ಮಕ್ಕಳು ಆಟವಾಡುವಾಗ ಎಷ್ಟೇ ಎಚ್ಚರಿಕೆಯಿಂದಿದ್ದರೂ ಕಡಿಮೆಯೇ. ಇಲ್ಲೋರ್ವ ಬಾಲಕ ಜೋಕಾಲಿ ಆಡುತ್ತಿದ್ದಾಗ ಜೋಕಾಲಿಗೆ ಕಟ್ಟಿದ್ದ ಸೀರೆ ಕತ್ತಿಗೆ ಸುತ್ತಿಕೊಂಡು ಬಾಲಕ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಇಲ್ಲಿನ ಕೋನಬೇವು ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಹುಲ್ ಬಾವಿಹಳ್ಳಿ ಮೃತ ಬಾಲಕ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ತೆಲಗಿ ನಿವಾಸಿಯಾಗಿದ್ದ ಬಾಲಕ ರಾಹುಲ್ ಅಜ್ಜಿಯ ಮನೆಗೆ ಬಂದಿದ್ದ. ಈ ವೇಳೆ ಜೋಕಾಲಿ ಆಡಲು ಹೋಗಿ ದುರಂತಕ್ಕೀಡಾಗಿದ್ದಾನೆ.
Read More »Monthly Archives: ಅಕ್ಟೋಬರ್ 2025
ಪತ್ನಿ ದೈಹಿಕ ಸಂಪರ್ಕಹೊಂದಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಪತ್ನಿ ದೈಹಿಕ ಸಂಪರ್ಕಹೊಂದಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಈ ಘಟನೆ ನಡೆದಿದೆ. ಮಾರಮ್ಮ ಪತಿಯಿಂದ ಕೊಲೆಯಾದ ಮಹಿಳೆ. ಸಂಗಪ್ಪ ಪತ್ನಿಯನ್ನೇ ಕೊಲೆಗೈದ ಪತಿ.ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯನ್ನೇ ಕೊಲೆಗೈದಿದ್ದಾನೆ. ಪತ್ನಿ ಹತ್ಯೆ ಬಳಿಕ ಸಂಗಪ್ಪ ಪೊಲೀಸ್ ಠಾಣೆಗೆ ಬಂಧು ಶರಣಾಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Read More »ಹುಕ್ಕೇರಿ ತಾಲೂಕಿನ 41 ಪಿಕೆಪಿಎಸ್ ಮತದಾರರ ಸಭೆ ಹುಕ್ಕೇರಿಗೆ ರಾಜೇಂದ್ರ ಪಾಟೀಲ ಅಭ್ಯರ್ಥಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ
ಹುಕ್ಕೇರಿ ತಾಲೂಕಿನ 41 ಪಿಕೆಪಿಎಸ್ ಮತದಾರರ ಸಭೆ ಹುಕ್ಕೇರಿಗೆ ರಾಜೇಂದ್ರ ಪಾಟೀಲ ಅಭ್ಯರ್ಥಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ ಬೆಳಗಾವಿ- ಇದೇ ತಿಂಗಳು ನಡೆಯುವ ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಹುಕ್ಕೇರಿ ತಾಲೂಕಿನಿಂದ ರಾಜೇಂದ್ರ ಪಾಟೀಲ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಘೋಷಿಸಿದರು. ಮಂಗಳವಾರದಂದು ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ಹುಕ್ಕೇರಿ ತಾಲೂಕಿನ 41 ಪಿಕೆಪಿಎಸ್ ಗಳ …
Read More »ಮುಚ್ಚುವ ಹಂತದಲ್ಲಿದ್ದ ಕಾರ್ಖಾನೆ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿಯ ಪಥದಲ್ಲಿ
ನಿಪ್ಪಾಣಿ: ಮುಚ್ಚುವ ಹಂತದಲ್ಲಿದ್ದ ಕಾರ್ಖಾನೆ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇದಕ್ಕೆಲ್ಲ ನಮ್ಮ ಕಾರ್ಖಾನೆಯ ಸಿಬ್ಬಂದಿಯ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮವೆ ಕಾರಣ. ಅವರೇ ನಮ್ಮ ಶಕ್ತಿ, ಅವರಿಗೆ ದಸರಾ ಮತ್ತು ದೀಪಾವಳಿ ಹಬ್ಬಕ್ಕಾಗಿ ಒಂದು ತಿಂಗಳಿನ ಬೋನಸ್ ನೀಡಲು ನಮ್ಮ ಆಡಳಿತ ಮಂಡಳಿ ತಿರ್ಮಾನಿಸಿದೆ. ಕಳೆದ ೨೫ ವರ್ಷದಲ್ಲಿ ಇದು ಗರಿಷ್ಠ ಬೋನಸ್ ಆಗಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ರವಿವಾರ ನಗರದ ಹೊರವಲಯದಲ್ಲಿರುವ …
Read More »ಪತಿಯ ಮೇಲೆ ಪತ್ನಿ ಕಾದ ಎಣ್ಣೆ ಸುರಿದು ಹತ್ಯೆಗೆ ಯತ್ನ?
