ಕೊನೆಯ ಬಾರಿಗೆ ಡೀಸೆಲ್ ಇಂಜಿನ್ ಮೂಲಕ ಪ್ರಯಾಣ ಮುಗಿಸಿದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು KSR ಬೆಂಗಳೂರು ನಿಂದ ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿ, ಮಿರಜ್, ಸಾಂಗ್ಲಿ ಗೆ ನಿತ್ಯ ಹೊರಡುವ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ತನ್ನ ಡೀಸೆಲ್ ಇಂಜಿನ್ ಮೂಲಕ ಕೊನೆಯ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೀಗ, ಈ ರೈಲು ಸಂಪೂರ್ಣವಾಗಿ ವಿದ್ಯುತ್ ಇಂಜಿನ್ ಮೂಲಕ ಚಲಿಸುವ ಪ್ರಗತಿಶೀಲ ಹಂತವನ್ನು ಅನುಸರಿಸುತ್ತಿದೆ. ಈ ಪರಿವರ್ತನೆ ತಾಂತ್ರಿಕ ನಾವೀನ್ಯತೆ ಮತ್ತು …
Read More »Yearly Archives: 2024
ಸಿಎಂ ಸಿದ್ದರಾಮಯ್ಯ ತಮ್ಮ ಕೊನೆಯ ದಿನಗಳನ್ನು ಎನಿಸುತ್ತಿದ್ದಾರೆ.;ವಿಜಯೇಂದ್ರ
ಸಿಎಂ ಸಿದ್ದರಾಮಯ್ಯ ತಮ್ಮ ಕೊನೆಯ ದಿನಗಳನ್ನು ಎನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಅವರ ಕೊನೆಯ ಅಧಿವೇಶನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭವಿಷ್ಯ ನುಡಿದರು. ಅವರು ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಸಭೆಯ ಕುರಿತು ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬೆಳಗಾವಿಗೆ ಆಗಮಿಸಿ ಇಲ್ಲಿನ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಈ ರಾಜ್ಯದ ರೈತರನ್ನ ಹಾಗೂ ಉತ್ತರ ಕರ್ನಾಟಕವನ್ನು …
Read More »ಪುರೋಹಿತ್ ಫುಡ್ ಪ್ಲಾಜಾ ಎದುರು ಅಸ್ವಚ್ಚತೆ 5,000 ದಂಡವನ್ನು ವಿಧಿಸಿದ ಆಯುಕ್ತರಾದ ಶುಭಾ. ಬಿ
ಬೆಳಗಾವಿ ಉದ್ಯಮಬಾಗ ಪ್ರದೇಶದಲ್ಲಿ ಅಸ್ವಚ್ಛತೆಯನ್ನ ನಿರ್ಮಿಸಿದ್ದ ಅಂಗಡಿಕಾರನಿಗೆ ಮಹಾನಗರ ಪಾಲಿಕೆಯು 5,000 ದಂಡವನ್ನು ವಿಧಿಸಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ. ಬಿ ಅವರು ಇಂದು ಸಿ ಟಿ ರೌಂಡ್ ನಡೆಸುತ್ತಿದ್ದಾಗ, ಉದ್ಯಮಬಾಗ ಪ್ರದೇಶದಲ್ಲಿರುವ ಪುರೋಹಿತ್ ಫುಡ್ ಪ್ಲಾಜಾ ಎದುರು ಅಸ್ವಚ್ಚತೆ ಪಸರಿಸಿರುವುದನ್ನ ಕಂಡು ಅಂಗಡಿಕಾರನನ್ನು ತರಾಟೆಗೆ ತೆಗೆದುಕೊಂಡರು. ನಂತರ ಅಂಗಡಿಕಾರನಿಗೆ 5,000ಗಳ ತಂಡವನ್ನು ವಿಧಿಸಿದರು. ಪ್ರತಿದಿನ ಬೆಳಗಿನ ಜಾವ ಬರುವ ಬೆಳಗಾವಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಗಂಟೆ …
Read More »ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷ ಆರ್.ಕೆ.ಪಾಟೀಲ (58) ನಿಧನರಾಗಿದ್ದಾರೆ.
ಬೆಳಗಾವಿ : ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷ ಆರ್.ಕೆ.ಪಾಟೀಲ (58) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ನಿಧನ ಹೊಂದಿದ್ದಾರೆ. ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸಕ್ರಿಯರಾಗಿದ್ದರು.
