Breaking News

Yearly Archives: 2025

ಕಾಗವಾಡ ತಾಲೂಕಿನ ಉಗಾರ ಲಯನ್ಸ್ ಕ್ಲಬ ಅಧ್ಯಕ್ಷರಾಗಿ ಡಾಕ್ಟರ ಎನ.ಎಚ. ಸಾಬಡೆ ಆಯ್ಕೆ.

ಕಾಗವಾಡ ತಾಲೂಕಿನ ಉಗಾರ ಲೈನ್ಸ್ ಕ್ಲಬ್ಬಿನ ಸನ 2025-26 ವರ್ಷದ ಅವಧಿಗೆ ಡಾಕ್ಟರ ಎನ. ಎಚ. ಸಾವಡೆ ಇವರನ್ನು ಆಯ್ಕೆ ಮಾಡಿ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರನ್ನು ಬೆಳಗಾವಿ ಜಿಲ್ಲಾ ಲೈನ್ಸ್ ಗವರ್ನರ ಶ್ರೀಮತಿ ಮೋನಿಕಾ ಸಾವಂತ ಇವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಶನಿವಾರ ಸಂಜೆ ಉಗಾರದ ಶತಾಯುಷಿ ಅಲಗೌಡ ಕಾಗೆ ಸಂಸ್ಕೃತಿಕ ಭವನದಲ್ಲಿ ಬೆಳಗಾವಿ ಜಿಲ್ಲೆಯ ಲೈನ್ಸ್ ಗವರ್ನರ ಮೋನಿಕಾ ಸಾವಂತ ಇವರು ಪ್ರಸಕ್ತ ವರ್ಷದ …

Read More »

ಹಂತ ಹಂತವಾಗಿ ಅಭಿವೃದ್ಧಿಯತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರ : ಚನ್ನರಾಜ ಹಟ್ಟಿಹೊಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ

ಹಂತ ಹಂತವಾಗಿ ಅಭಿವೃದ್ಧಿಯತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರ : ಚನ್ನರಾಜ ಹಟ್ಟಿಹೊಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ ಹಿರೆಬಾಗೇವಾಡಿ (ಬೆಳಗಾವಿ) : ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು, ಕ್ಷೇತ್ರದಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಶೈಕ್ಷಣಿಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಸಂಕಲ್ಪ ಮತ್ತು ಭರವಸೆಯನ್ನು ಈಡೇರಿಸುವ ದಿಸೆಯಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಇಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭದ ಮೂಲಕ …

Read More »

ಅಮೇರಿಕಾದಲ್ಲಿ ಡಬಲ್ ಡಿಗ್ರಿ ಪಡೆದು ಅಜ್ಜನ ಕನಸು ನನಸಾಗಿಸಿದ ಮೊಮ್ಮಗ

ಅಮೇರಿಕಾದಲ್ಲಿ ಡಬಲ್ ಡಿಗ್ರಿ ಪಡೆದು ಅಜ್ಜನ ಕನಸು ನನಸಾಗಿಸಿದ ಮೊಮ್ಮಗ ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ಅಂಜಲಿ ಮತ್ತು ಹೇಮಂತ್ ನಿಂಬಾಳ್ಕರ್ ಬೆಳಗಾವಿ ಖಾನಾಪೂರದ ಮಾಜಿ ಶಾಸಕಿ ಡಾ.ಅಂಜಲಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರ ಸುಪುತ್ರ ಮಲ್ಹಾರ್ ಹೇಮಂತ್ ನಿಂಬಾಳ್ಕರ್ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ & ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್’ನಲ್ಲಿ ಡಬಲ್ ಪದವಿ ಪಡೆದುಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿರುವ ಗೋಲ್ಡನ್ …

Read More »

ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ: ಕಠಿಣವಾದ ಪರಿಶ್ರಮ,ಶ್ರಧ್ದೆಯಿಂದ ಕಾಯಕದಲ್ಲಿ ತೋಡಗಿದರೆ ಯಶಸ್ಸು ನಿಶ್ಚಿತ,ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೇವೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ‌ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ‌ಅತೀ ಹೆಚ್ಚು ಅಂಕ ಪಡೆದ ಚಿಕ್ಕೋಡಿ ‌ಶೈಕ್ಷಣಿಕ ಜಿಲ್ಲಾ ಮಟ್ಟದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ …

Read More »

ಬೆಳಗಾವಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರ ಬಂಧನ

ಬೆಳಗಾವಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರ ಬಂಧನಬೆಳಗಾವಿಯ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರನ್ನು ಬಂಧಿಸಿದ ಪೊಲೀಸರು ಒಟ್ಟು 34,250 ರೂಪಾಯಿ ಮೌಲ್ಯದ 694 ಗ್ರಾಂ ಗಾಂಜಾ, ಒಂದು ಕಾರ್, ಒಂದು ಬೈಕ್ ಮತ್ತು 5 ಮೊಬೈಲ್’ಗಳನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರದ ಶೌರ್ಯ ಸರ್ಕಲ್ ಬಳಿ ಗಾಂಜಾ …

Read More »

ಪರಿಸರ ಶುಚಿತ್ವ ಪ್ರತಿಯೊಬ್ಬರ ಧ್ಯೇಯವಾಗಿರಲಿ; ಜಿ.ಎಸ್. ಪಾಟೀಲ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ

