Breaking News

Daily Archives: ಮಾರ್ಚ್ 2, 2025

ಡಬ್ಬಲ್ ಮರ್ಡರ್ ಮಾಡಿ ಜೈಲುಪಾಲಾಗಿದ್ದ ವಿಚಾರಣಾಧೀನ ಖೈದಿ ಜೈಲಿನಲ್ಲಿ ನೇಣಿಗೆ ಶರಣು

ಹಾವೇರಿ, : ವಿಚಾರಣಾಧೀನ ಕೈದಿ ಜೈಲಿನಲ್ಲಿ ನೇಣಿಗೆ ಶರಣಾಗಿರುವಂತಹ (death) ಘಟನೆ ಹಾವೇರಿಯ ಕೆರೆಮತ್ತಿಹಳ್ಳಿ ಬಳಿ ಇರುವ ಜಿಲ್ಲಾಕಾರಾ ಗೃಹದಲ್ಲಿ ನಡೆದಿದೆ. ಕೋಟೆಪ್ಪ ಅಂಬಿಗೇರ್ (42) ನೇಣಿಗೆ ಶರಣಾದ ಖೈದಿ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಕೋಟೆಪ್ಪ ಅಂಬಿಗೇರ್​​ ಸುಮಾರು ಆರುವರೆ ವರ್ಷಗಳ ಹಿಂದೆ ಡಬ್ಬಲ್ ಮರ್ಡರ್ ಮಾಡಿ ಜೈಲು ಪಾಲಾಗಿದ್ದರು. ಹೃದಯ ಸಂಬಂಧಿ ಕಾಯಿಲೆ ಇತ್ತು. ನ್ಯಾಯಾಲಯದಿಂದ ಬೆಲ್ …

Read More »

ಸಿದ್ದರಾಮಯ್ಯ ದಾಖಲೆಯ ಬಜೆಟ್​: ದಿನಾಂಕ, ಸಮಯ ಮತ್ತು ಎಲ್ಲಿ ಲೈವ್ ವೀಕ್ಷಿಸಬೇಕು?

ಬೆಂಗಳೂರು, (ಮಾರ್ಚ್​ 02) : ಕರ್ನಾಟಕ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ (ಮಾರ್ಚ್​ 03) ಆರಂಭವಾಗಲಿದ್ದು, ಮಾರ್ಚ್​ 07ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್​ ಮಂಡನೆ ಮಾಡಲಿದ್ದಾರೆ. ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್‌ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ. ರಾಜ್ಯದಮಟ್ಟಿಗೆ ಅತ್ಯಧಿಕ ಬಜೆಟ್‌ ಮಂಡನೆ ಮಾಡಿರುವ ದಾಖಲೆಯನ್ನು ಈಗಾಗಲೇ ಹೊಂದಿರುವ ಸಿದ್ದರಾಮಯ್ಯ, ಗ್ಯಾರಂಟಿಗಳ ಒತ್ತಡದ ನಡುವೆ ಯಾವ ರೀತಿಯ ಬಜೆಟ್‌ ಮಂಡಿಸಲಿದ್ದಾರೆ. ಯಾವ ಹೊಸ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂಬ …

Read More »

ಗದಗಿನಲ್ಲೊಂದು ಭೀಕರ ಅಪಘಾತ: ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ, ಮೂವರು ದುರ್ಮರಣ

ಗದಗ, : ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ದುರ್ಮರಣ (death) ಹೊಂದಿರುವಂತಹ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ನಿಂಗಪ್ಪ ಮಾದರ, ಯಮನಪ್ಪ ಮತ್ತು ಮಂಜುನಾಥಗೌಡ ಮೃತರು. ಅಪಘಾತದ ಬಳಿಕ ವಾಹನದ ಸಮೇತ ಚಾಲಕ ಎಸ್ಕೇಪ್ ಆಗಿದ್ದಾನೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದ ಮೊಮ್ಮಗ-ಅಜ್ಜಿ ಸಾವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಣಿ ಮೈಸೂರು …

Read More »

135 ಸೀಟು ಕೊಟ್ಟಿರುವುದು ನಟ್​​ ಬೋಲ್ಟ್ ರಿಪೇರಿ ಮಾಡುವುದಕ್ಕಲ್ಲ:H.D.K.

