 ರ ಕ್ರಿಕೆಟ್ ಪಂದ್ಯಾವಳಿಯನ್ನು ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಉದ್ಘಾಟಿಸಿ, ಪ್ರಥಮ …

Read More »

ನಕಲಿ ವೈದ್ಯರು, ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಿ : ಅಧಿವೇಶನದಲ್ಲಿ ಸಂಸದ ಈರಣ್ಣ ಕಡಾಡಿ ಆಗ್ರಹ.

ಮೂಡಲಗಿ: ನಕಲಿ ವೈದ್ಯರು ಮತ್ತು ತರಬೇತಿ ಪಡೆಯದ ವೈದ್ಯಕೀಯ ವೃತ್ತಿಪರರು ಯಾವುದೇ ಅರ್ಹತೆ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕಾರಣ ಅವರ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಅನಧಿಕೃತ ವೈದ್ಯರು ಮತ್ತು ಚಿಕಿತ್ಸಾಲಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ನಕಲಿ ಶಸ್ತ್ರಚಿಕಿತ್ಸೆಗಳನ್ನು ತಡೆಗಟ್ಟಲು ಆಸ್ಪತ್ರೆಗ ನಿಯಮಿತ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಆಗ್ರಹಿಸಿದರು. ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದ ಶೂನ್ಯ …

Read More »

ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಹೈವೇ ಪೆಟ್ರೋಲ್’ ಪೊಲೀಸರ ಬಿಂದಾಸ್ ವಸೂಲಿ ದಂಧೆ* *ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪೊಲೀಸರ ವಸೂಲಿ ದಂಧೆಗೆ ಲಾರಿ ಚಾಲಕರು ಕಂಗಾಲು*

*ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಹೈವೇ ಪೆಟ್ರೋಲ್’ ಪೊಲೀಸರ ಬಿಂದಾಸ್ ವಸೂಲಿ ದಂಧೆ* *ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪೊಲೀಸರ ವಸೂಲಿ ದಂಧೆಗೆ ಲಾರಿ ಚಾಲಕರು ಕಂಗಾಲು* ಬೆಳಗಾವಿ ಸುವರ್ಣಸೌಧ ಮುಂಭಾಗದ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ವಸೂಲಿ ದಂಧೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಓವರ್‌ಲೋಡ್ ನೆಪದಲ್ಲಿ ಲಾರಿ ಚಾಲಕರಿಂದ ನಿತ್ಯ ಲೂಟಿ ಆರೋಪ? ‘ಪ್ರತಿಯೊಂದು ಲಾರಿ ಚಾಲಕರು 200 ರೂಪಾಯಿ ಹಣ ನೀಡಲೇಬೇಕು’ ‘200 ರೂ. ಹಣ …

Read More »

ಬೆಳಿಗ್ಗೆ 11 ಗಂಟೆಗೆ ಡಾ. ಬಾಬು ಜಗಜೀವನರಾಮ ರವರ 118 ನೇ ಜನ್ಮ ದಿನಾಚರಣೆ ಹಾಗೂ 12 ಗಂಟೆಗೆ ಡಾ. ಬಿ. ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯ ಪೂರ್ವಭಾವಿ

ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರೀಲ್ 5, 2025 ರಂದು ಡಾ. ಬಾಬು ಜಗಜೀವನ ರಾಮ ಹಾಗೂ ಏಪ್ರೀಲ್ 14, 2025 ರಂದು ಡಾ. ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಆಚರಿಸುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾರ್ಚ್ 17, 2025 ರಂದು ಜಿಲ್ಲಾ ಪಂಚಾಯತ ಸಭಾಂಗಣ 1ನೇ ಮಹಡಿಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆಯನ್ನು ಆಯೋಜಿಸಿಲಾಗಿದೆ. …

Read More »

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಮಗ್ರ ಸಿದ್ಧತೆ:D.C.

ಬೆಳಗಾವಿ: ರಾಜ್ಯಾದ್ಯಂತ ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆಸಲು ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ (ಮಾ.15) ನಡೆದ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬೆಳಗಾವಿ 518, …

Read More »

ಕಾಲುವೆಗೆ ಬಿದ್ದು ಮೃತಪಟ್ಟ ನರೇಗಾ ಕೂಲಿಕಾರ ಹನುಮಂತಪ್ಪ ಬಾಗಪ್ಪ

ಗಂಗಾವತಿ (ಕೊಪ್ಪಳ) : ನರೇಗಾದ ಕೂಲಿಕಾರರೊಬ್ಬರು ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್ (ನಂಬರ್ 28ನೇ ಕಾಲುವೆ) ಬಳಿ ಭಾನುವಾರ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಹನುಮಂತಪ್ಪ ಬಾಗಪ್ಪ ಅದಾಪುರ ಎಂದು ಗುರುತಿಸಲಾಗಿದೆ. ಬಡ ಕುಟುಂಬಕ್ಕೆ ಸೇರಿದ್ದ ಈ ವ್ಯಕ್ತಿ ಗ್ರಾಮ ಪಂಚಾಯಿತಿಗಳು ಅನುಷ್ಠಾನ ಮಾಡುವ ಕೇಂದ್ರ ಸರ್ಕಾರದ ನರೇಗಾ ಕೂಲಿ …

