ಬಂಜಾರಾ ಸಮುದಾಯ ಭವನಕ್ಕೆ ಭೂಮಿ ಒದಗಿಸಿ; ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಬೆಳಗಾವಿಯಲ್ಲಿ ಹೆಚ್ಚಾಗಿರುವ ಬಂಜಾರಾ ಸಮಾಜ ಶುಭ ಸಮಾರಂಭಗಳಿಗೆ ಸಮುದಾಯ ಭವನದ ಅವಶ್ಯಕತೆ ಬಂಜಾರಾ ಸಮುದಾಯ ಭವನಕ್ಕೆ ಭೂಮಿ ಒದಗಿಸಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಬಂಜಾರಾ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು 1 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಬಂಜಾರಾ ಜನ ಅಭಿವೃದ್ಧಿ …
Read More »Daily Archives: ಜುಲೈ 9, 2025
ಮೊಬೈಲ್ ಅಪ್ಲಿಕೇಶನ್ ಮೂಲಕ ನಕಲಿ ಜ್ಯೋತಿಷಿಯಿಂದ 20 ಲಕ್ಷ ರೂ. ಮೌಲ್ಯದ ಚಿನ್ನ ಕಳೆದುಕೊಂಡ ಯುವತಿ;
ಹಾವೇರಿ: ಅಂತರ್ಜಾಲದಲ್ಲಿ ಹಲವು ಬಗೆಯ ವಂಚನೆಗಳು ನಡೆಯುತ್ತಲೇ ಇರುತ್ತವೆ. ಹಿಂದೆಲ್ಲ ಮನೆಗೆ ಬ್ಯಾಂಕ್ಗಳಿಗೆ ಹಣ ಸಾಗಿಸುವ ವಿಷಯ ತಿಳಿದು ದಾಳಿ ಮಾಡುತ್ತಿದ್ದ ಖದೀಮರು ಇದೀಗ ಅಂತರ್ಜಾಲದ ಮೂಲಕ ಜನರ ಹಣ ದೋಚುತ್ತಿದ್ದಾರೆ. ಇದೇ ರೀತಿಯ ಘಟನೆಯೊಂದು ಹಾವೇರಿಯಲ್ಲಿ ನಡೆದಿದೆ. ಭವಿಷ್ಯವನ್ನು ತಿಳಿದು ಕೊಳ್ಳಲು ತನ್ನ ಮೊಬೈಲ್ನಲ್ಲಿ ಅಪ್ಲಿಕೇಶನ್ ಡೌನಲೋಡ್ ಮಾಡಿಕೊಂಡ ಯುವತಿಯೊಬ್ಬಳು ಬರೋಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳೆದುಕೊಂಡಿದ್ದಾಳೆ. ಜ್ಯೋತಿಷ್ಯ ಸಂಬಂಧಿತ ಅಪ್ಲಿಕೇಶನ್ ಡೌನಲೋಡ್ ಮಾಡಿ ಮಾಹಿತಿ ಪಡೆಯಲು …
Read More »ಬೆಳಗಾವಿಯಲ್ಲಿ ಡೆತ್ ನೋಟ್ ಬರೆದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಚಿಂತಾಜನಕ
ಬೆಳಗಾವಿ: ಒಂದೇ ಕುಟುಂಬದ ಮೂವರು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಬೆಳಗಾವಿಯಲ್ಲಿ ಖಾಸಭಾಗದಲ್ಲಿ ಇಂದು ಬೆಳಗ್ಗೆ ನಡೆದಿದೆ. ಖಾಸಬಾಗದ ಜೋಶಿ ಮಾಳದ ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ಕೂಡಿಕೊಂಡು ಬೆಳಿಗ್ಗೆ 9ಗಂಟೆ ಸುಮಾರಿಗೆ ವಿಷ ಸೇವಿಸಿರುವ ಮಾಹಿತಿ ಲಭ್ಯವಾಗಿದ್ದು, ಇದರಲ್ಲಿ ಮೂವರು ಮೃತಪಟ್ಟರೆ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಂಗಳಾ ಕುರಡೇಕರ್ (70) ಇವರ ಪುತ್ರ ಸಂತೋಷ ಕುರಡೇಕರ್ (44), ಪುತ್ರಿ ಸುವರ್ಣ ಕುರಡೇಕರ್(42) ಮೃತ ದುರ್ದೈವಿಗಳು. …
Read More »ಬೆಳಗಾವಿ ಜಿಲ್ಲಾ ವಿದ್ಯಾರ್ಥಿಗಳಿಗೆ ಧಾರವಾಡ ಐಐಟಿ ಪ್ರವಾಸ