ಬೆಂಗಳೂರು: ”ನಟ್​ ಬೋಲ್ಟ್ ರಿಪೇರಿ ಮಾಡಲು ಬಹಳ ಜನ ಇದ್ದಾರೆ. ರಾಜ್ಯದ ಜನತೆ ಇವರಿಗೆ 135 ಸೀಟು ಕೊಟ್ಟಿರುವುದು ರಿಪೇರಿ ಮಾಡುವುದಕ್ಕಲ್ಲ, ರಾಜ್ಯದ ಜನರ ಸಮಸ್ಯೆ ಆಲಿಸುವುದಕ್ಕೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ”ಡಿ. ಕೆ. ಶಿವಕುಮಾರ್ ಬಹುಶಃ ಭೂಮಿ ಮೇಲಿಲ್ಲ ಅನಿಸುತ್ತದೆ. ಅಧಿಕಾರ ಹಾಗೆ ಮಾತನಾಡಿಸುತ್ತಿದೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಒಳ್ಳೆಯದು” ಎಂದು …

Read More »

ಬೆಳಗಾವಿಯಲ್ಲಿ 4ನೇ ಚುಟುಕು ಸಾಹಿತ್ಯ ಸಮ್ಮೇಳನ

ಬೆಳಗಾವಿಯಲ್ಲಿ 4ನೇ ಚುಟುಕು ಸಾಹಿತ್ಯ ಸಮ್ಮೇಳನ ಸಾಹಿತ್ಯಲೋಕಕ್ಕೆ ಬೆಳಗಾವಿ ಸಾಹಿತಿಗಳ ಕೊಡುಗೆ ಅಪಾರ; ಚುಟುಕು ಕವಿ ಅಪ್ಪಾಸಾಹೇಬ್ ಅಲಿಬಾದಿ ಬೆಳಗಾವಿಯಲ್ಲಿ 4ನೇ ಚುಟುಕು ಸಾಹಿತ್ಯ ಸಮ್ಮೇಳನ ಸಾಹಿತ್ಯಲೋಕಕ್ಕೆ ಬೆಳಗಾವಿ ಸಾಹಿತಿಗಳ ಕೊಡುಗೆ ಅಪಾರ ಹಲವು ಶತಮಾನಗಳಿಂದ ಬೆಳಗಾವಿಯಲ್ಲಿದೆ ಕನ್ನಡ-ಮರಾಠಿಗರ ಬಾಂಧವ್ಯ ಚುಟುಕು ಕವಿ ಅಪ್ಪಾಸಾಹೇಬ್ ಅಲಿಬಾದಿ ಅಭಿಪ್ರಾಯ ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ಬಾಂಧವ್ಯತೆ ಹಲವು ಶತಮಾನಗಳ ಹಿಂದಿನದ್ದಾಗಿದ್ದು, ಕುಂದಾನಗರಿಯೂ ಸಾಹಿತ್ಯ ಲೋಕಕ್ಕೆ ಹಲವಾರು ಸಾಹಿತಿ, ಚುಟುಕು ಸಾಹಿತಿಗಳನ್ನು …

Read More »

ದಯಾಮರಣ ಕಾನೂನು ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ

ದಾವಣಗೆರೆ: ಎಚ್.ಬಿ. ಕರಿಬಸಮ್ಮ 85 ವರ್ಷದ ವೃದ್ಧೆ. 30 ವರ್ಷಗಳ ಕಾಲ ಶಾಲಾ ಮಕ್ಕಳಿಗೆ ಒಳ್ಳೆಯ ಗುರುವಾಗಿ ನೀತಿ ಪಾಠ ಮಾಡಿ ನಿವೃತ್ತಿ ಆಗಿರುವ ಶಿಕ್ಷಕಿ. 24 ವರ್ಷಗಳ ಹಿಂದೆ ತಾನು ಅನುಭವಿಸಿದ ನರಕಯಾತನೆಗೆ ಮುಕ್ತಿ ಬಯಸಿದ್ದ ಎಚ್.ಬಿ. ಕರಿಬಸಮ್ಮ ಅವರು ಕಾನೂನಿನಡಿ ಘನತೆಯಿಂದ ಮರಣ ಹೊಂದುವ ಹಕ್ಕು ಸಿಗಬೇಕೆಂದು ಹೋರಾಡಿದವರಲ್ಲಿ ಇವರೂ ಒಬ್ಬರು. ಕೇಂದ್ರ ಸರ್ಕಾರ ದಯಾಮರಣಕ್ಕೆ ಸಂಬಂಧಿಸಿದಂತೆ ಕಾನೂನಿನಡಿ ಮಾರ್ಗಸೂಚಿಗಳನ್ನು ತಯಾರು ಮಾಡುವಂತೆ ಆಯಾಯ ರಾಜ್ಯಗಳಿಗೆ ಸೂಚನೆ ನೀಡಿದೆ. …

Read More »

ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಪತ್ನಿ ಹೆಸರಿನಲ್ಲಿ ₹ 9,99,999 ದೇಣಿಗೆ ನೀಡಿದ ಡಿಸಿಎಂ

