Breaking News

Yearly Archives: 2024

ಅಂಜಲಿ ನಿಂಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅನಂತ್ ಕುಮಾರ್ ಹೆಗಡೆ

ಬೆಳಗಾವಿ, ಮಾ.8: ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಚುನಾವಣೆಗೆ ಸ್ಪರ್ಧಿಸಿದರೆ ಎಂದರೆ ಕರಿಮಣಿ ಮಾಲೀಕ ನಾನಲ್ಲಾ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಕಾಂಗ್ರೆಸ್​ನಲ್ಲಿದ್ದ ಪದಾಧಿಕಾರಿಗಳು ಹೋಗಿ ನೀವು ನಿಲ್ಲಿರಿ ಅಂದರೆ ಕರಿಮನಿ ಮಾಲೀಕ ನಾನಲ್ಲಾ ಎಂದು …

Read More »

ನೀರಾವರಿ ಭರವಸೆ ನೀಡಿದರೆ ಕರ್ನಾಟಕಕ್ಕೆ ಸೇರಲು ಸಿದ್ಧ ಎಂದ ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗ

ಬೆಳಗಾವಿ, : ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗವು ಬೆಳಗಾವಿಯ (Belagavi) ಅಥಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಭೇಟಿಯಾಗಿ ನೀರಿನ ಸಮಸ್ಯೆ ಸರಿಪಡಿಸುವಂತೆ ಮನವಿ ಪತ್ರವನ್ನು ಸಲ್ಲಿಸದೆ. ನೀರಾವರಿ ಭರವಸೆ ನೀಡಿದರೆ ಕರ್ನಾಟಕಕ್ಕೆ ಸೇರಲು ಸಿದ್ಧ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರದ ಗಡಿ ಗ್ರಾಮಗಳ ಹೊಲಗಳಿಗೆ ರಾಜ್ಯದ ನೀರಾವರಿ ಯೋಜನೆಗಳಿಂದ ಸ್ವಲ್ಪ ನೀರು ಬಿಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ದಯವಿಟ್ಟು ನಮಗೆ ನೀರು ಕೊಡಿ …

Read More »

ಅಸಲಿಗೆ ರಾಜಕೀಯವೆಂದರೆ ಕುತಂತ್ರ, ಒಬ್ಬರು ಮತ್ತೊಬ್ಬರನ್ನು ತುಳಿಯುವುದು ಎಲ್ಲ ಪಕ್ಷಗಳಲ್ಲಿ ನಡೆಯುತ್ತದೆ :ಸತೀಶ್ ಜಾರಕಿಹೊಳಿ,

ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ದಲಿತ ಮುಖ್ಯಮಂತ್ರಿಗಾಗಿ (Dalit CM) ಬೇಡಿಕೆ ಇಂದು ನಿನ್ನೆಯದಲ್ಲ, ದಶಕಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು. ಈ ವಿಷಯದಲ್ಲಿ ತಮ್ಮ ಪಕ್ಷ 99 ರವರೆಗೆ ಬಂದು ಔಟಾಗಿಬಿಡುತ್ತದೆ, ಸೆಂಚುರಿ (century) ಬಾರಿಸಲ್ಲ ಎಂದು ನಗುತ್ತಾ ಹೇಳಿದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಮತ್ತೊಮ್ಮೆ ತೇಲಿಬಿಟ್ಟಿರುವುದರಿಂದ ದಲಿತ ಸಿಎಂ ವಿಷಯವನ್ನು ಮುನ್ನೆಲೆಗೆ ತರಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ …

Read More »

ರಸ್ತೆ ಅಪಘಾತದಲ್ಲಿ ಮರಿ ಮಂಗ ಸಾವು

ಘಟನೆ ನೋಡಿದ ಇನ್ನಿತರೆ ವಾಹನ ಸವಾರರು ಅಪಘಾತ ಮಾಡಿ, ಮರಿ ಕೋತಿಯ ಸಾವಿಗೆ ಮತ್ತು ತಾಯಿ ಕೋತಿ ಗಾಯಗೊಳ್ಳುವಂತೆ ಮಾಡಿದ ಕಾರು ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದರು. ಅಪಘಾತವಾದ ಬಳಿಕ ಕಾರು ನಿಲ್ಲಿಸಿ ಕೋತಿಯನ್ನ ಆರೈಕೆ ಮಾಡುವ ಕೆಲಸ ಮಾಡಬೇಕಿತ್ತು. ಮೃತಪಟ್ಟಿದ್ದರೆ ಅಂತ್ಯಸಂಸ್ಕಾರ ಆದ್ರೂ ಮಾಡುವ ಕೆಲಸ ಮಾಡಬೇಕಿತ್ತು ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಒಟ್ಟೊಟ್ಟಿಗೆ ಹೊರಟಿದ್ದರು. ಆದರೆ ರಸ್ತೆ ದಾಟುತ್ತಿದ್ದ …

Read More »

