Breaking News

Monthly Archives: ಆಗಷ್ಟ್ 2025

ಕಾನೂನು ಮೀರಿ ಬಗರ್ ಹುಕುಂ ಅರ್ಜಿ ವಿಲೇವಾರಿ ಇಲ್ಲ:ಕೃಷ್ಣ ಬೈರೇಗೌಡ

ಬೆಂಗಳೂರು: ಬಗರ್ ಹುಕುಂ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಸರ್ಕಾರ ಅಥವಾ ಅಧಿಕಾರಿಗಳು ಕಾನೂನು ಮೀರಿ ನಡೆದಿಲ್ಲ. ಒಂದು ವೇಳೆ ರೈತರಿಗೆ ಅನ್ಯಾಯವಾಗಿದ್ದರೆ ನಮ್ಮ ಗಮನಕ್ಕೆ ತನ್ನಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಇಂದು ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್ ಹುಕುಂ ಸಮಿತಿ ಮುಂದೆ ಅಧಿಕಾರಿಗಳು ಅರ್ಹ ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಎಂಬ ಕಾನೂನು ಇದೆ. …

Read More »

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ

ಗಂಗಾವತಿ (ಕೊಪ್ಪಳ): ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಬಿಡಲಾಗುತ್ತಿದೆ. ಹೀಗಾಗಿ, ಯಾವುದೇ ಕ್ಷಣದಲ್ಲಿ ತಾಲೂಕಿನ ಕಂಪ್ಲಿ ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಹಾಗೂ ರಸ್ತೆ ಸಂಚಾರದ ಹಿತದೃಷ್ಟಿಯಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಶ್ವನಾಥ್ ಅವರು ಈಗಾಗಲೇ ಗಂಗಾವತಿ ಗ್ರಾಮೀಣ ಪೊಲೀಸರಿಗೆ …

Read More »

ವಿವಿಧ ಬೇಡಿಕೆ ಈಡೇರಿಕೆಗೆ ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ!!

ವಿವಿಧ ಬೇಡಿಕೆ ಈಡೇರಿಕೆಗೆ ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ!! ಕನಿಷ್ಠ ವೇತನ ತಿಂಗಳಿಗೆ 36 ಸಾವಿರಕ್ಕೆ ಆಗ್ರಹ ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ ಹೊರಗುತ್ತಿಗೆ ನೌಕರರ ಬೆಳಗಾವಿ ಜಿಲ್ಲಾ ಘಟಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಜಾರಿಗೆ ತಂದಿರುವ ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸೋಮವಾರ …

Read More »

ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ!! ನಾಲ್ಕು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ

ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ!! ನಾಲ್ಕು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ ಸೋಮವಾರ ಜರುಗಿದ ಸ್ಥಾಯಿ ಸಮಿತಿ ಚುನಾವಣೆ ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಮೇಯರ ಹಾಗೂ ಉಪಮೇಯರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ ಯಾರಿಗೂ ಮನಸ್ತಾಪ ಬಾರದ ಹಾಗೆ ಮತ್ತು ಸಮಾನ ನ್ಯಾಯ ಕೊಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಅವಿರೋಧವಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. …

Read More »

ಆರ್ಟಿಫೀಷಿಯಲ್ ಟೆಕ್ನಾಲಜಿ ಪೊಟೋ ಗ್ರಾಫಿ ಕ್ಷೇತ್ರಕ್ಕೂ ಕಾಲಿಟ್ಟಿದೆ: ರೋಟರಿ ಕಾರ್ಯದರ್ಶಿ ಶಶಿಕಾಂತ ನಾಯಿಕ!!