ಪತಿಯ ಮೇಲೆ ಪತ್ನಿ ಕಾದ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಭಾಷ್ ಪಾಟೀಲ್ (55) ಮೇಲೆ ಪತ್ನಿ ವೈಶಾಲಿ ಕಾದ ಎಣ್ಣೆ ಸುರಿದಿದ್ದಾಳೆ. ಸುಭಾಷ್ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಭಾಷ್ ಸಿಲಿಂಡರ್ ವಿತರಣೆ ಕೆಲಸ ಮಾಡುತ್ತಿದ್ದರು. ಪತ್ನಿ ವೈಶಾಲಿಗೆ ಪತಿ ಮೇಲೆ ಅನುಮಾನ. ಪತಿ ಬೇರೆ ಮಹಿಳೆ ಜೊತೆ ಅನಿಅತಿಕ ಸಂಬಂಧ ಹೊಂದಿರುವ …
Read More »ಸಮಾಜ ಸಂಘಟನೆಗೆ ಕುಮಾರ ಶ್ರೀಗಳ ಕೊಡುಗೆ ಅಪಾರ: ಗುರುಸಿದ್ಧ ಸ್ವಾಮೀಜಿ
ಸಮಾಜ ಸಂಘಟನೆಗೆ ಕುಮಾರ ಶ್ರೀಗಳ ಕೊಡುಗೆ ಅಪಾರ: ಗುರುಸಿದ್ಧ ಸ್ವಾಮೀಜಿ ಬೆಳಗಾವಿ: ಸಮಾಜ ಸಂಘಟನೆಗೆ ಕುಮಾರ ಶ್ರೀಗಳ ಕೊಡುಗೆ ಅಪಾರವಾಗಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಿ ಐಕ್ಯತೆ ಸಾಧಿಸಿ ಶೈಕ್ಷಣಿಕ ಸಾಮಾಜಿಕ ಕ್ರಾಂತಿ ಮಾಡಿದರು. ಹೀಗಾಗಿ ಹಾನಗಲ್ ಕುಮಾರ ಶಿವಯೋಗಿಗಳು ನಿತ್ಯ ಪ್ರಾತಃ ಸ್ಮರಣೀಯರು ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು. ಕಾರಂಜಿಮಠದಲ್ಲಿ ದಿನಾಂಕ 6-10-2025ರಂದು ಜರುಗಿದ 292ನೇ ಶಿವಾನುಭವ ಮತ್ತು ಹಾನಗಲ್ ಕುಮಾರ ಶಿವಯೋಗಿಗಳ 158ನೇ ಜಯಂತಿ ಕಾರ್ಯಕ್ರಮದ …
Read More »ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್; ರಾಜ್ಯಮಟ್ಟಕ್ಕೆ ಆಯ್ಕೆ
ಶಿರಸಿಯ ಪ್ರಾಚಿ ನಾಯಕಗೆ ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್; ರಾಜ್ಯಮಟ್ಟಕ್ಕೆ ಆಯ್ಕೆ ಶಿರಸಿ: ಉತ್ತರ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಶಿರಸಿಯ ಮಾರಿಕಾಂಬಾ ಕಾಲೇಜಿನ ವಿದ್ಯಾರ್ಥಿನಿ ಪ್ರಾಚಿ ಮಂಜುನಾಥ ನಾಯಕ ಇವರು ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪ್ರಾಚಿ, ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಹಾಗೂ ಒಂದು ವಿಭಾಗದಲ್ಲಿ …