Read More »

ಯುವಕನನ್ನು ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ ವಿಡಿಯೋ ಮಾಡಿದ್ದ ಪ್ರಕರಣದ 19 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಂಗಳೂರು : ಯುವತಿಯೊಂದಿಗಿದ್ದ ಎಂದು ಯುವಕನನ್ನು ಕಾರಿನಿಂದೆಳೆದು ಹಲ್ಲೆಗೈದು, ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ವಿಡಿಯೋ ಮಾಡಿದ್ದ ಪ್ರಕರಣ ಸಂಬಂಧ 19 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಈ ಬಗ್ಗೆ ವಕೀಲ ಅರುಣ್ ಬಂಗೇರ ವಿವರಿಸಿದ್ದು, ಅತ್ತಾವರದ ಖಾಸಗಿ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿಯೊಂದಿಗೆ ಮಳಿಗೆಯ ವ್ಯವಸ್ಥಾಪಕ ಕಾರಿನಲ್ಲಿ ಹೋಗುತ್ತಿದ್ದ. ಆತನ ಕಾರನ್ನು ಅತ್ತಾವರ ನಂದಿಗುಡ್ಡೆ ಬಳಿ ಅಡ್ಡಗಟ್ಟಿದ್ದ ಹಿಂದೂ ಸಂಘಟನೆಗಳಿಗೆ ಸೇರಿದ …

Read More »

ನಶೆ ಏರಿದವರ ಏಟಿನ ದಾಳಿಗೆ ಇಬ್ಬರು ನಿರ್ಮಾಣ ಹಂತದ ಅಪಾರ್ಟ್​​ಮೆಂಟ್ ಮೂರನೇ ಮಹಡಿಯಲ್ಲಿ, ಮತ್ತೊಬ್ಬ ಅಪಾರ್ಟ್​​ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಅನೇಕಲ್, ಮಾರ್ಚ್ 16: ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಸರ್ಜಾಪುರ (Sarjapur) ಬಾಗಲೂರು ರಸ್ತೆಯ ಪೋರ್ ವಾಲ್ಸ್ ಅವೆನ್ಯೂ ಹೆಸರಿನ ನಿರ್ಮಾಣ ಹಂತದ ಅಪಾರ್ಟ್​​ಮೆಂಟ್​ನಲ್ಲಿ ಮೂವರ ಬರ್ಬರ ಹತ್ಯೆಯಾಗಿದೆ. ಬಿಹಾರ (Bihar) ಮೂಲದ ಅನ್ಸು (19), ರಾಧೆಶ್ಯಾಮ್ (20), ದೀಪು (22), ಮೃತಪಟ್ಟರು. ಹೋಳಿ ಹಬ್ಬದ ಅಂಗವಾಗಿ ಬಿಹಾರ ಮೂಲದ ಕಟ್ಟಡ ಕಾರ್ಮಿಕರಿಗೆ ರಜೆ ನೀಡಲಾಗಿತ್ತು. ಇದೇ ಖುಷಿಯಲ್ಲಿ, ದೊಡ್ಡ ಕನ್ನಲ್ಲಿ ಬಳಿಅಪಾರ್ಟ್​​ಮೆಂಟ್​ನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ತಮ್ಮದೇ ಊರಿನವರನ್ನು ಆರೋಪಿ ಸೋನಾ …

Read More »

ಅನಾಥಾಶ್ರಮದಲ್ಲಿ ಊಟ ಸೇವಿಸಿದ 29 ವಿದ್ಯಾರ್ಥಿಗಳು ಅಸ್ವಸ್ಥ

ಮಂಡ್ಯ, ಮಾರ್ಚ್ 16: ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ಅನಾಥಾಶ್ರಮದಲ್ಲಿ ಊಟ ಸೇವಿಸಿದ ವಿದ್ಯಾರ್ಥಿಗಳಿಗೆ ಫುಡ್ ಪಾಯ್ಸನಿಂಗ್ (Food Poisoning) ಆಗಿದೆ. ವಿಷ ಪ್ರಾಶನದ ಪರಿಣಾಮ 6ನೇ ತರಗತಿಯ ವಿದ್ಯಾರ್ಥಿ ಕೆರ್ಲಾಂಗ್ (13) ಸಾವನ್ನಪ್ಪಿದ್ದು, 29 ಮಕ್ಕಳು ಅಸ್ವಸ್ಥರಾಗಿದ್ದಾರೆ. ಉದ್ಯಮಿಯೊಬ್ಬರು ಶುಕ್ರವಾರ ಹೋಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಊಟ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಉಳಿದ ಊಟವನ್ನು ಟಿ.ಕಾಗೇಪುರ ಗ್ರಾಮದ ಬಳಿ ಇರುವ ಅನಾಥಾಶ್ರಮಕ್ಕೆ ನೀಡಲಾಗಿತ್ತು. ಅನಾಥಾಶ್ರಮದ …

Read More »