ಆರ್ಟಿಫೀಷಿಯಲ್ ಟೆಕ್ನಾಲಜಿ ಪೊಟೋ ಗ್ರಾಫಿ ಕ್ಷೇತ್ರಕ್ಕೂ ಕಾಲಿಟ್ಟಿದೆ: ರೋಟರಿ ಕಾರ್ಯದರ್ಶಿ ಶಶಿಕಾಂತ ನಾಯಿಕ!! ಬೆಳಗಾವಿಯಲ್ಲಿ ವಿಶ್ವ ಪೊಟೋ ದಿನಾಚರಣೆ ಆರ್ಟಿಫೀಷಿಯಲ್ ಟೆಕ್ನಾಲಜಿ ಪೊಟೋ ಗ್ರಾಫಿ ಕ್ಷೇತ್ರಕ್ಕೂ ಕಾಲಿಟ್ಟಿದೆ ರೋಟರಿ ಕಾರ್ಯದರ್ಶಿ ಶಶಿಕಾಂತ ನಾಯಿಕ ಅಭಿಮತ ಛಾಯಾಗ್ರಾಹಕರೂ ಕಾಲಕ್ಕೆ ತಕ್ಕಂತೆ ಅಪಗ್ರೆಡ್ ವಾಗಬೇಕು ಮೊದಲಿಗಿಂತಲೂ ತಂತ್ರಜ್ಞಾನ ಬಹಳಷ್ಟು ಬೆಳೆದಿದ್ದು, ಈಗ ಆರ್ಟಿಫೀಷಿಯಲ್ ಟೆಕ್ನಾಲಜಿ ಪೊಟೋ ಗ್ರಾಫಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಮುಂದಿನ ಪೀಳಿಗೆಗೆ ಉಳಸಿಕೊಂಡು ಹೋಗಬೇಕಾಗಿದೆ ಎಂದು ರೋಟರಿ ಕಾರ್ಯದರ್ಶಿ ಶಶಿಕಾಂತ ನಾಯಿಕ …

Read More »

ಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ 10 ಕೋಟಿ ರೂಪಾಯಿ ಮೀಸಲು- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ 10 ಕೋಟಿ ರೂಪಾಯಿ ಮೀಸಲು- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲು ಉತ್ಪಾದಕ ಸಹಕಾರಿ ಸಂಘಗಳ ರೈತರಿಗೆ 6 ಕೋಟಿ ರೂಪಾಯಿ ವೆಚ್ಚದ ರಬ್ಬರ್ ಮ್ಯಾಟ್, ವಿದ್ಯುತ್ ಚಾಲಿತ 2 ಹೆಚ್.ಪಿ. ಮೇವು ಕತ್ತರಿಸುವ ಯಂತ್ರಗಳು, ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ- ಜಿಲ್ಲಾ ಹಾಲು ಒಕ್ಕೂಟಕ್ಕೆ …

Read More »

ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತ ರೋಹಿಣಿ ಅಜ್ಜಿ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾಳೆ.

ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಬೆಳಗಾವಿ ಜಿಲ್ಲೆಯ ಬೆಳವಟ್ಟಿ ಗ್ರಾಮದ ಯುವತಿ ಸಾವನ್ನಪ್ಪಿ ಆಕೆಯ ತಾಯಿ ಮತ್ತು ಮಾವ ಗಾಯಗೊಂಡ ದುರ್ಘಟನೆಯು ಭಾನುವಾರ ಸಂಜೆ ಬಿಜಗರ್ಣಿ-ಬೆಳವಟ್ಟಿ ರಸ್ತೆಯ ಕವಳೆವಾಡಿ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಯುವತಿಯನ್ನು ಬೆಳವಟ್ಟಿಯ ನಿವಾಸಿ, 18 ವರ್ಷದ ರೋಹಿಣಿ ರಾಮಲಿಂಗ ಚೌಗುಲೆ ಎಂದು ಗುರುತಿಸಲಾಗಿದೆ. ಆಕೆಯ ತಾಯಿ ಲಕ್ಷ್ಮೀ ರಾಮಲಿಂಗ ಚೌಗುಲೆ (45) ಮತ್ತು ಚಂದಗಡ ತಾಲೂಕಿನ ತುಡಯೇ …

Read More »

ಬೆಳಗಾವಿಯಲ್ಲಿ ಚರಂಡಿ ನೀರು ಮನೆಗಳ ಮುಂದೆ:ಚರಂಡಿ ಸ್ವಚ್ಛಗೊಳಿಸಲು ನಾಗರೀಕರ ಆಗ್ರಹ!!