Read More »ಸಿನಿಮಾ ಮಾಡುವುದಾಗಿ ನಂಬಿಸಿ ನಟಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ಸಿನಿಮಾ ಮಾಡುವುದಾಗಿ ನಂಬಿಸಿ ನಟಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ನಿವಾಸಿ ಹೇಮಂತ್ ಕುಮಾರ್ (34) ಬಂಧಿತ. ಕಿರುತೆರೆ ನಟಿ ಹಾಗೂ ಬಿಗ್ಬಾಸ್ನ ಓಟಿಟಿ ಸ್ಪರ್ಧಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಿರುತೆರೆಯಲ್ಲಿ ನಟಿಸುತ್ತಿರುವ ನಟಿಗೆ 2022ರಲ್ಲಿ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯವಾದ ಆರೋಪಿ ತಾನು ರಿಚ್ಚಿ ಎಂಬ ಸಿನಿಮಾ ಮಾಡುತ್ತಿದ್ದು, ಅದರಲ್ಲಿ …
Read More »ಈ ಬಾರಿ ನಾಡಿನ ಹೆಸರಾಂತ ವ್ಯಕ್ತಿಯಿಂದ ಕಿತ್ತೂರು ಉತ್ಸವ ಉದ್ಘಾಟನೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ಪ್ರತಿ ವರ್ಷದಂತೆ ಈ ಬಾರಿಯೂ ಅಕ್ಟೋಬರ್ 23, 24 ಮತ್ತು 25ರಂದು ಮೂರು ದಿನಗಳ ಕಾಲ ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಸಲ ನಾಡಿನ ಹೆಸರಾಂತ ವ್ಯಕ್ತಿಯ ಕೈಯಿಂದ ಉತ್ಸವ ಉದ್ಘಾಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಚನ್ನಮ್ಮನ ಕಿತ್ತೂರಿನಲ್ಲಿ ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಶಾಸಕರು, ಜಿಲ್ಲಾಧಿಕಾರಿಗಳು ಸೋಮವಾರ ಸಭೆ ಮಾಡಿದ್ದಾರೆ. ಇದಾದ …
Read More »ಕೇವಲ ಕಿತ್ತೂರು ಉತ್ಸವ ಆಚರಿಸದೇ, ಕಿತ್ತೂರು ಅಭಿವೃದ್ಧಿಗೂ ಸ್ವಲ್ಪ ಯೋಚಿಸಿ….: ರಾಜಯೋಗಿಂದ್ರ ಸ್ವಾಮಿಜೀ
ಕೇವಲ ಕಿತ್ತೂರು ಉತ್ಸವ ಆಚರಿಸದೇ, ಕಿತ್ತೂರು ಅಭಿವೃದ್ಧಿಗೂ ಸ್ವಲ್ಪ ಯೋಚಿಸಿ…. ಅಭಿವೃದ್ಧಿಯ ವಿಷಯದಲ್ಲಿ ತಾಯಿ-ಮಗನನ್ನು ಅಗಲಿಸದಿರಿ…; ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಕಿತ್ತೂರು ಉತ್ಸವ ಆಚರಣೆಯೊಂದಿಗೆ ಅಭಿವೃದ್ಧಿಯನ್ನು ಕೈಗೊಳ್ಳಿ ಅಭಿವೃದ್ಧಿಯ ವೇಳೆ ತಾಯಿ-ಮಗನನ್ನು ಅಗಲಿಸದಿರಿ…; ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಕೇವಲ ಕಿತ್ತೂರು ಉತ್ಸವವನ್ನು ಆಚರಿಸದೇ ಚೆನ್ನಮ್ಮನ ನಾಡು ಕಿತ್ತೂರು ಅಭಿವೃದ್ಧಿಗೆ ಮುಂದಾದರೇ ಕಿತ್ತೂರು ಉತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ. ಅಭಿವೃದ್ಧಿಯ ವೇಳೆ ತಾಯಿ ಮತ್ತು ಮಗನನ್ನು ಅಗಲಿಸುವುದು ಸರಿಯಲ್ಲವೆಂದು ಕಿತ್ತೂರು ಕಲ್ಮಠದ …
Read More »