ಬೆಳಗಾವಿ: ಐಐಟಿಯ ಆಧುನಿಕ ತಂತ್ರಜ್ಞಾನ ಸಂಶೋಧನೆಗಳು, ಹೊಸ ಕಲಿಕೆಯ ಅವಕಾಶ, ಅನ್ವೇಷಣೆಗಳು, ಅಲ್ಲಿನ ಪರಿಸರದಿಂದ ವಿದ್ಯಾರ್ಥಿಗಳಲ್ಲಿ ಹೊಸ ದೃಷ್ಟಿ ಮೂಡಬೇಕು. ಐಐಟಿ ಸೇರಬೇಕೆಂಬ ಹಾಗು ಹೊಸ ನಾವೀನ್ಯತೆಗೆ ಮುಂದಾಗಲು ಪ್ರೇರೇಪಿಸುವ ಉದ್ದೇಶದಿಂದ ಜಿಲ್ಲೆಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳನ್ನು ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕಾಗಿ ಧಾರವಾಡ ಐಐಟಿಗೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಕಳುಹಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ …
Read More »12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಬಾಗಲಕೋಟೆಯ ಯುವಕ ಸೈಕಲ್ ಏರಿ ಹೊರಟ
ಬಾಗಲಕೋಟೆ ಯುವಕ ಪೃಥ್ವಿ ಅಂಬಿಗೇರ್ ಸಾಹಸ ಪ್ರವಾಸ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಬಾಗಲಕೋಟೆಯ ಯುವಕ ಸೈಕಲ್ ಏರಿ ಹೊರಟಿದ್ದು, ಎಂ.ಲ್.ಸಿ ಪಿ.ಎಚ್. ಪುಜಾರ್ ಯುವಕನ ಸೈಕಲ್ ಯಾತ್ರೆಗೆ ಚಾಲನೆ ನೀಡಿ, ಶುಭ ಹಾರೈಸಿದ್ದಾರೆ. ಬಾಗಲಕೋಟೆ ನಗರದ ಯುವಕ ಪೃಥ್ವಿ ಅಂಬಿಗೇರ್ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ಮಹತ್ವಾಕಾಂಕ್ಷಿಯ ಸೈಕಲ್ ಯಾತ್ರೆಗೆ ಹೊರಡಿದ್ದಾರೆ. ಸಾವಿರಾರು ಕಿಲೋಮೀಟರ್ ದೂರವಿರುವ ಜ್ಯೋತಿರ್ಲಿಂಗ ಸ್ಥಳಗಳಿಗೆ ಸೈಕಲ್ ಮೂಲಕ ಪ್ರವಾಸ ಮಾಡುವ ಸಾಹಸಿಕ ನಿರ್ಧಾರ ಕೈಗೊಂಡಿದ್ದಾನೆ. ಪೃಥ್ವಿಗೆ …
Read More »ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ
ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಡಾ. ಆನಂದ.ಕೆ ಅವರನ್ನು ವಿಜಯಪುರ ಜಿಲ್ಲಾಧಿಕಾರಿ ಆಗಮಿಸಿದ್ದಾರೆ. ಇನ್ನು ಟಿ. ಭೂಬಾಲನ್ ಕಳೆದ ಎರಡು ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿ ಹಲವಾರು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಇದೀಗ್ ಭೂಬಾಲನ್ ಅವರನ್ನು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
Read More »ಮಹಾನಗರ ಪಾಲಿಕೆ ವಿರುದ್ಧ ಆಮ್ ಆದ್ಮಿ ಅಸಮಾಧಾನ
ಮಹಾನಗರ ಪಾಲಿಕೆ ವಿರುದ್ಧ ಆಮ್ ಆದ್ಮಿ ಅಸಮಾಧಾನ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಸಂಬಂಧವಿರದ ದಾಖಲಾತಿಗಳ ಬೇಡಿಕೆಗಳನ್ನ ಇಡದೇ, ಕಡಿಮೆ ದಾಖಲಾತಿಗಳನ್ನು ಪಡೆದು ಇ-ಆಸ್ತಿ ನೋಂದಣಿ ಮಾಡಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ್ ಪಾಟೀಲ್ ಹೇಳಿದರು. ಬೆಳಗಾವಿ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇ-ಆಸ್ತಿ ಮಹತ್ವದ ಪ್ರಕ್ರಿಯೆಯಾಗಿದೆ. ಬೆಂಗಳೂರಿನಲ್ಲಿ ಕೇವಲ 4 ದಾಖಲೆಗಳನ್ನು ಕೇಳುತ್ತಿರುವಾಗ ಬೆಳಗಾವಿಯಲ್ಲಿ ಹತ್ತಾರು ದಾಖಲೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಕಿರಿಕಿರಿಯಾಗುತ್ತಿದೆ. ಸಿಟಿಎಸ್ …