ಬೆಳಗಾವಿಯಲ್ಲಿ ಚರಂಡಿ ನೀರು ಮನೆಗಳ ಮುಂದೆ:ಚರಂಡಿ ಸ್ವಚ್ಛಗೊಳಿಸಲು ನಾಗರೀಕರ ಆಗ್ರಹ!! ಚರಂಡಿ ನೀರು ಮನೆಗಳ ಮುಂದೆ ಹರಿಯುತ್ತಿರುವುದ್ದರಿಂದ ನಾಗರೀಕರು ಸಂಚರಿಸಲು ಹರ ಸಾಹಸ ಪಡಬೇಕಾಗಿದೆ. ಚರಂಡಿ ಸ್ವಚ್ಛತೆಗೆ ನಾಗರೀಕರು ಒತ್ತಾಯಿಸಿದ್ದಾರೆ. ಬೆಳಗಾವಿ ಮಹಾನಗರದ ವಾರ್ಡ ಸಂಖ್ಯೆ 25ರಲ್ಲಿ ಬರುವ ಸದಾಶಿವ ನಗರದ ಕೊನೆಯ ಬಸ್ ನಿಲ್ದಾಣದ ಪ್ರದೇಶದಲ್ಲಿ ಕಳೆದ ಐದಾರು ದಿನಗಳಿಂದ ಜಿಟಿ, ಜಿಟ್ಟಿಯಾಗಿ ಸುರಿಯುತ್ತಿರುವ ಮಳೆಯಿಂದ ನಾಗರೀಕರು ಹೊಬರದ ಸ್ಥಿತಿಯಲ್ಲಿದ್ದರೆ. ಕಸ ಕಡ್ಡಿಗಳಿಂದ ತುಂಬಿರುವ ಚರಂಡಿಗಳಿಂದ ನೀರು ಸುಮಗವಾಗಿ …

Read More »

ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ:ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಯಕ್ಸಂಬಾ-ಚಿಕ್ಕೋಡಿ ರಸ್ತೆಯಿಂದ ದೇಸಾಯಿ, ಪಟೇಲ, ಮಾನೆ ತೋಟದ ರಸ್ತೆ ಸುಧಾರಣೆ ಮತ್ತು ಹಳ್ಳಕ್ಕೆ ಬ್ರಿಜ್ ನಿರ್ಮಾಣಕ್ಕೆ ರೂ 2 ಕೋಟಿ 30 ಲಕ್ಷ ಅನುದಾನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಹಿರೇಕೊಡಿ ಗ್ರಾಮದ ದೇಸಾಯಿ, ಪಟೇಲ ತೋಟದ …

Read More »

ಶ್ರಾವಣ ಮಾಸದ ಕೊನೆಯ ಸೋಮವಾರ,ಯಡೂರ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ

ಶ್ರಾವಣ ಮಾಸದ ಕೊನೆಯ ಸೋಮವಾರ,ಯಡೂರ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ ಚಿಕ್ಕೋಡಿ: ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆಯಲು ಭಕ್ತರ ದಂಡವೇ ಹರಿದು ಬಂದಿತ್ತು. ದಕ್ಷಿಣದ ಕಾಶೀ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಸುಕ್ಷೇತ್ರ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ಹಾಗೂ ಭದ್ರಕಾಳಿದೇವಿಯ ದರ್ಶನವನ್ನು ಭಕ್ತರು ಸಾಲಿನಲ್ಲಿ ನಿಂತು ಶಾಂತಿಯುತವಾಗಿ ದರ್ಶನವನ್ನು ಪಡೆದುಕೊಂಡರು. ಕರ್ನಾಟಕ,ಮಹಾರಾಷ್ಟ್ರ,ಆಂದ್ರಪ್ರದೇಶದ ಸೇರಿದಂತೆ …

Read More »