ಉಡುಪಿ : ಡಿಸಿಎಂ ಡಿ. ಕೆ ಶಿವಕುಮಾರ್ ಅವರಿಂದು ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ತಮ್ಮ ಪತ್ನಿ ಹೆಸರಿನಲ್ಲಿ ದೇವಸ್ಥಾನಕ್ಕೆ 9,99,999 ರೂ. ದೇಣಿಗೆ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವರು ವರ-ಶಾಪ ಕೊಡಲ್ಲ, ಅವಕಾಶ ಮಾತ್ರ ಕೊಡ್ತಾನೆ. ಮಾತೃಭೂಮಿ, ಭೂತಾಯಿ, ದೇವಿ ದರ್ಶನ ಮಾಡುವ ಅವಕಾಶ ಸಿಕ್ಕಿದೆ ಎಂದರು. ನಮ್ಮ ಧರ್ಮವನ್ನ ನಾವು ಕಾಪಾಡಬೇಕು. ಯಾರು ಯಾರಿಗೂ ತೊಂದರೆ …

Read More »

ಬಸ್ಸಿನ ಟೈರ್​​ ಸ್ಫೋಟ 100 ಮೀಟರ್‌ಗೂ ಹೆಚ್ಚು ತೆವಳಿಕೊಂಡು ಹೋಗಿ ನಿಂತ. ಬಸ್

ಗಂಗಾವತಿ(ಕೊಪ್ಪಳ): ಚಲಿಸುತ್ತಿದ್ದ ಕೆಕೆಆರ್‌ಟಿಸಿ ಬಸ್ಸಿನ ಮುಂಭಾಗದ ಟೈರ್​​ ಸ್ಫೋಟಗೊಂಡ ಘಟನೆ ದಾಸನಾಳದ ಹೊರವಲಯದಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಬಸ್ಸ​ನ್ನು ಚಾಲಕ ಹತೋಟಿಗೆ ತಂದು 20 ಪ್ರಯಾಣಿಕರ ಜೀವ ಕಾಪಾಡಿದ್ದಾರೆ. ಗಂಗಾವತಿ ಸಾರಿಗೆ ಘಟಕಕ್ಕೆ ಸೇರಿದ ಬಸ್​​ ಕೊಪ್ಪಳದಿಂದ ಗಂಗಾವತಿಯತ್ತ ಸಂಚರಿಸುತ್ತಿದ್ದಾಗ ಮುಂದಿನ ಚಕ್ರ ಸ್ಫೋಟಗೊಂಡಿದೆ. ಚಾಲಕ ಮಂಜುನಾಥ ಗಾಣಿಗೇರ ತಕ್ಷಣ ಬಸ್ಸನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ ಬಸ್​​ ಸುಮಾರು 100 ಮೀಟರ್‌ಗೂ ಹೆಚ್ಚು ತೆವಳಿಕೊಂಡು ಹೋಗಿ ನಿಂತಿದೆ. “ಟೈರ್​ …

Read More »

ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದ ಮಹಿಳೆ ಹೊಟ್ಟೆಯಲ್ಲಿತ್ತು 5 ಕೆ.ಜಿ ಗೆಡ್ಡೆ

ದೊಡ್ಡಬಳ್ಳಾಪುರ: ಹೊಟ್ಟೆನೋವು ಎಂದು 45 ವರ್ಷದ ಮಹಿಳೆಯೊಬ್ಬರು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದು, ತಪಾಸಣೆ ನಡೆಸಿದ ವೈದ್ಯರು ಆಕೆಯ ಉದರದಲ್ಲಿದ್ದ 5 ಕೆ.ಜಿ ಗೆಡ್ಡೆಯನ್ನು ಹೊರತೆಗೆದಿದ್ದಾರೆ. ದೊಡ್ಡಬಳ್ಳಾಪುರ ನಗರದ 45 ವರ್ಷದ ಮಹಿಳೆ ಕಳೆದ ಮೂರು ತಿಂಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಆಕೆ, ವೈದ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಡಾ.ಅರ್ಚನಾ ಅವರು ಪರೀಕ್ಷೆ ನಡೆಸಿದ್ದು, ಸ್ಕ್ಯಾನಿಂಗ್​ನಲ್ಲಿ ಹೊಟ್ಟೆಯಲ್ಲಿ 5 ಕೆ.ಜಿ ಗಾತ್ರದ ಗೆಡ್ಡೆ ಇರುವುದು …

Read More »

ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ವಂಚಿಸಿದ ಆರೋಪಿಯನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ: ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ವಂಚಿಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಚಂದ್ರಪ್ಪ ಶಿವಪ್ಪ ತೋಟದ ಬಂಧಿತ ಆರೋಪಿ. ಹೆಚ್ಚು ಲಾಭ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಹಾಕಿಸಿಕೊಂಡು ಚಂದ್ರಪ್ಪ ಮೋಸ ಮಾಡುತ್ತಿದ್ದ ಎಂದು ಹಾವೇರಿ ನಗರದ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಾನಗಲ್ ತಾಲೂಕಿನ ಶೀಗಿಹಳ್ಳಿ ಗ್ರಾಮದ ಮನೋಜ ಹಾದಿಮನಿ ಎಂಬವರು ದೂರು ನೀಡಿದ್ದರು. ಷೇರು ಮಾರುಕಟ್ಟೆಯಲ್ಲಿ ಹಣ …

Read More »