Read More »ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ, 2024-25ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಶಿಕ್ಷಣ ಮತ್ತು ಸಮಯದ ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ; ಡಾ. ಅನುಪಮಾ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 2024-25ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಸಮಾರೋಪ ನಾವು ಸರಿಯಾದ ಸಮಯದಲ್ಲಿ ನಮ್ಮ ಭವಿಷ್ಯದ ನಿರ್ಣಯ ಸ್ವತಃ ತೆಗೆದುಕೊಳ್ಳದಿದ್ದರೇ, ಬೇರೆಯವರು ನಮ್ಮ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ. ಒಂದು ವಿಷಯದ ಕೊನೆ ಹೊಸ ಅಧ್ಯಾಯದ ಆರಂಭವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸಮಯದ ಯೋಜನಾಬದ್ಧ ನಿರ್ಣಯವನ್ನು ಕೈಗೊಂಡು ಸಾರ್ಥಕ ಜೀವನವನ್ನು ನಡೆಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ …
Read More »ಮಧ್ಯರಾತ್ರಿ ಮನೆಗೆ ನುಗ್ಗಿ ದರೋಡೆ ಮಾಡಿದ ಆರೋಪಿಗಳ ಬಂಧನ
ಕಲಬುರಗಿ: ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದಿದ್ದ ಎರಡು ಪ್ರಮುಖ ಅಪರಾಧ ಪ್ರಕರಣಗಳನ್ನು ಸಿನಿಮೀಯ ಶೈಲಿಯಲ್ಲಿ ಭೇದಿಸಲಾಗಿದೆ. ಮಧ್ಯರಾತ್ರಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ದೋಚಿದ್ದ ದರೋಡೆ ಪ್ರಕರಣವನ್ನು ಪತ್ತೆದಾರಿ ಶ್ವಾನ ನೀಡಿದ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೂನ್ 22ರಂದು ಶಹಬಾದ್ ಪಟ್ಟಣದ ಧಕ್ಕಾ ತಾಂಡಾದಲ್ಲಿ ಹಣಮಂತ ಪವಾರ್ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರು, ಮನೆಯವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅವರ ಕೈ-ಕಾಲು ಕಟ್ಟಿ …
Read More »ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ಹೃದಯಾಘಾತದಿಂದ ಸಾವು
ಧಾರವಾಡ: ರಾಜ್ಯದಲ್ಲಿ ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಧಾರವಾಡದ ಪುರೋಹಿತ್ ನಗರದಲ್ಲಿ ಮಂಗಳವಾರ ನಡೆದಿದೆ. ಜೀವಿತಾ ಕುಸಗೂರ (26) ಎಂಬ ಯುವತಿ ಹೃದಯಾಘಾತದಿಂದ ಮೃತಪಟ್ಟವರು. ನಿನ್ನೆ ಬೆಳಗ್ಗೆ ಮನೆಯಲ್ಲಿ ತಲೆ ಸುತ್ತು ಬರುತ್ತಿದೆ ಎಂದು ಯುವತಿ ಸುಸ್ತಾಗಿ ಕುಳಿತಿದ್ದರು. ನಂತರ ಕುಟುಂಬದವರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಮಾರ್ಗ ಮಧ್ಯದಲ್ಲೇ ಯುವತಿ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ …
Read More »