ಪರಿಸರ ಶುಚಿತ್ವ ಪ್ರತಿಯೊಬ್ಬರ ಧ್ಯೇಯವಾಗಿರಲಿ; ಜಿ.ಎಸ್. ಪಾಟೀಲ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ ನೀರು, ಗಾಳಿ, ಭೂಮಿ, ಗುಡ್ಡ, ಬೆಟ್ಟಗಳು, ವನ್ಯಜೀವಿಗಳು ಪರಿಸರದ ಸಂರಕ್ಷಕಗಳು. ಅವುಗಳ ಶುಚಿತ್ವ ನಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲೆಂದರಲ್ಲಿ ಕಸ,ಕಡ್ಡಿಗಳನ್ನು ಎಸೆಯುವದು, ಮಲಿನತೆಗೊಳಿಸಿ ಪರಿಸರಕ್ಕೆ ಧಕ್ಕೆ ಮಾಡುವದು ಅನಾಗರಿಕತನದ ಅನಾವರಣ ಎಂದು ಪರಿಸರ ಪ್ರೇಮಿ, ಬೆಳಗಾವಿ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಜಿ ಎಸ್ ಪಾಟೀಲ ಹೇಳಿದರು. ಧರ್ಮ ಪತ್ನಿ ನಿತ್ಯಮಂಗಲ ರೊಂದಿಗೆ ಆಗಮಿಸಿದ್ದ ಅವರು ಶನಿವಾರ …

Read More »

ಪ್ರೀತಿಸಿ ಮದುವೆಯಾದ ನನ್ನ ಹೆಂಡತಿ ಜೊತೆ ಬದುಕಲು ಬಿಡುತ್ತಿಲ್ಲ ಗಂಡನ ಅಳಲು

ಪ್ರೀತಿಸಿ ಮದುವೆಯಾದ ನನ್ನ ಹೆಂಡತಿ ಜೊತೆ ಬದುಕಲು ಬಿಡುತ್ತಿಲ್ಲ ಗಂಡನ ಅಳಲು ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆ ಹೆಂಡತಿ ಮನೆಯವರು ಬಿಡುತ್ತಿಲ್ಲ ಎಂದು ನಿರಂಜನ್ ಎಂಬ ಯುವಕನ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಮಾದ್ಯಮ ಮುಂದೆ ಮಾತನಾಡಿದ ಗಂಡ ನಿರಂಜನ. ನನ್ನ ಹೆಂಡತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ನನ್ನ ಹೆಂಡತಿ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಮೊದಲು ಕರೆದುಕೊಂಡು ಹೋಗಿದ್ದರು. ಆದರೆ ನನ್ನ ಹೆಂಡತಿ ಮರಳಿ ಬಂದಿರಲ್ಲಿಲ್ಲ. ಕಳೆದ ಎರಡು …

Read More »

ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿ ಬಲಗೈ ಕಳೆದುಕೊಂಡಿದ್ದ ಯೋಧನ ನಿವೃತ್ತಿ ಗೋಕಾಕ ತಾಲೂಕಿನಲ್ಲಿ ಯೋಧನಿಗೆ ಅದ್ಧೂರಿ ಸನ್ಮಾನ

ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿ ಬಲಗೈ ಕಳೆದುಕೊಂಡಿದ್ದ ಯೋಧನ ನಿವೃತ್ತಿ ಗೋಕಾಕ ತಾಲೂಕಿನಲ್ಲಿ ಯೋಧನಿಗೆ ಅದ್ಧೂರಿ ಸನ್ಮಾನ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯೂ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಭಾಗಿಯಾಗಿ ಬಲಗೈ ಕಳೆದುಕೊಂಡು ಇಂದು ನಿವೃತ್ತಿ ಹೊಂದಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿಗೆ ಮರಳಿದ ಯೋಧನನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಇತ್ತಿಚೆಗೆ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯೂ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಭಾಗಿಯಾಗಿ ಬಲಗೈ ಕಳೆದುಕೊಂಡು ಇಂದು ನಿವೃತ್ತಿ ಹೊಂದಿ …

Read More »

ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಜೂ.17ರಂದು ರಾಜ್ಯ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಕಾಲ್ತುಳಿತ ದುರಂತ ಸಂಬಂಧ ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಜೂನ್ 17ರಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಗೋಪಾಲಯ್ಯ, “ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬಿಜೆಪಿ ಹೋರಾಟ ನಡೆಸಲಿದೆ. ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮತ್ತು ಸಿಎಂ ನಿವಾಸ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನಸೌಧದಲ್ಲಿ ನಡೆದಿದ್ದು ಸನ್ಮಾನ ಕಾರ್ಯಕ್ರಮ ಅಲ್ಲ, ಅವಮಾನ ಮಾಡುವ …

Read More »

ಅಂಕೋಲಾದಲ್ಲಿ ಮನೆವರೆಗೂ ಬಂದು ಚಿರತೆ ದಾಳಿ

ಕಾರವಾರ: ನಿರ್ಮಾಣ ಹಂತದ ಹೊಸ ಮನೆ ಸೇರಿಕೊಂಡಿದ್ದ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾ.ಪಂ.ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ನಡೆದಿದೆ. ಸಂತೋಷ್​ ಹೂವಣ್ಣ ಗೌಡ (24) ಎಂಬವರು ಗಾಯಗೊಂಡಿದ್ದಾರೆ. ಮನೆಯ ಪಕ್ಕದ ಹೊಸ ಮನೆಯಲ್ಲಿ ಚಿರತೆ ಅವಿತುಕೊಂಡಿತ್ತು. ಅಲ್ಲಿ ಒಣ ಹಾಕಿದ್ದ ಬಟ್ಟೆ ತರಲು ಹೋದ ಯುವತಿ ಚಿರತೆಯನ್ನು ಕಂಡು ಕಿರುಚುತ್ತಾ ಓಡಿ ಹೊರಬಂದಿದ್ದು, ಚಿರತೆಯೂ ಹೊರಗೆ ಬಂದಿದೆ. ಅದೇ ಕ್ಷಣದಲ್ಲಿ ಸಂತೋಷ್​ ಗೌಡ ಕೂಡ …

Read More »