ರಾಹುಲ್ ಗಾಂಧಿ​ ನಾಯಿ ತಿನ್ನದ ಬಿಸ್ಕತ್ತು​ ಕಾರ್ಯಕರ್ತರಿಗೆ‌ ನೀಡುತ್ತಾರೆ: ಗೋವಾ ಸಿಎಂ

ಚಿತ್ರದುರ್ಗ, ಮಾರ್ಚ್​ 7: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ (Rahul Gandhi) ನಾಯಿಯನ್ನು ಜತೆಗೆ ಕರೆದೊಯ್ಯುತ್ತಾರೆ. ನಾಯಿ ತಿನ್ನದ ಬಿಸ್ಕತ್ತು ಕಾರ್ಯಕರ್ತರಿಗೆ‌ ನೀಡುತ್ತಾರೆ ಎಂದು ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್​ ವಾಗ್ದಾಳಿ ಮಾಡಿದ್ದಾರೆ. ಲೋಕಸಭಾ ಕ್ಷೇತ್ರದ ಬಿಜೆಪಿ ಭೂತ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯ ಸಂಗತಿ. ರೈತರಿಗೆ ನೀಡುವ ಸಬ್ಸಿಡಿ ಮತ್ತಿತರೆ ಯೋಜನೆಗಳು …

Read More »

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೇದಾರ್

ಧಾರವಾಡ, ಮಾ.07: ಜಿಲ್ಲೆಯ ಕಲಘಟಗಿ ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಭೂ ನ್ಯಾಯ ಮಂಡಳಿ ಆದೇಶದಂತೆ ಖಾತೆ ಬದಲಿಸಿಕೊಡಲು ರೈತ ಮಲ್ಲಿಕಾರ್ಜುನ ಕುರುಬರ ಎಂಬಾತನ ಬಳಿ 45 ಸಾವಿರ ರೂ. ಲಂಚ ಪಡೆಯುವಾಗ ಕಲಘಟಗಿ ತಹಶೀಲ್ದಾರ್ ಕಚೇರಿ ಶಿರಸ್ತೆದಾರ ಸುರೇಶ್ ಅಡವಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Read More »

ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಬಸವಕಲ್ಯಾಣದಲ್ಲಿ ಸನ್ಮಾನ

ಬೀದರ್: ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪಟ್ಟಣದ ಥೇರ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಬಸವಕಲ್ಯಾಣ ಅನುಭವ ಮಂಟಪ ವಿಶ್ವಬಸವ ಧರ್ಮ ಟ್ರಸ್ಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಮಾಡಲಾಯಿತು.

Read More »

ಭದ್ರಾಮೇಲ್ದಂಡೆ ಯೋಜನೆ | ಬೇಡಿಕೆ ಈಡೇರಿಸದಿದ್ದರೆ ಬಿಜೆಪಿ ವಿರುದ್ಧ ಮತ

ಚಿತ್ರದುರ್ಗ. ಮಾ.07 : ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಕಳೆದ 33 ದಿನಗಳಿಂದ ಜಿಲ್ಲಾ ಪಂಚಾಯಿತಿ ಎದುರು ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದರು. ಧರಣಿ ಸ್ಥಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1974 ರಲ್ಲಿದ್ದಂತ ಬರಗಾಲ ಈಗ ಮತ್ತೆ ಎದುರಾಗಿದೆ. ಭದ್ರಾಮೇಲ್ದಂಡೆ ವಿಚಾರವಾಗಿ …

Read More »

ಪತ್ನಿ, ಮಕ್ಕಳು ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

ಕನಕಪುರ: ಆಸ್ತಿಗಾಗಿ ನಿಂಗಪ್ಪ ಎಂಬುವರನ್ನು ಅಪಹರಿಸಿ ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿದ್ದ ಆತನ ಪತ್ನಿ, ಮೂವರು ಮಕ್ಕಳು, ನಾಲ್ವರು ಸುಪಾರಿ ಹಂತಕರು ಸೇರಿದಂತೆ 8 ಅಪರಾಧಿಗಳಿಗೆ ಇಲ್ಲಿನ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ. ಅಪರಾಧಿಗಳಾದ ಆತನ ಪತ್ನಿ ರತ್ನಮ್ಮ, ಪುತ್ರ ಅಬಿಷೇಕ್ ಅಲಿಯಾಸ್ ಅಭಿ, ಪುತ್ರಿಯರಾದ ಶಿಲ್ಪಾ, ಪುಷ್ಪಾ ಹಾಗೂ ಸುಪಾರಿ ಹಂತಕರಾದ ರೌಡಿ ಶೀಟರ್ ಕೇಶವಮೂರ್ತಿ ಅಲಿಯಾಸ್ …

Read More »

ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ;

ಚಿಕ್ಕಮಗಳೂರು: ಹಣಕ್ಕಾಗಿ ಹೆತ್ತ ತಾಯಿಯೇ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಚಿಕ್ಕಮಗಳೂರು ವಿಶೇಷ ಕೋರ್ಟ್ ಬಾಲಕಿಯ ತಾಯಿ ಸೇರಿ ನಾಲ್ವರು ದೋಷಿಗಳು ಎಂದು ತೀರ್ಪು ಪ್ರಕಟಿಸಿದೆ. ಚಿಕ್ಕಮಗಳೂರಿನ ತ್ವರಿತ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದ್ದು, 53 ಜನರ ಪೈಕಿ 49 ಜನರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.ನಾಲ್ವರನ್ನು ದೋಷಿಗಳು ಎಂದು ಕೋರ್ಟ್ ತಿಳಿಸಿದೆ.   ಈ ಮೂಲಕ ಸಲ್ಮಾನ್ ಅಭಿ, ಸಂತ್ರಸ್ತೆ ತಾಯಿ ಗೀತಾ, ಗಿರೀಶ್, ದೇವಿ …

Read More »