Read More »ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮತ್ತೆರಡು ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ
ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಟಗಾರರಿಗೆ ಅನುಕೂಲವಾಗುವಂತೆ ಮತ್ತೆರಡು ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಮಾಡುವ ಉದ್ದೇಶದಿಂದ ಇಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ, ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ, ಯುವನಾಯಕರಾದ ರಾಹುಲ ಜಾರಕಿಹೊಳಿ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
Read More »ನ್ಯಾಯವಾದಿಯ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ವಿಜಯಪುರ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ
ನ್ಯಾಯವಾದಿಯ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ವಿಜಯಪುರ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ ನಿನ್ನೆಯ ದಿನ ಕಣ್ಣಾನ್ ವಕೀಲರು ಇವರ ಮೇಲೆ ನಡೆದ ಮತ್ತು ಅವರ ಅನುಮಾನಸ್ಪದ ಸಾವಿಗೆ ಕಾರಣರಾದವರನ್ನು ಮತ್ತು ಇಂತಹ ಹೀನ ಕೃತ್ಯಕ್ಕೆ ಸಹಕರಿಸಿ ಸಹಕಾರ ಕೊಟ್ಟವರನ್ನು ದಂಡನೀಯವಾಗಿ ಶಿಕ್ಷಿಸಲು ಮತ್ತು ಖಂಡಿಸಲು ವಿಜಯಪುರ ನ್ಯಾಯವಾದಿಗಳ ಸಂಘವು ಉಗ್ರವಾಗಿ ಖಂಡಿಸುತ್ತಾ ದುರ್ಘಟನೆಯ ಬಗ್ಗೆ ಕಾರಣರಾದವರನ್ನು ಬಂದಿಸಿ ಶಿಕ್ಷಿಸಬೇಕೆಂದು ಇಂದು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ …
Read More »ಬೆಳಗಾವಿಯ ಮಹೇಶ್ ಫೌಂಡೇಶನ್ ಅವರ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್‌ನ ನೂತನ ರಕ್ತ ಸಂಗ್ರಹಣಾ ಮತ್ತು ಸಾರಿಗೆ ವಾಹನವನ್ನು ಇಂದು ಉದ್ಘಾಟಿಸಿ,ಶುಭ ಹಾರೈಸಿದೆ.
ಬೆಳಗಾವಿಯ ಮಹೇಶ್ ಫೌಂಡೇಶನ್ ಅವರ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್‌ನ ನೂತನ ರಕ್ತ ಸಂಗ್ರಹಣಾ ಮತ್ತು ಸಾರಿಗೆ ವಾಹನವನ್ನು ಇಂದು ಉದ್ಘಾಟಿಸಿ, ಫೌಂಡೇಶನ್ ಅವರ ಸಾಮಾಜಿಕ ಚಿಂತನೆಯ ಈ ಮಹತ್ವದ ಹೆಜ್ಜೆಯನ್ನು ಶ್ಲಾಘಿಸಿ ಶುಭ ಹಾರೈಸಿದೆ. ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಿ, ಅವಶ್ಯಕತೆ ಇದ್ದ ಕಡೆ ಸಾಗಿಸುವ ಫೌಂಡೇಶನ್ ಅವರ ಸಾಮಾಜಿಕ ಕಾರ್ಯಕ್ಕೆ ಈ ವಾಹನ ಸಹಕಾರಿಯಾಗಲಿದೆ ಮತ್ತು ಅಗತ್ಯವಿರುವ ರೋಗಿಗಳಿಗೆ ಸಕಾಲಿಕ ಸಹಾಯ ದೊರಕುತ್ತದೆ ಎಂದು ಭಾವಿಸುತ್ತೇನೆ. ಈ ವೇಳೆ …
Read More »ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ
ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಆಗಮಿಸಿದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯೂ ಜಿಲ್ಲಾಧಿಕಾರಿಗಳಿಗೆ ಮನಮಿಯನ್ನ ಸಲ್ಲಿಸಿತು. ಈ ವೇಳೆ ಇನ್ ನ್ಯೂಸ್ ನೊಂದಿಗೆ ಮಾತನಾಡಿದ ಸಂಘಟನೆಯ ಪ್ರಮುಖರಾದ ಸುಭಾಷ್ ರಾಮಚಂದ್ರ ಜಾಧವ್ ಅವರು ಮುಂದಿನ ತಿಂಗಳ ಡಿಸೆಂಬರ್ 12 ರಿಂದ ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ. …
Read More »ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಸಿಎಂ
ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಅಲ್ಪಾವಧಿ ಕೃಷಿ ಸಾಲದ ಮಿತಿ ಹೆಚ್ಚಿಸುವಂತೆ ಮನವಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, 2024-25ರ ಆರ್ಥಿಕ ವರ್ಷದಲ್ಲಿ ಅಲ್ಪಾವಧಿ ಕೃಷಿ ಸಾಲಗಳ (ಎಸ್‌ಎಒ) ಮಿತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿದರು. ನಬಾರ್ಡ್‌ನ ಕೃಷಿ ಸಾಲವನ್ನು ಶೇ.58 ಕಡಿತ ಮಾಡಿರುವುದರಿಂದ ರಾಜ್ಯದ ರೈತರಿಗೆ ಬಹುದೊಡ್ಡ ಸಂಕಷ್ಟ ಎದುರಾಗಿದೆ, ಹಾಗಾಗಿ ಈ ಸಾಲದ ಮಿತಿಯನ್ನು ಹೆಚ್ಚಿಸಿ ರೈತರ …
Read More »ರೈತರು ಬೆಳೆದ ಭತ್ತಕ್ಕೆ 3 ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸವಂತೆ ಆಗ್ರಹ
ರೈತರು ಬೆಳೆದ ಭತ್ತಕ್ಕೆ 3 ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದರು. ಮುಂಗಾರು ಹಂಗಾಮಿನಲ್ಲಿ ಸತತವಾಗಿ ಬಂದ ಮಳೆಗೆ ಹಾನಿಯಾದ …
Read More »